ಪ್ರೀತಿಗೆ ಒಪ್ಪದ ಯುವತಿ ಹಾಗೂ ಪ್ರಿಯಕರನನ್ನು – ಕೊಂದ ತಂದೆ
ರಾಜಸ್ಥಾನ : ಪ್ರೀತಿ ಮಾಡಿದ ಕಾರಣಕ್ಕೆ ಮಗಳು ಹಾಗೂ ಆಕೆಯ ಪ್ರಿಯಕರನನ್ನ ಯುವತಿಯ ತಂದೆ ಬರ್ಬರವಾಗಿ ಹತ್ಯಗೈದ ಘಟನೆ ರಾಜಸ್ಥಾನದ ಕಾನ್ಪುರದ ಘಟಂಪೂರ್ನಲ್ಲಿ ನಡೆದಿದೆ. ಇನ್ನೂ ಪ್ರಿಯಕರನ ತಂದೆಯ ಎದುರಲ್ಲೇ ಇಬ್ಬರನ್ನೂ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ವಿರ್ಹಾನ್ಪುರ್ ಮೂಲದ ಯುವತಿ ಘಟಂಪೂರ್ನಲ್ಲಿ ವಾಸವಿದ್ದಳು. ಅದೇ ಗ್ರಾಮದ ಯುವಕನನ್ನ ಪ್ರೀತಿಸುತ್ತಿದ್ದಳು. ಇದಕ್ಕೆ ಹುಡುಗನ ಮನೆಯವರಿಂದ ಯಾವುದೇ ಆಕ್ಷೇಪಣೆ ಇರಲಿಲ್ಲ.. ಆದ್ರೆ ಯುವತಿಯ ತಂದೆ ಇವರ ಪ್ರೀತಿಯನ್ನ ತೀವ್ರವಾಗಿ ವಿರೋಧಿಸಿದ್ದಾರೆ. ಪ್ರೀತಿಯನ್ನು ನಿಲ್ಲಿಸುವಂತೆ ಎಚ್ಚರಿಸಿದ್ದ. ಯುವತಿ ಅಪ್ಪನ ಮಾತು ಕೇಳದೆ ಪ್ರೀತಿ ಮುಂದುವರಿಸಿದ್ದಳು.
ಈ ನಡುವೆ ಯುವಕ ಯುವತಿಯ ಮನೆಗೆ ಬಂದಿದ್ದಾನೆ. ಇದು ಯುವತಿಯ ತಂದೆಗೆ ಗೊತ್ತಾಗಿ ಯುವತಿಯ ಸಹೋದರರ ಜೊತೆ ಸ್ಥಳಕ್ಕೆ ಆಗಮಿಸಿದ್ದಾನೆ. ಅಲ್ಲದೇ ಇಬ್ಬರಿಗೂ ಬಾಗಿಲು ಹಿಗ್ಗಾಮುಗ್ಗ ಥಳಿಸಿದ್ದಾರೆ. ಕೂಗಾಟ ಕೇಳಿ ಯುವಕನ ತಂದೆಯೂ ಸ್ಥಳಕ್ಕೆ ಬಂದಿದ್ದಾನೆ. ಆತ ಎಷ್ಟೇ ಕೇಳಿಕೊಂಡರೂ ಬಾಗಿಲು ತೆಗೆಯದ ಯುವತಿಯ ತಂದೆ ಇಬ್ಬರ ಪ್ರಾಣವನ್ನು ತೆಗೆದು ಅಲ್ಲಿಂದ ಪರಾರಿಯಾಗಿದ್ದಾನೆ. ಆತನ ಜತೆ ಯುವತಿಯ ಸಹೋದರರೂ ಪರಾರಿಯಾಗಿದ್ದಾರೆ. ಸದ್ಯ ಈ ವಿಚಾರದಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.








