Rajamouli : ತಮ್ಮ ಜೀವನದ ಗೆಲುವನ್ನ ಮಹಿಳೆಯರಿಗೆ ಅರ್ಪಿಸಿದ ರಾಜಮೌಳಿ…
ರಾಜಮೌಳಿ ನಿರ್ದೇಶನದ ‘RRR’ ಚಿತ್ರದ ಯಶಸ್ಸಿನ ಬಗ್ಗೆ ಮಾತನಾಡಿ ನಾವೆಲ್ಲ ಸುಸ್ತಾಗಿದ್ದೇವೆ. ಚಿತ್ರ ಒಂದರ ಹಿಂದರಂತೆಯೇ ಹಲವು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನ ಕೊಳ್ಳೆಹೊಡೆದಿದೆ. ಇತ್ತೀಚೆಗೆ ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಗೋಲ್ಡನ್ ಗ್ಲೋಬ್ ಪ್ರಶಸ್ತಿಯನ್ನ ಕೂಡ ತನ್ನದಾಗಿಸಿಕೊಂಡಿದೆ. ನಿನ್ನೆ ನಡೆದ ‘ಲಾಸ್ ಏಂಜಲೀಸ್ ಫಿಲ್ಮ್ ಕ್ರಿಟಿಕ್ಸ್’ ಅವಾರ್ಡ್ಸ್ ನಲ್ಲಿ ಕೀರವಾಣಿ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿಯನ್ನೂ ಸ್ವೀಕರಿಸಿದ್ದಾರೆ.
‘ಅತ್ಯುತ್ತಮ ವಿದೇಶಿ ಭಾಷೆಯ ಚಿತ್ರ’ ಮತ್ತು ‘ಅತ್ಯುತ್ತಮ ಮೂಲ ಹಾಡು’ ವಿಭಾಗದಲ್ಲಿ RRR ಚಿತ್ರ ಹಾಲಿವುಡ್‌ನ ಪ್ರಸಿದ್ಧ ಪ್ರಶಸ್ತಿ ‘ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್’ ಅನ್ನ ತನ್ನದಾಗಿಸಿಕೊಂಡಿದೆ. ಈ ನಾಮನಿರ್ದೇಶನಗಳಲ್ಲಿ, ರಾಜಮೌಳಿ ಮತ್ತು ಎಂಎಂ ಕೀರವಾಣಿ ಅವರು ಪ್ರಶಸ್ತಿಗಳನ್ನ ಸ್ವೀಕರಿಸಿದರು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಪ್ರಶಸ್ತಿ ಸ್ವೀಕರಿಸಿದ ಕೀರವಾಣಿ ಮತ್ತು ರಾಜಮೌಳಿ ತಮ್ಮ ಜೀವನದಲ್ಲಿನ ಪ್ರಮುಖ ವ್ಯಕ್ತಿಗಳಿಗೆ ತಮ್ಮ ಸಾಧನೆಯನ್ನು ಅರ್ಪಿಸಿದರು.
ವೇದಿಕೆ ಮೇಲೆ ಮಾತನಾಡಿದ ರಾಜಮೌಳಿ ‘ನನ್ನ ತಾಯಿ ರಾಜೇಂದ್ರಿ ನನ್ನಲ್ಲಿರುವ ಕ್ರಿಯಾಶೀಲತೆಯನ್ನು ಗುರುತಿಸಿ ಸಿನಿಮಾದತ್ತ ಪಯಣಿಸಲು ಸಹಾಯ ಮಾಡಿದರು. ಆ ನಂತರ ತಾಯಿ ಶ್ರೀವಲ್ಲಿ (ಕೀರವಾಣಿಯವರ ಹೆಂಡತಿ) ನನಗೆ ಇನ್ನೊಬ್ಬ ತಾಯಿಯಂತೆ ಮತ್ತು ಯಾವಾಗಲೂ ನನ್ನನ್ನು ಪ್ರೋತ್ಸಾಹಿಸುತ್ತಿದ್ದರು. ನನ್ನ ಹೆಂಡತಿ ರಮಾ.. ನನ್ನ ಸಿನಿಮಾಗಳಿಗೆ ಫ್ಯಾಶನ್ ಡಿಸೈನರ್ ಅಷ್ಟೇ ಅಲ್ಲ ನನ್ನ ಜೀವನಕ್ಕೂ ಡಿಸೈನರ್. ಮತ್ತು ನನ್ನ ಹೆಣ್ಣುಮಕ್ಕಳು.. ಅವರು ಏನನ್ನೂ ಮಾಡಲು ಬಯಸುವುದಿಲ್ಲ, ಅವರ ನಗು ಸಾಕು. ಕೊನೆಗೂ ನನ್ನ ಭಾರತ ಕಂಡಿತು. ‘ಮೇರಾ ಭಾರತ್ ಮಹಾನ್ ಜೈ ಹಿಂದ್’ ಎಂಬ ಮಾತುಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
Rajamouli: Rajamouli dedicated his life’s victory to women…