ತಮಿಳುನಾಡಲ್ಲಿ `ಬಿಜೆಪಿ ಬಲ ಹೆಚ್ಚಿಸುತ್ತಾರಾ ತಲೈವಾ’..?
ಚೆನ್ನೈ : ತಮಿಳು ಚಿತ್ರರಂಗದ ತಲೈವಾ, ಸೂಪರ್ ಸ್ಟಾರ್ ರಜನಿಕಾಂತ್ ( Rajinikanth ) ರಾಜಕೀಯ ಪ್ರವೇಶ ಕುರಿತು ಹಲವು ವರ್ಷಗಳಿಂದ ಚರ್ಚೆ ಆಗುತ್ತಲೇ ಇದೆ. ಕೆಲವು ದಿನಗಳಿಂದ ಅನಾರೋಗ್ಯದ ಕಾರಣ ರಜನಿಕಾಂತ್ ( Rajinikanth ) ರಾಜಕೀಯ ಪ್ರವೇಶಿಸುವುದಿಲ್ಲ.
ಅವರು ತಮಿಳುನಾಡು ವಿಧಾನಸಭೆ ಚುನಾವಣೆಯಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಈ ಬೆಳವಣಿಗೆಗಳ ಮಧ್ಯೆ ಪ್ರಸಿದ್ಧ ರಾಜಕೀಯ ತಜ್ಞ, ಬಿಜೆಪಿ ಆಪ್ತರೆಂದೇ ಗುರುತಿಸಿಕೊಂಡಿರುವ, ಆರ್ ಎಸ್ ಎಸ್ ಸಿದ್ಧಾಂತಿ ಎಸ್ ಗುರುಮೂರ್ತಿ ಅವರು ನಿನ್ನೆ ರಜನಿಕಾಂತ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಇದು ತಮಿಳುನಾಡು ರಾಜಕೀಯ ವಲಯದಲ್ಲಿ ಮಿಂಚಿನ ಸಂಚಲನ ಸೃಷ್ಟಿಸಿದೆ.
ಎಸ್ ಗುರುಮೂರ್ತಿ ಅವರು ಭಾನುವಾರ ಸಂಜೆ ಪೋಯೆಸ್ ಗಾರ್ಡನ್ ನಿವಾಸದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಭೇಟಿ ಮಾಡಿ ಸುಮಾರು ಎರಡು ಗಂಟೆಗಳ ಕಾಲ ಮಾತುಕತೆ ನಡೆಸಿದ್ದಾರೆ.
ಮೂಲಗಳ ಪ್ರಕಾರ, ಗುರುಮೂರ್ತಿ ಅವರು ರಜನಿಕಾಂತ್ ಅವರನ್ನು ತಮಿಳುನಾಡು ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.
ಈ ಹಿಂದೆ ಗುರುಮೂರ್ತಿ ಅವರು ರಜನಿಕಾಂತ್ ರಾಜಕೀಯದಲ್ಲಿ ಉಜ್ವಲ ಭವಿಷ್ಯವಿದೆ, ಅವರು ಬಿಜೆಪಿ ಯೊಂದಿಗೆ ಹೊಂದಾಣಿಕೆ ಮಾಡಿಕೊಂಡಲ್ಲಿ ರಾಜ್ಯಕ್ಕೆ ಒಳ್ಳೆಯದಾಗುತ್ತದೆ ಎಂದು ಹೇಳಿದ್ದರು.
ಇದನ್ನೂ ಓದಿ : ಯಾರ ಪಾಲಾಗುತ್ತೆ ಕುಂಚಿಟಿಗರ ಕೋಟೆ ಶಿರಾ..?
ಬಿಜೆಪಿ ಜೊತೆ ರಜನಿ ಹೊಂದಾಣಿಕೆ..?
ರಜನಿಕಾಂತ್ ರಾಜಕೀಯ ಪ್ರವೇಶ ಕೇಳಿಬಂದಾಗಲೆಲ್ಲಾ ಬಿಜೆಪಿಯ ಹೆಸರು ಕೇಳಿಬರುತ್ತದೆ. ರಜನಿಕಾಂತ್ ಬಿಜೆಪಿಯನ್ನು ಸೇರಲಿದ್ದಾರೆ ಎಂಬ ಸುದ್ದಿಗಳು ಈ ಹಿಂದೆ ಸದ್ದು ಮಾಡಿದ್ದವು.
