Calama City | ಈ ಊರಿನಲ್ಲಿ ಮಳೆ ಬಿದ್ದ ದಾಖಲೆಗಳೇ ಇಲ್ಲ
ಭೂಮಿಯ ಮೇಲೆ ಮಳೆಯಾಗದ ಸ್ಥಳವಿದೆ ಎಂದರೆ ನಂಬಲು ಸಾಧ್ಯವಿಲ್ಲವೇ..? ನಂಬಲು ಆಗದಿದ್ದರೂ ನಂಬಲೇಬೇಕು.
ಚಿಲಿಯ ಅಟಕಾಮಾ ಮರುಭೂಮಿಯಲ್ಲಿರುವ ಕ್ಯಾಲಮಾ ಎಂಬ ಪಟ್ಟಣದಲ್ಲಿ ಇಲ್ಲಿಯವರೆಗೆ ಮಳೆಯಾದ ದಾಖಲೆ ಹೊಂದಿಲ್ಲ.

ಆ ಊರಿನಲ್ಲಿ ಒಂದು ಲಕ್ಷದ ಇಪ್ಪತ್ತು ಸಾವಿರ ವರ್ಷಗಳಿಂದ ನದಿಗಳೆಲ್ಲ ಬತ್ತಿ ಹೋಗಿವೆ.
ಮೂರು ಮಿಲಿಯನ್ ವರ್ಷಗಳ ಹಿಂದೆ ಅಟಕಾಮಾ ಪ್ರದೇಶವು ಮರುಭೂಮಿಯಾಗಿತ್ತು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.
ಈ ಪ್ರದೇಶವನ್ನು ಭೂಮಿಯ ಮೇಲಿನ ಅತ್ಯಂತ ಹಳೆಯ ಮರುಭೂಮಿ ಎಂದು ಗುರುತಿಸಲಾಗಿದೆ.