ಅಮೀರ್ ಖಾನ್ – ಕಿರಣ್ ರಾವ್ ಡಿವೋರ್ಸ್ : ಡ್ರಾಮಾ ಕ್ವೀನ್ ರಾಖಿ ಸಾವಂತ್ ಪ್ರತಿಕ್ರಿಯೆ..!
ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಟ್ ಅಮಿರ್ ಖಾನ್ ಸದ್ಯ 2ನೇ ಪತ್ನಿ ಕಿರಣ್ ಅವರ ಜೊತೆಗೆ 15 ವರ್ಷಗಳ ದಾಂಪತ್ಯವನ್ನ ಕೊನೆಗೊಳಿಸಿಕೊಂಡಿದ್ದಾರೆ.. ವಿಚ್ಚೇಧನದ ಸುದ್ದಿಯನ್ನ ಬಹಿರಂಗಪಡಿಸಿದ್ದಾರೆ..
ಇದರ ಬೆನ್ನಲ್ಲೇ ಅಮಿರ್ ಖಾನ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗ್ತಾ ಇದ್ದಾರೆ.. ಈ ನಡುವೆ ಬಾಲಿವುಡ್ ನ ನೌಟಂಕಿ ಕ್ವೀನ್ ರಾಖಿ ಸಾವಂತ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಹೌದು ‘ಕಿರಣ್ ರಾವ್ ಅವರನ್ನು ದೂರ ಮಾಡಬೇಡಿ’ ಎಂದು ರಾಖಿ ವಿನಂತಿಸಿದ್ದಾರೆ. ‘ಸಹಜವಾಗಿ ಯಾರಾದರೂ ಬೇರ್ಪಟ್ಟರೆ ನನಗೆ ದುಃಖವಾಗುತ್ತದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಅಷ್ಟೇ ಅಲ್ಲ ‘ನಾನು ಇನ್ನು ಸಿಂಗಲ್ ಆಗಿದ್ದೇನೆ, ಅಮೀರ್ ಖಾನ್ ನನ್ನ ಬಗ್ಗೆ ಏನು ಯೋಚಿಸುತ್ತಾರೆ’ ಎಂದು ಪ್ರಶ್ನಿಸಿ ತಮಾಷೆ ಮಾಡಿದ್ದಾರೆ. ಅಂದ್ಹಾಗೆ 2018ರಲ್ಲಿ ಕಿರುತೆರೆ ಕಲಾವಿದ ದೀಪಕ್ ಕಲಲ್ ಜೊತೆ ವಿವಾಹವಾಗುವುದಾಗಿ ರಾಖಿ ಘೋಷಿಸಿದ್ದರು. ಬಳಿಕ ಸ್ವಲ್ಪ ದಿನದ ನಂತರ ನಾವು ಮದುವೆ ಆಗುತ್ತಿಲ್ಲ ಎಂದು ಹೇಳಿಕೊಂಡಿದ್ದರು.
2019ರಲ್ಲಿ ರಿತೇಶ್ ಎನ್ನುವ ಎನ್‌ಆರ್‌ಐ ಜೊತೆ ಮದುವೆ ಆಗಿದ್ದೇನೆ ಎಂದು ಕೆಲವು ಫೋಟೋಗಳನ್ನು ಬಹಿರಂಗಪಡಿಸಿದ್ದರು. ಆದರೆ, ಇದುವರೆಗೂ ಎನ್‌ಆರ್‌ಐ ಪತಿಯ ಪರಿಚಯ ನೀಡಿಲ್ಲ.