Rajasthan : ಪ್ರೀತಿಸಿದವಳಿಗೆ ಬೇರೊಬ್ಪನ ಜೊತೆ ಮದುವೆ , ಪಿಸ್ತೂಲಿನಿಂದ ಗುಂಡು ಹಾರಿಸಿಕೊಂಡ ಬಾಲಕ
17 ವರ್ಷದ ಅಪ್ರಾಪ್ತ ರವೀಂದ್ರ ಸಾವು
ರಾಜಸ್ಥಾನದ ಬಿಲ್ವಾರದಲ್ಲಿ ಘಟನೆ
ಪ್ರೀತಿಸಿದ ಯುವತಿ ದೂರಾಗಿದ್ದಕ್ಕೆ ನೊಂದು ಆತ್ಮಹತ್ಯೆ
‘ನೀನಿಲ್ಲದೇ ಬದುಕಲಾರೆ’ ಸ್ಟೇಟಸ್ ಹಾಕಿ ಆತ್ಮಹತ್ಯೆ
ಪ್ರೀತಿಸುತ್ತಿದ್ದ ಯುವತಿ ಮತ್ತೋರ್ವನ ಜೊತೆಗೆ ಮದುವೆಯಾಗಿದ್ದನ್ನ ಸಹಿಸಲಾಗದೇ 17 ವರ್ಷದ ಅಪ್ರಾಪ್ತ ಬಾಲಕ ಪಿಸ್ತೂಲಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ..
ರಾಜಸ್ಥಾನದ ಬಿಲ್ವಾರಲ್ಲಿ ಈ ಘಟನೆ ನಡೆದಿದೆ.. ರವೀಂದ್ರ ಮೃತ ಬಾಲಕ.. ಈತ ಮೇಘರಾಸ್ ಗ್ರಾಮದವನು.. ಈತ ಪ್ರೀತಿಸುತ್ತಿದ್ದ ಯುವತಿಗೆ ಕೆಲ ದಿನಗಳ ಹಿಂದಷ್ಟೇ ಬೇರೊಬ್ಬನ ಜೊತೆಗೆ ಮದುವೆಯಾಗಿತ್ತು..
ಇದ್ರಿಂದಾಗಿ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.. ಅಷ್ಟೇ ಅಲ್ದೇ ಸಾಯುವುದಕ್ಕೂ ಮೊದಲು ‘ ನೀನಿಲ್ದೇ ನಾನು ಬದುಕುವುದಿಲ್ಲ’ ಎಂದು ಸ್ಟೇಟಸ್ ಹಾಕಿ ಆತ್ಮಹತ್ಯೆಗೆ ಶರಣಾಗಿದ್ದಾನೆ..
ಪಿಸ್ತೂಲಿನಿಂದ ತಲೆಗೆ ಗುಂಡು ಹಾರಿಸಿಕೊಂಡು ಸಾವನಪ್ಪಿದ್ದಾನೆ..
ಅಷ್ಟೇ ಅಲ್ದೇ ಆತ ತಲೆಗೆ ಗುಂಡು ಹಾರಿಸಿಕೊಳ್ತಿರುವ ದೃಶ್ಯ ಮಹಾತ್ಮ ಗಾಂಧಿ ಆಸ್ಪತ್ರೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.. ಕರೋಯಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು , ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ..
Rajasthan , 17 year boy shoot himself by gun