ತ್ರಿಕೋನ ಸ್ಪರ್ಧೆ : ಯಾರ ಪಾಲಾಗುತ್ತೆ ಕುಂಚಿಟಿಗರ ಕೋಟೆ..?
ತುಮಕೂರು : ಕುಂಚಿಟಿಗರ ಕೋಟೆ ಶಿರಾ ಯಾರಾ ಪಾಲಾಗುತ್ತೆ..? ಕಾಂಗ್ರೆಸ್ ಗೆ ವರದಾನವಾಗುತ್ತಾ ಅಹಿಂದ ಮತಗಳು..? ಶಿರಾವನ್ನು ಉಳಿಸಿಕೊಳ್ತಾರಾ ದಳಪತಿಗಳು..? ಚರಿತ್ರೆ ಬರೆಯುತ್ತಾ ಕೇಸರಿ ಪಡೆ..?
ಈ ಪ್ರಶ್ನೆಗಳಿಗೆ ನವೆಂಬರ್ 10 ರಂದು ಉತ್ತರಸಿಗಲಿದೆ. ಆದ್ರೆ ಈ ಉಪಚುನಾವಣೆ ರಾಜ್ಯ ರಾಜಕೀಯದ ಮಟ್ಟಿಗೆ ಕೆಲ ಸಂದೇಶಗಳನ್ನು ಹಾಗೂ ರಾಜಕೀಯ ಬದಲಾವಣೆಗಳಿಗೆ ಕಾರಣವಾಗಬಹುದು.
ಹೌದು…! ಶಿರಾ ಉಪಚುನಾವಣೆ ಫಲಿತಾಂಶ ಮೂರು ಪಕ್ಷಗಳಿಗೂ ಮಹತ್ವದ್ದಾಗಿದೆ. ಹೀಗಾಗಿಯೇ ಮೂರು ಪಕ್ಷಗಳೂ ಶಿರಾದಲ್ಲಿ ಜಿದ್ದಿಗೆ ಬಿದ್ದು ಪ್ರಚಾರ ನಡೆಸಿವೆ. ಇಂದು ಮನೆ ಮನೆಗೆ ತೆರಳಿ ಮತಯಾಚನೆ ಮಾಡುತ್ತಿವೆ.
ಕಾಂಗ್ರೆಸ್ ಜೊತೆ ಇದ್ದಾರಾ ಅಹಿಂದ ಮತದಾರರು..?
ಈ ಚುನಾವಣೆ ಮೂಲಕ ಅಹಿಂದ ಮತದಾರರು ಕಾಂಗ್ರೆಸ್ ಜೊತೆಗೆ ಇದ್ದಾರಾ ಅಥವಾ ಕೈ ಬಿಟ್ಟಿದ್ದಾರಾ ಎಂಬೋದಕ್ಕೆ ಉತ್ತರ ಸಿಗಲಿದೆ.
ಹೇಗೆಂದ್ರೆ ಶಿರಾದಲ್ಲಿ ಹಿಂದುಳಿದ ವರ್ಗಗಳು, ಪರಿಶಿಷ್ಟ ಸಮುದಾಯ ಮತ್ತು ಮುಸ್ಲಿಮ್ ಮತಗಳು ಸೋಲು, ಗೆಲುವು ನಿರ್ಧರಿಸುವ ನಿರ್ಣಾಯಕ ಪಾತ್ರ ವಹಿಸಲಿವೆ.
ಇದನ್ನೂ ಓದಿ : ಆರ್.ಆರ್ ನಗರ, ಶಿರಾದಲ್ಲಿಂದು ಮನೆ ಮನೆ ಕ್ಯಾಂಪೇನ್; ನಾಳೆ ಓಟಿಂಗ್..!
ಹೀಗಾಗಿ ಕಾಂಗ್ರೆಸ್ ಪಕ್ಷ ಅಹಿಂದ ಮತದಾರರು ನಮ್ಮ ಜೊತೆಯಲ್ಲಿಯೇ ಇದ್ದಾರೆ. ಅವರೇ ನಮ್ಮ ಬಲ ಎನ್ನುವ ಸಂದೇಶವನ್ನು ಸಾರುವ ದೃಷ್ಠಿಯಿಂದ ಕಾಂಗ್ರೆಸ್ ಗೆ ಶಿರಾದಲ್ಲಿ ಗೆಲುವು ಅನಿವಾರ್ಯ.
ಅದರಲ್ಲೂ ಸರಣಿ ಸೋಲುಗಳ ಮೂಲಕ ಕಂಗೆಟ್ಟಿರುವ ಕಾಂಗ್ರೆಸ್ ಕುಂಚಿಟಿಗರ ಕೋಟೆ ಶಿರಾ ಭೇದಿಸಿದರೆ ಪಕ್ಷಕ್ಕೆ ಟಾನಿಕ್ ಆಗಲಿದೆ.
