ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಪಾಲಾಗಿದ್ದಾರೆ. ಈ ಮಧ್ಯೆ ಹಲವರು ದರ್ಶನ್ ರನ್ನು ಭೇಟಿ ಮಾಡುತ್ತಿದ್ದಾರೆ. ಆದರೆ, ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ದಿಟ್ಟ ಉತ್ತರ ನೀಡಿದ್ದಾರೆ.
ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ನಾನು ನನ್ನ ವೃತ್ತಿ ಜೀವನದಲ್ಲಿ ದರ್ಶನ್ ಅವರನ್ನು ವೇದಿಕೆಯೊಂದರಲ್ಲಿ ಕೇವಲ ಒಮ್ಮೆ ಮಾತ್ರ ಭೇಟಿ ಆಗಿದ್ದೇನೆ. ಅ ಪರಿಚಯವೂ ಇಲ್ಲ. ಕೇವಲ ಒಮ್ಮೆ ಭೇಟಿ ಆಗಿರುವ ವ್ಯಕ್ತಿ ಈಗ ಜೈಲಿಗೆ ಹೋಗಿದ್ದಾರೆಂದರೆ ನಾನು ಏಕೆ ನೋಡಲು ಹೋಗಲಿ ಎಂದು ಹೇಳಿದ್ದಾರೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಬಗ್ಗೆ ಕೂಡ ಮಾತನಾಡಿರುವ ರಾಜ್ ಬಿ ಶೆಟ್ಟಿ, ಆ ರೀತಿಯ ಘಟನೆ ಆಗಬಾರದಿತ್ತು. ಆಗಿ ಹೋಗಿದೆ. ಈ ಕುರಿತು ಮಾತನಾಡುವುದು ಸೂಕ್ತವಲ್ಲ. ಒಂದು ಮುನ್ನೆಚ್ಚರಿಕೆ ಬೇಕು ಬಾಕಿ ನಟರಿಗೆ ಸಹ, ಯಾವುದೇ ರೀತಿ ಕಾನೂನನ್ನು ನಾವು ಕೈಗೆ ತೆಗೆದುಕೊಳ್ಳಲು ಆಗುವುದಿಲ್ಲ, ಹಾಗೆ ತೆಗೆದುಕೊಳ್ಳುವುದು ತಪ್ಪು ಎಂಬುದು ಎಲ್ಲರಿಗೂ ಅರಿವಾಗಬೇಕು. ತಪ್ಪು ಮಾಡಿದ ಯಾರೇ ಆದರೂ ಶಿಕ್ಷೆ ಅನುಭವಿಸಲೇ ಬೇಕು. ಪೊಲೀಸರು ಆ ಪ್ರಕರಣವನ್ನು ಹ್ಯಾಂಡಲ್ ಮಾಡಿರುವ ರೀತಿ ಸಹ ಬಹಳ ಚೆನ್ನಾಗಿದೆ. ಶಕ್ತಿಶಾಲಿ, ಪ್ರಭಾವಶಾಲಿ ವ್ಯಕ್ತಿಗಳಿಗೆ ಶಿಕ್ಷೆ ಆಗಲ್ಲ ಎಂಬ ಅಭಿಪ್ರಾಯ ಜನರಲ್ಲಿ ಇದೆ ಎಂದು ಹೇಳಿದ್ದಾರೆ.