ಮುಂದಿನ ವರ್ಷ ತಮಿಳುನಾಡು ವಿಧಾನ ಸಭೆ ಚುನಾವಣೆ ನಡೆಯಲಿದ್ದು, ತಮಿಳುನಾಡಿನಲ್ಲಿ ಬಿಜೆಪಿ ಪ್ರಾಬಲ್ಯ ಸಾಧಿಸಲು ನಾನಾ ಕಸರತ್ತುಗಳನ್ನು ನಡೆಸುತ್ತಿದೆ.
ಅದರಂತೆ ಅಣ್ಣಾಮಲೈ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿರುವ ಬಿಜೆಪಿ ಅವರಿಗೆ ರಾಜ್ಯ ಉಪಾಧ್ಯಕ್ಷ ಪಟ್ಟ ನೀಡಿದೆ. ಇನ್ನು ಮೊನ್ನೆಯಷ್ಟೆ ಕಾಂಗ್ರೆಸ್ ನಲ್ಲಿದ್ದ ನಟಿ ಖುಷ್ಬೂ ಅವರನ್ನೂ ಪಕ್ಷಕ್ಕೆ ಸೆಳೆಯುವಲ್ಲಿ ಕೇಸರಿ ಪಡೆ ಯಶಸ್ವಿಯಾಗಿದೆ.
ಆ ಮೂಲಕ ದ್ರಾವಿಡ ನಾಡಲ್ಲಿ ಕೇಸರಿ ಬಾವುಟ ಹಾರಿಸಿಲು ಕಮಲ ಪಡೆ ಪ್ಲಾನ್ ಮಾಡಿಕೊಳ್ಳುತ್ತಿದೆ.
ಕೇಸರಿ ಪಡೆಗೆ ಬೇಕು `ಸೂಪರ್’ ಬಲ..!
ಹೌದು..! ತಮಿಳುನಾಡಿನಲ್ಲಿ ಬಿಜೆಪಿ ಗಟ್ಟಿಯಾಗಿ ನೆಲ ನಿಲ್ಲುವುದು ಅಷ್ಟು ಸುಲಭವಾದ ಮಾತಲ್ಲ. ಏಕೆಂದರೇ ಅಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಜನರು ಹೆಚ್ಚಿನ ಆಧ್ಯತೆ ಕೊಡುತ್ತಾ ಬಂದಿದ್ದಾರೆ.
ಅದರಲ್ಲೂ ಮುಖ್ಯ ಬಿಜೆಪಿಯ ಸಿದ್ಧಾಂತಗಳನ್ನು ತಮಿಳುನಾಡಲ್ಲಿ ಜನ ಒಪ್ಪುವುದು ಕಷ್ಟ. ಹೀಗಾಗಿಯೇ ಬಿಜೆಪಿಗೆ ತಮಿಳುನಾಡಲ್ಲಿ ಮಾಸ್ ಲೀಡರ್ ನ ಅವಶ್ಯಕತೆ ಇದೆ. ಇದೇ ಕಾರಣಕ್ಕಾಗಿ ಬಿಜೆಪಿ ನಾಯಕರು ಪದೇ ಪದೇ ರಜನಿ ಮನೆಯ ಬಾಗಿಲನ್ನು ತಟ್ಟುತ್ತಲೇ ಇದ್ದಾರೆ.
ಇದನ್ನೂ ಓದಿ : ಆರ್.ಆರ್ ನಗರ, ಶಿರಾದಲ್ಲಿಂದು ಮನೆ ಮನೆ ಕ್ಯಾಂಪೇನ್; ನಾಳೆ ಓಟಿಂಗ್..!
ಒಂದು ವೇಳೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ರಜನಿಕಾಂತ್ ಸಾಥ್ ಸಿಕ್ಕಿದ್ದೇ ಆದಲ್ಲಿ ತಮಿಳುನಾಡಿನ ರಾಜಕೀಯದಲ್ಲಿ ಕ್ಷಿಪ್ರಗತಿಯ ಬೆಳವಣಿಗೆಗಳು, ಬದಲಾವಣೆಗಳು ಆಗುವ ಸಾಧ್ಯತೆಗಳು ಹೆಚ್ಚಿವೆ.
ತಮಿಳುನಾಡಿನ ರಾಜಕೀಯ ಲೆಕ್ಕಾಚಾರಗಳು ಉಲ್ಟಾ ಆಗುವ ಸಾಧ್ಯತೆಗಳಿವೆ. ಏಕೆಂದ್ರೆ ತಮಿಳುನಾಡಲ್ಲಿ ರಜನಿಕಾಂತ್ ಅವರಿಗೆ ಆ ಕ್ರೇಜ್ ಇದೆ. ಆ ಫಾಲೋಯಿಂಗ್ ಇದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel