ಬಾಗಲಕೋಟೆ : ಮಳೆ ಮತ್ತು ಬೀಡುಬೀಸಾಗಿ ಬೀಸಿದ ಗಾಳಿಯಿಂದ ಬಾಗಕೋಟೆಯಲ್ಲಿ ಅವಾಂತರ ಸೃಷ್ಟಿಯಾಗಿದೆ. ಮಳೆಯ ಜೊತೆಗೆ ಬೀಸಿದ ಭಾರೀ ಗಾಳಿಯಿಂದ ಗಿಡಮರಗಳು ಧರಾಶಾಹಿ ಆಗಿವೆ. ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು ಬಾಗಲಕೋಟೆಯ ಜಿಲ್ಲೆಯ ಹಲವೆಡೆ ಎಲ್ಲೆಂದರಲ್ಲಿ ಕಂಬಗಳು ನೆಲಕ್ಕುರುಳಿವೆ. ಅಲ್ಲದೇ ಮಳೆಗೆ ಬೆಳಹಾನಿಯೂ ಆಗಿದ್ದು ರೈತನೊಬ್ಬ ಬೆಳೆದ ೧೨ ಎಕರೆ ಕಬ್ಬು ಬೆಳೆ ಸಂಪೂರ್ಣ ನಾಶವಾಗಿದೆ. ಹನುಮಂತ ಮೂಲಿಮನಿ ಎನ್ನುವವರ ೧೨ ಎಕರೆ ಕಬ್ಬು ಬೆಳೆ ಮಳೆಗೆ ನಾಶವಾಗಿದ್ದು ರೈತನ ಹೊಟ್ಟೆಯ ಮೇಲೆ ಮಳೆ ಬರೆ ಎಳೆದಂತಾಗಿದೆ. ಇಷ್ಟೆಲ್ಲ ಅವಾಂತರ ಸೃಷ್ಠಿ ಅಗಿದ್ದರೂ ಹೆಸ್ಕಾಂ ನವರಾಗಲಿ ಅಥವಾ ಇನ್ನಾವುದೇ ಅಧಿಕಾರಿಗಳಾಗಲೀ ಇತ್ತ ತಲೆಹಾಕಿಯೂ ನೋಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾನೂನು ಪ್ರಕಾರ ದಾಖಲೆ ಸರಿ ಇದ್ದವರಿಗೆ ಭೂ ಗ್ಯಾರಂಟಿ – CM ಡಿ.ಕೆ. ಶಿವಕುಮಾರ್
ಕಾನೂನು ಪ್ರಕಾರ ದಾಖಲೆ ಸರಿ ಇದ್ದವರಿಗೆ ಭೂ ಗ್ಯಾರಂಟಿ - CM ಡಿ.ಕೆ. ಶಿವಕುಮಾರ್ ಸರ್ಕಾರ ಆರನೇ ಗ್ಯಾರಂಟಿಯಾಗಿ ಭೂ ಗ್ಯಾರಂಟಿ ನೀಡುತ್ತಿರುವುದರ ಬಗ್ಗೆ ಕೇಳಿದಾಗ, "ಈ...








