ಭಾರತದ ಅತಿ ಎತ್ತರದ ರೈಲು ನಿಲ್ದಾಣ – ಘುಮ್
ಎತ್ತರದ ಡಾರ್ಜಿಲಿಂಗ್ ಬೆಟ್ಟಗಳ ಮೇಲೆ ನೆಲೆಗೊಂಡಿರುವ ಘುಮ್ ರೈಲ್ವೆ ನಿಲ್ದಾಣವು ಡಾರ್ಜಿಲಿಂಗ್ ಹಿಮಾಲಯನ್ ರೈಲ್ವೆಗೆ ಒಂದು ಪ್ರಮುಖ ನಿಲ್ದಾಣವಾಗಿದೆ. ಈ ನಿಲ್ದಾಣವು 2,257 ಮೀ (7,405 ಅಡಿ) ಎತ್ತರದಲ್ಲಿದೆ, ಇದು ಭಾರತದ ಅತ್ಯುನ್ನತ ರೈಲ್ವೆ ನಿಲ್ದಾಣ ಮತ್ತು ವಿಶ್ವದ 14 ನೇ ಅತಿ ಎತ್ತರದ ರೈಲ್ವೆ ನಿಲ್ದಾಣವಾಗಿದೆ. ಅತ್ಯುನ್ನತ ಸ್ಥಾನದ ಹೊರತಾಗಿ, ಘುಮ್ ವಿಶ್ವದ ಅತ್ಯಂತ ಸುಂದರವಾದ ರೈಲು ನಿಲ್ದಾಣಗಳಲ್ಲಿ ಒಂದಾಗಿದೆ. ಅಂದ್ಹಾಗೆ ಚೀನಾದ ಸ್ವಾಯತ್ತ ಟಿಬೆಟ್ ಪ್ರದೇಶದ ತಂಗುಲ ರೈಲ್ವೆ ನಿಲ್ದಾಣವು ವಿಶ್ವದ ಅತಿ ಎತ್ತರದ ರೈಲು ನಿಲ್ದಾಣವಾಗಿದೆ. ಇದು 5,068 ಮೀ (16,627 ಅಡಿ) ಎತ್ತರದಲ್ಲಿದೆ.
ಸುಮಾರು 164 ವರ್ಷಗಳ ಹಿಂದೆ ಪಶ್ಚಿಮ ಬಂಗಾಳದ ಜನ ಮೊದಲ ಬಾರಿಗೆ ರೈಲಿನಲ್ಲಿ ಪ್ರಯಾಣಿಸಿದ್ದರು.. ಇಂದು ರೈಲುಗಳು , ಅಲ್ಲಿನ ಜನರ ಜೀವನದ ಅವಿಭಾಜ್ಯ ಅಂಗವಾಗಿದೆ. ಕೇವಲ ಪಶ್ಚಿಮ ಬಂಗಾಳ ಮಾತ್ರವೇ ಅಲ್ಲ.. ಇತರೇ ಬಹುತೇಕ ರಾಜ್ಯಗಳು ಕೇವಲ ಸಾರಿಗೆಯ ವ್ಯವಸ್ತೆ ಅನ್ನೋದಕ್ಕಿಂತ ಲಕ್ಷಾಂತರ ಜನರ ಜೀವನದ ಅವಿಭಾಜ್ಯ ಅಂಗವೇ ಆಗಿದೆ.. ಫ್ಲಾಟ್ ಫಾರ್ಮ್ ಅಂಗಡಿಗಳು ಹೋಟೆಲ್ ಗಳು , ಕೂಲಿ ಕಾರ್ಮಿಕರು , ಟೀ ಬಿಸ್ಕೆಟ್ ಸ್ನಾಕ್ಸ್ ಮಾಡುವವರಿಂದ ಹಿಡಿದು ಟ್ಯಾಕ್ಸಿ ಆಟೋ ಚಾಲಕರು ರೈಲುನಿಲ್ದಾಣಗಳನ್ನೇ ಅವಲಂಬಿತರಾಗಿ ಬದುಕು ಕಟ್ಟಿಕೊಂಡಿದ್ದಾರೆ. ಇನ್ನೂ ರೈಲು ನಿಲ್ದಾಣಗಳು ಅದ್ರಲ್ಲೂ ನಿಗೂಢತೆ ಅಥವ ರಹಸ್ಯಗಳು ಹಾಗೂ ವಿಭಿನ್ನತೆಗಳಿಂದ ಕೂಡಿದ ರೈಲು ನಿಲ್ದಾಣಳ ಬಗ್ಗೆ ನಾವೇನಾದರೂ ಮಾತನಾಡಿದ್ರೆ ಮೊದಲಿಗೆ ಪಶ್ಚಿಮ ಬಂಗಾಳವೇ ನೆನಪಾಗೋದು.. ಕಾರಣ ಇಲ್ಲಿನ ಕೆಲ ರೈಲು ನಿಲ್ದಾಣಗಳು ಸಾಕಷ್ಟು ರಹಸ್ಯಮಯವಾಗಿದೆ.. ಕೆಲವೊಂದು ವಿಭಿನ್ನವಾಗಿದೆ.. ಅದರದ್ದೇ ಆದ ವಿಶೇಷತೆಗಳಿಂದ ಗುರುತಿಸಿಕೊಂಡಿದೆ…
ಪಶ್ಚಿಮ ಬಂಗಾಳದ ಅನೇಕ ಭಾರತೀಯ ರೈಲ್ವೆ ನಿಲ್ದಾಣಗಳು ತಮ್ಮದೇ ಆದ ವಿಶಿಷ್ಟ ವ್ಯಕ್ತಿತ್ವವನ್ನು ಹೊಂದಿವೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.








