ಸಚಿವ ಸ್ಥಾನ ಬೇಡ ಎನ್ನುವ ದೊಡ್ಡ ಗುಣವಿಲ್ಲ : ರಾಜುಗೌಡ
ಬೆಂಗಳೂರು : ಸಚಿವ ಸ್ಥಾನ ಕೊಟ್ಟರೆ ಬೇಡ ಎನ್ನುವ ದೊಡ್ಡ ಗುಣವಿಲ್ಲ, ಸಚಿವ ಸ್ಥಾನಕ್ಕೆ ಈಗಾಗಲೇ ಅಪ್ಲಿಕೇಶನ್ ಕೊಟ್ಟಿದ್ದು, ಸಿಎಂ ವಿವೇಚನೆಗೆ ಬಿಡಲಾಗಿದೆ ಎಂದು ಶಾಸಕ ರಾಜುಗೌಡ ಹೇಳಿದ್ದಾರೆ.
ರಮೇಶ್ ಜಾರಕಿಹೊಳಿ ನಿವಾಸಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೇಣುಕಾಚಾರ್ಯ, ನಿರಾಣಿ, ಶಿವರಾಜಪಾಟೀಲ್, ಬೆಳ್ಳಿಪ್ರಕಾಶ್ ಜತೆ ಸಿಎಂ ಭೇಟಿ ಮಾಡಿದ್ದೆವು. ಈಗ ಸಚಿವ ರಮೇಶ್ ಜಾರಕಿಹೊಳಿ ಮನೆಯಲ್ಲಿ ಊಟಕ್ಕೆ ಸೇರಿದ್ದೆವು. ಸಚಿವ ಸ್ಥಾನದ ಬೇಡಿಕೆಯಿಟ್ಟಿಲ್ಲ, ನಾಳೆ ಸಚಿವ ಸಂಪುಟ ಸಭೆ ಇದೆ ಎಂದರು.
ಸಚಿವ ಸ್ಥಾನ ಕೊಟ್ಟರೆ ಬೇಡ ಎನ್ನುವ ದೊಡ್ಡ ಗುಣವಿಲ್ಲ ಎಂದ ರಾಜುಗೌಡ, ಸಚಿವ ಸ್ಥಾನಕ್ಕೆ ಈಗಾಗಲೇ ಅಪ್ಲಿಕೇಶನ್ ಕೊಟ್ಟಿದ್ದೇನೆ. ಸಚಿವಸ್ಥಾನ ಕೊಡೋದು ಬಿಡೋದು ಸಿಎಂ ವಿವೇಚನೆಗೆ ಬಿಡಲಾಗಿದೆ ಎಂದಿದ್ದಾರೆ.
ಹಾಲಿ ಸಚಿವರ ಬಗ್ಗೆ ಸ್ಫೋಟಕ ಹೇಳಿಕೆ ಕೊಟ್ಟ ವಿಶ್ವನಾಥ್
ಇನ್ನು ಸಚಿವ ಸ್ಥಾನಕ್ಕಾಗಿ ಸಿಎಂ ಮತ್ತು ಸರ್ಕಾರದ ಮೇಲೆ ಸಚಿವ ಸ್ಥಾನಕ್ಕೆ ಒತ್ತಡ ಹಾಕುತ್ತಿಲ್ಲ. ಕೊರೊನಾದಿಂದ ರಾಜ್ಯದ ಸ್ಥಿತಿ ಸರಿಯಿಲ್ಲ. ಇಂಥ ಸಂದರ್ಭದಲ್ಲಿ ನಾವು ಸಚಿವ ಸ್ಥಾನಕ್ಕೆ ಒತ್ತಡ ಹಾಕುತ್ತಿಲ್ಲ. ಕೊರೊನಾಗೂ ಮುಂಚೆ ಕೆಲ ಸಚಿವರನ್ನು ಕೈಬಿಡಿ ಎಂದು ಸಿಎಂಗೆ ಮನವಿ ಮಾಡಿದ್ದೆವು. ಆದರೆ ಈಗ ಪರಿಸ್ಥಿತಿ ಬೇರೆ ಇದೆ. ಸಿಎಂ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ. ಸಿಎಂ ಭೇಟಿ ಮಾಡಿದ್ದಾಗ ಬದಲಾವಣೆ ಮಾಡಿ ಅವಕಾಶ ಕೊಡುವುದಾಗಿ ಭರವಸೆ ನೀಡಿದ್ದಾರೆ ಎಂದು ರಾಜುಗೌಡ ತಿಳಿಸಿದರು.
ಇದೇ ವೇಳೆ ಸಿಎಂ ಬದಲಾವಣೆ ಬಗ್ಗೆ ಯತ್ನಾಳ್ ಹೇಳಿಕೆ ಬಗ್ಗೆ ಮಾತನಾಡಿ, ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ. ಮುಂದಿನ ಅವಧಿಯವರೆಗೂ ಯಡಿಯೂರಪ್ಪ ಸಿಎಂ ಎಂದು ಪ್ರಧಾನಿ ಮೋದಿ, ಜೆ.ಪಿ.ನಡ್ಡಾ ಹೇಳಿದ್ದಾರೆ. ಯಡಿಯೂರಪ್ಪ ಅವರೇ ಮುಂದಿನ ಎರಡೂವರೆ ವರ್ಷ ಸಿಎಂ ಆಗಿರುತ್ತಾರೆ. ಕೆಲವು ಸಚಿವರನ್ನು ತೆಗೆಯುತ್ತೇವೆ ಎಂದು ಸಿಎಂ ಹೇಳಿಕೆ ನೀಡಿರುವುದು ಸಂತೋಷ ತಂದಿದೆ ಎಂದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel