Rajasthan : 26 ವರ್ಷದ ಯುವಕನ ಹೊಟ್ಟೆಯಲ್ಲಿ 56 ಬ್ಲೇಡ್ ; ಬೆಚ್ಚಿ ಬಿದ್ದ ವೈದ್ಯರು…
ರಾಜಸ್ಥಾನದ ಯುವಕನೊಬ್ಬ ಬ್ಲೇಡ್ ಗಳನ್ನ ನುಂಗಿದ್ದಾನೆ, ಒಂದಲ್ಲ ಎರಡಲ್ಲ ಏಕಕಾಲಕ್ಕೆ 56 ಬ್ಲೇಡ್ ಗಳನ್ನ ನುಂಗಿದ್ದಾನೆ. ರಾಜಸ್ಥಾನದ ಜಲೋರ್ ಜಿಲ್ಲೆಯ ಯಶ್ ಪಾಲ್ ಎಂಬ 26 ವರ್ಷದ ಯುವಕ 56 ಬ್ಲೇಡ್ಗಳಿದ್ದ ಪ್ಯಾಕೆಟ್ ಅನ್ನು ನುಂಗಿದ್ದಾನೆ. ತಿಳಿದು ನುಂಗಿದ್ದಾನ ಅಥವಾ ತಿಳಿಯದೇ ನುಂಗಿದ್ದಾನ ಎಂದು ತಿಳಿದುಬಂದಿಲ್ಲ.
ಬ್ಲೇಡ್ ಗಳು ಹೊಟ್ಟೆಯೊಳಗೆ ಹೋದರೇ ಏನಾಗುತ್ತೋ ಅದೇ ಆಗಿದೆ ಈ ಯಶ್ ಪಾಲ್ ಯುವಕ ಒಂದು ದಿನ ರಕ್ತವಾಂತಿ ಮಾಡಿಕೊಂಡಿದ್ದಾನೆ. ಇದರಿಂದ ಗಾಬರಿಗೊಂಡ ಸ್ನೇಹಿತರು ಕೂಡಲೇ ಯುವಕನನ್ನ ಆಸ್ಪತ್ರೆಗೆ ಸೇರಿಸಿದ್ದಾರೆ. ತಪಾಸಣೆ ನಡೆಸಿದ ವೈದ್ಯರು ಬೆಚ್ಚಿ ಬಿದ್ದಿದ್ದಾರೆ. ಯುವಕನ ಹೊಟ್ಟೆಯೊಳಗೆ ಬ್ಲೇಡ್ ಗಳಿರುವುದು ಪತ್ತೆಯಾಗಿದೆ.
ಜಲೋರ್ ಜಿಲ್ಲೆಯ ಸಂಚೋರ್ ಪ್ರದೇಶದ 26 ವರ್ಷದ ಯಶ್ ಪಾಲ್ ಖಾಸಗಿ ಕಂಪನಿಯೊಂದರಲ್ಲಿ ಡೆವಲಪರ್ ಆಗಿ ಕೆಲಸ ಮಾಡುತ್ತಿದ್ದಾನೆ. ಯಶ್ ತನ್ನ ನಾಲ್ವರು ಸ್ನೇಹಿತರೊಂದಿಗೆ ಬಾಲಾಜಿ ನಗರದಲ್ಲಿ ಬಾಡಿಗೆ ರೂಮ್ ನಲ್ಲಿ ವಾಸವಿದ್ದ. ಕಳೆದ ಭಾನುವಾರ (ಮಾರ್ಚ್ 12,) ಸ್ನೇಹಿತರೆಲ್ಲರೂ ತಮ್ಮ ತಮ್ಮ ಕೆಲಸಕ್ಕಾಗಿ ತೆರಳಿದ್ದಾಗ ಯಶ್ ರೂಮ್ ನಲ್ಲಿ ರಕ್ತವಾಂತಿ ಮಾಡಿಕೊಂಡಿದ್ದಾನೆ. ಕೂಡಲೇ ಸ್ನೇಹಿತರಿಗೆ ಕರೆ ಮಾಡಿ ತಿಳಿಸಿದ್ದಾನೆ. ಕೂಡಲೇ ಸ್ನೇಹಿತರು ಈತನನನ್ನ ಆಸ್ಪತ್ರೆಗೆ ಕರೆದೋಯ್ದಿದ್ದಾರೆ. ಸ್ಕ್ಯಾನಿಂಗ್ ನಲ್ಲಿ ಯಶ್ ಹೊಟ್ಟೆಯಲ್ಲಿ ಲೋಹದ ವಸ್ತಗಳಿರುವುದು ಪತ್ತೆಯಾಗಿದೆ. ವೈದ್ಯರು ಸೋನೋಗ್ರಫಿ ಮತ್ತು ಎಂಡೋಸ್ಕೋಪಿ ಮಾಡಿ, ಯಶ್ ಹೊಟ್ಟೆಯಲ್ಲಿ ಬ್ಲೇಡ್ಗಳಿರುವುದು ಧೃಡಪಡಿಸಿದ್ದಾರೆ.
ತಕ್ಷಣ ಆಪರೇಷನ್ ಗೆ ಒಪ್ಪಿಗೆ ಸೂಚಿಸಿ ಶಸ್ತ್ರ ಚಿಕಿತ್ಸೆ ನಡೆಸಿ ಯಶ್ ಪಾಲ್ ಹೊಟ್ಟೆಯಿಂದ 56 ಬ್ಲೇಡ್ ತುಂಡುಗಳನ್ನ ಹೊರತೆಗೆದಿದ್ದಾರೆ. ಯಶ್ ಅವರ ಆರೋಗ್ಯ ಈಗ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದು, ಬ್ಲೇಡ್ನಲ್ಲಿದ್ದ ಕವರ್ನೊಂದಿಗೆ ಬ್ಲೇಡ್ಗಳನ್ನು ನುಂಗಿದ್ದರಿಂದ ಅವರಿಗೆ ಯಾವುದೇ ನೋವು ಕಾಣಿಸಿಕೊಂಡಿಲ್ಲ. ಬ್ಲೇಡ್ಗಳ ಪ್ಯಾಕೆಟ್ ಹೊಟ್ಟೆಯನ್ನ ತಲುಪಿದ ನಂತರ, ಮೇಲಿನ ಪ್ಯಾಕೆಟ್ ಕವರ್ ಜೀರ್ಣವಾಗುತ್ತದೆ. ಕಬ್ಬಿಣದ ಬ್ಲೇಡ್ ಗಳು ತಮ್ಮ ಪ್ರತಾಪ ತೋರಿಸುತ್ತಿದ್ದಂತೆ ಯಶ್ ರಕ್ತ ವಾಂತಿ ಮಾಡಿಕೊಳ್ಳಲು ಆರಂಭಿಸಿದ್ದಾರೆ ಎನ್ನಲಾಗಿದೆ.
Rajasthan: 56 blade in stomach of 26-year-old youth; Shocked doctor…