ಲಾಕ್ ಡೌನ್ ತಂದರೂ ರೈತ ಪ್ರತಿಭಟನೆ ನಿಲ್ಲಲ್ಲ : ರಾಕೇಶ್ ಟಿಕಾಯತ್
ನವದೆಹಲಿ : ಕೇಂದ್ರ ಸರ್ಕಾರದ ಕೃಷಿ ಮಸೂದೆಗಳನ್ನ ವಿರೋಧಿಸಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿಭಟನೆ ಮುಂದುವರಿದೆ.
ಈ ಮಧ್ಯೆ ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ ಕಫ್ರ್ಯೂ, ಲಾಕ್ ಡೌನ್ ತಂದರೂ ರೈತ ಪ್ರತಿಭಟನೆ ಮುಂದುವರಿಯಲಿದೆ ಎಂದು ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ಹೇಳಿದ್ದಾರೆ.
ಸಹಾರನುಪುರದಲ್ಲಿ ರೈತರನ್ನುದ್ದೇಶಿಸಿ ಮಾತನಾಡಿದ ರಾಕೇಶ್ ಟಿಕಾಯತ್, ದೇಶದಲ್ಲಿ ರೈತರ ಪ್ರತಿಭಟನೆ ಮುಂದುವರಿಯಲಿದೆ.
ಇದು ಶಾಹೀನ್ ಬಾಗ್ ಅಲ್ಲ, ರೈತರ ಆಂದೋಲ. ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ ಕಫ್ರ್ಯೂ, ಲಾಕ್ ಡೌನ್ ತಂದರೂ ರೈತರ ಪ್ರತಿಭಟನೆ ಮುಂದುವರಿಯಲಿದೆ.
ದೇಶದಲ್ಲಿ ರೈತರ ಆಂದೋಲನ ನಿರಂತರವಾಗಿರಲಿದೆ. ನವೆಂಬರ್-ಡಿಸೆಂಬರ್ ವರೆಗೂ ಧರಣಿ ನಡೆಯಲಿದೆ.
ಕಫ್ರ್ಯೂ, ಲಾಕ್ ಡೌನ್ ಹೆಸರಿನ ಮೂಲಕ ರೈತರ ಆಂದೋಲನವನ್ನ ವಿಫಲಗೊಳಿಸುವ ವ್ಯರ್ಥ ಪ್ರಯತ್ನಕ್ಕೆ ಮುಂದಾಗಬೇಡಿ ಎಂದು ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದರು.
ಇನ್ನು ಕೇಂದ್ರ ಸರ್ಕಾರದ ಕೃಷಿ ಕಾನೂನುಗಳನ್ನ ವಿರೋಧಿಸಿ ದೆಹಲಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.
