ಬಂಡಾಯ ಎಂಎಲ್‍ಎಗಳು ವಾಪಸ್ ಬಂದ್ರೆ ಕ್ಷಮಿಸ್ತೇವೆ ಎಂದ ರಾಜ್ ಸಿಎಂ

ಜೈಪುರ: ಕಳೆದ ಐದು ವಾರಗಳಿಂದ ರಾಜಸ್ಥಾನದಲ್ಲಿ ಎದುರಾಗಿರುವ ರಾಜಕೀಯ ಬಿಕ್ಕಟ್ಟು ಇನ್ನೂ ಶಮನಗೊಂಡಿಲ್ಲ. ಅಧಿವೇಶನ ವಿಚಾರವಾಗಿ ಕಳೆದ ಒಂದು ವಾರದಿಂದ ನಡೆಯುತ್ತಿದ್ದ ಹೈಡ್ರಾಮ ಕೊನೆಗೊಂಡಿದ್ದರೂ ರಾಜಕೀಯ ಹಗ್ಗ-ಜಗ್ಗಾಟ ನಡೆಯುತ್ತಲೇ ಇದೆ.
ಇದೇ ವೇಳೆ ಕಾಂಗ್ರೆಸ್‍ನ ಬಂಡಾಯ ನಾಯಕ ಸಚಿನ್ ಪೈಲಟ್ ಜತೆ ಗುರುತಿಸಿಕೊಂಡಿರುವ ಶಾಸಕರಿಗೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೊಸ ಆಫರ್ ನೀಡಿದ್ದಾರೆ.
ಸಚಿನ್ ಪೈಲಟ್ ಹಾಗೂ ಬಂಡಾಯ ಶಾಸಕರು ವಾಪಸ್ ಬಂದರೆ ಅವರ ತಪ್ಪುಗಳನ್ನು ಹೈಕಮಾಂಡ್ ಕ್ಷಮಿಸಲಿದೆ. ಅವರಿಗೆ ಈಗಲೂ ವಾಪಸ್ ಬರಲು ಸ್ವಾಗತವಿದೆ ಎಂದು ಸಿಎಂ ಅಶೋಕ್ ಗೆಹ್ಲೋಟ್ ತಿಳಿಸಿದ್ದಾರೆ.
ರಾಜಸ್ಥಾನ ರಾಜಕಾರಣದಲ್ಲಿ ಮೂಗು ತೂರಿಸಿ ಪ್ರಧಾನಿ ಮೋದಿ ತಮಾಷೆ ಮಾಡುವುದನ್ನು ಮೊದಲು ನಿಲ್ಲಿಸಬೇಕು. ಅಧಿವೇಶನ ಕರೆಯಲು ರಾಜ್ಯಪಾಲರು ಒಪ್ಪುತ್ತಿದ್ದಂತೆ ಶಾಸಕ ಕುದುರೆ ವ್ಯಾಪಾರ ಜೋರಾಗಿದ್ದು, ಶಾಸಕರ ಖರೀದಿ ಮೌಲ್ಯ ಕೂಡ ಹೆಚ್ಚಾಗಿದೆ ಎಂದು ಗೆಹ್ಲೋಟ್ ಆರೋಪಿಸಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಹೋರಾಟ ಸಿದ್ದಾಂತಗಳು, ಯೋಜನೆಗಳು ಹಾಗೂ ಕಾರ್ಯಕ್ರಮಗಳ ಮೇಲೆ ನಡೆಯಬೇಕು. ಹೀಗಾಗಿ ಮೋದಿ ಅವರು ರಾಜಸ್ಥಾನ ರಾಜಕಾರಣದ ವಿಚಾರದಲ್ಲಿ ಮಾಡುತ್ತಿರುವ ಆಟವನ್ನು ನಿಲ್ಲಿಸಬೇಕು ಎಂದರು.
ಕಾಂಗ್ರೆಸ್ ಶಾಸಕರ ಖರೀದಿ ಮಾಡುತ್ತಿದ್ದೇವೆ ಎಂದು ಒಪ್ಪಿಕೊಂಡಿರುವ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಅಶೋಕ್ ಗೆಹ್ಲೋಟ್ ಆಗ್ರಹಿಸಿದರು.

Leave a Reply

Your email address will not be published. Required fields are marked *

Recent Posts

YOU MUST READ

Pin It on Pinterest

Share This