ರಾಜ್ಯಸಭಾ ಚುನಾವಣೆ – ರಾಜ್ಯದಲ್ಲಿ ಚುರುಕುಗೊಂಡ ಮತದಾನ 4 ಸ್ಥಾನಕ್ಕೆ ತೀವ್ರ ಪೈಪೋಟಿ…
ದೇಶದ 4 ರಾಜ್ಯಗಳ 16 ಸ್ಥಾನಗಳಿಗೆ ರಾಜ್ಯಸಭಾ ಚುನಾವಣೆಯ ಮತದಾನ ಆರಂಭವಾಗಿದೆ. ಕರ್ನಾಟಕ ವಿಧಾನಸಭೆಯಿಂದ ಖಾಲಿ ಇರುವ 4 ಸ್ಥಾನಗಳಿಗಾಗಿ ಮತದಾನ ಚುರುಕುಗೊಂಡಿದ್ದು, ವಿಧಾನಸಭೆಯ ಕೊಠಡಿ ಸಂಖ್ಯೆ 106ರಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗಿದೆ.
ಮತದಾನ ಮುಕ್ತವಾಗಿರುವುದರಿಂದ ಯಾರು ಯಾವ ಅಭ್ಯರ್ಥಿಗೆ ಮತ ಹಾಕಿದ್ದಾರೆ, ಎಷ್ಟು ಅಡ್ಡ ಮತದಾನವಾಗಲಿದೆ ಎಂದು ತಿಳಿಯಲಿದೆ. ಶಾಸಕರು ಮತದಾನ ಮಾಡುವಾಗ ತಮ್ಮ ಪಕ್ಷದ ಏಜೆಂಟ್ ಗೆ ತೋರಿಸಿ ಮತ ಹಾಕಬೇಕಾಗುತ್ತದೆ.
ಬಿಜೆಪಿಯ ಇಬ್ಬರು ಅಭ್ಯರ್ಥಿಗಳು ಮತ್ತು ಕಾಂಗ್ರೇಸ್ ಕಡೆಯಿಂದ ಒಬ್ಬ ಅಭ್ಯರ್ಥಿ ಗೆಲ್ಲುವುದು ಖಚಿತವಾಗಿದ್ದು ಇನ್ನೊಂದು ಸ್ಥಾನಕ್ಕೆ ತೀವ್ರ ಪೈಪೋಟಿ ನಡೆಯಲಿದೆ.
ಇಂದು ಬೆಳಗ್ಗೆ 9 ಗಂಟೆಯಿಂದ ಸಾಯಂಕಾಲ 4 ಗಂಟೆಯವರೆಗೆ ಮತದಾನ ನಡೆಯಲಿದೆ. ಸಂಜೆ 6 ಗಂಟೆಯ ಹೊತ್ತಿಗೆ ಫಲಿತಾಂಶ ಹೊರ ಬೀಳಲಿದೆ. ಮತದಾನಕ್ಕೆ ವಿಧಾನಸೌಧದ ಕೊಠಡಿ ಸಂಖ್ಯೆ 106ರಲ್ಲಿ ಎರಡು ಕಂಪಾರ್ಟ್ ಮೆಂಟ್ ನಿರ್ಮಿಸಲಾಗಿದೆ. ಕೊಠಡಿಯೊಳಗೆ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ.