ಮಳೆ ಬಂತು ಮಳೆ.. ಕೊಚ್ಚಿ ಹೋಯ್ತು ಬೆಳೆ Rain
ಹಾವೇರಿ : ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ತಂದೊಡ್ಡಿದ್ದ ವರದಾ,ಧರ್ಮಾ, ಕುಮುಧ್ವತಿ ಮತ್ತು ತುಂಗಭದ್ರಾ ನದಿಗಳು ಸದ್ಯ ಅಬ್ಬರ ತಗ್ಗಿಸಿವೆ. ಆದ್ರೆ ಈ ನಾಲ್ಕು ನದಿಗಳು ಜನರ ಬದುಕನ್ನು ಬೀದಿಗೆ ತಂದು ನಿಲ್ಲಿಸಿವೆ.
ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನದಿಗಳಿಂದಾಗಿ ನೂರಾರು ಎಕರೆ ಜಮೀನಿನಲ್ಲಿ ಬೆಳೆದಿದ್ದ ಬೆಳೆ ನಾಶವಾಗಿದೆ.
ಜಿಲ್ಲೆಯಲ್ಲಿ ಹಲವು ಕುಟುಂಬಗಳನ್ನು ನಿರಾಶ್ರಿತರನ್ನಾಗಿ ಮಾಡಿವೆ. ಇನ್ನೊಂದೆಡೆ, ಪ್ರವಾಹದಿಂದ ಜಿಲ್ಲೆಯಲ್ಲಿ ಸಾಕಷ್ಟು ರಸ್ತೆಗಳು ಹಾಳಾಗಿವೆ. ಕೆಲವು ರಸ್ತೆಗಳು ಬಿರುಕುಬಿಟ್ಟಿವೆ.
ಈ ರಸ್ತೆಗಳಲ್ಲಿ ದೊಡ್ಡ ವಾಹನಗಳಿರಲಿ, ದ್ವಿಚಕ್ರ ವಾಹನ ಸಂಚರಿಸುವುದು ಕೂಡಾ ಕಷ್ಟಕರವಾಗಿದೆ. ಇದರಿಂದ ಜನರು ಮತ್ತಷ್ಟು ಸಂಕಷ್ಟ ಅನುಭವಿಸುವಂತಾಗಿದೆ.
ಇತ್ತ ಕೈಗೆ ಬಂದ ಬೆಳೆ ನೀರಿನಲ್ಲಿ ಹೋಮವಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರಿಂದ ಎಕರೆಗೆ ನೂರು ಸಾವಿರದ ಬದಲು ಕನಿಷ್ಟಪಕ್ಷ ಬಿತ್ತನೆ ಬೀಜ, ಗೊಬ್ಬರಕ್ಕಾದರೂ ಸಾಲುವಷ್ಟು ಪರಿಹಾರ ನೀಡಲಿ ಎಂದು ರೈತರು ಮನವಿ ಮಾಡಿಕೊಳ್ಳುತ್ತಿದ್ದಾರೆ.