ಈ ಎಲ್ಲಾ ಕಾರಣಗಳಿಂದಾಗಿ ಅಹಿಂದ ನಾಯಕ ಅಂತಲೇ ಗುರುತಿಸಿಕೊಂಡಿರುವ ಸಿದ್ದರಾಮಯ್ಯ, ಶಿರಾದಲ್ಲಿ ಗೆಲುವು ಸಾಧಿಸಲು ತಮ್ಮಯಾದ ತಂಡ ರಚಿಸಿದ್ದಾರೆ.
ದಳಪತಿಯಿಂದ ಜಾರುತ್ತಿದೆ ಶಿರಾ..!
ಹೌದು..! ಶಿರಾ ಕ್ಷೇತ್ರದಲ್ಲಿ ಜೆಡಿಎಸ್ ಭದ್ರ ನೆಲೆ ಹೊಂದಿದೆ. ಇದು ಜೆಡಿಎಸ್ ನ ಭದ್ರಕೋಟೆಯೇ ಆಗಿದೆ. ಆದ್ರೆ ಈ ಉಪಚುನಾವಣೆಯಲ್ಲಿ ಕ್ಷೇತ್ರದಲ್ಲಿ ಜೆಡಿಎಸ್ ಅಲೆ ಕಾಣಿಸುತ್ತಿಲ್ಲ.
ಸ್ವತಃ ದೇವೇಗೌಡರೇ ಪ್ರಚಾರದ ಅಖಾಡಕ್ಕೆ ಧುಮುಕಿದ್ದರೂ ಪಕ್ಷದ ಕಾರ್ಯಕರ್ತರಲ್ಲಿ ಗೆಲ್ಲುವ ವಿಶ್ವಾಸ ಕಾಣಿಸುತ್ತಿಲ್ಲ. ಅದರಲ್ಲೂ ಸ್ಥಳೀಯ ಜೆಡಿಎಸ್ ನಾಯಕರು, ಕಾಂಗ್ರೆಸ್ ಪಕ್ಷದತ್ತ ಮುಖ ಮಾಡಿರುವುದು ಜೆಡಿಎಸ್ ಗೆ ಮರ್ಮಾಘಾತ ನೀಡಿದೆ.
ಇದನ್ನೂ ಓದಿ : `ಕಾಮಿಡಿ ಆಕ್ಟರ್ ಕಟೀಲ್’ಗೆ ಸಿದ್ದರಾಮಯ್ಯ ಬಗ್ಗೆ ಮಾತಾಡುವ ಯೋಗ್ಯತೆ ಇಲ್ಲ
ಒಂದು ವೇಳೆ ಶಿರಾದಲ್ಲಿ ಜೆಡಿಎಸ್ ಗೆದ್ದರೇ ರಾಷ್ಟ್ರೀಯ ಪಕ್ಷಗಳಿಗೆ ಎಚ್ಚರಿಕೆಯ ಸಂದೇಶ ರವಾನೆ ಆಗುತ್ತದೆ. ಶಿರಾದಲ್ಲಿ ಜೆಡಿಎಸ್ ಸೋತರೇ ಪಕ್ಷದಿಂದ ಹೊರಹೋಗುವವರ ಸಂಖ್ಯೆಯನ್ನು ಹೆಚ್ಚಿಸಲೂಬಹುದು.
ಬಲ ಹೆಚ್ಚಿಸಿಕೊಂಡ ಕೇಸರಿ ಪಡೆ..!
ಶಿರಾದಲ್ಲಿ ಬಿಜೆಪಿಗೆ ನೆಲೆಯೇ ಇರಲಿಲ್ಲ.. ಆದ್ರೆ ಈ ಚುನಾವಣೆಯಲ್ಲಿ ಕೇಸರಿ ಪಡೆ ಬಲ ಹೆಚ್ಚಿಸಿಕೊಂಡಿದೆ. ಅಹಿಂದ ಮತಗಳನ್ನು ಸೆಳೆಯುವ ದೃಷ್ಠಿಯಿಂದ ತನ್ನ ಹಿಂದುತ್ವ ಅಸ್ತ್ರವನ್ನು ಪಕ್ಕಕ್ಕಿಟ್ಟು, ಜಾತಿವಾರು ಸಭೆಗಳ ಮೊರೆ ಹೋಗಿ ಬಲ ಹೆಚ್ಚಿಸಿಕೊಂಡಿದೆ.
ಒಂದು ವೇಳೆ ಶಿರಾದಲ್ಲಿ ಕಮಲ ಅರಳಿದರೆ ಬಿಜೆಪಿಗೆ ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ ಬೆಂಬಲ ಮತ್ತಷ್ಟು ಗಟ್ಟಿಯಾಗುತ್ತದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್‍ನ ಸಾಂಪ್ರದಾಯಿಕ ಮತದಾರರನ್ನು ಸೆಳೆಯುವುದು ಬಿಜೆಪಿಗೆ ಸುಲಭವಾಗಲಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel