ADVERTISEMENT
Sunday, September 20, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ಖಾಸಗಿ ಸುದ್ದಿ ಮಾಧ್ಯಮಕ್ಕೆ ರಕ್ಷಿತ್ ಶೆಟ್ಟಿ a sweet warning

Mahesh M Dhandu by Mahesh M Dhandu
July 2, 2021
in Cinema, Newsbeat, ಮನರಂಜನೆ
rakshit-shetty
Share on FacebookShare on TwitterShare on WhatsappShare on Telegram

ಖಾಸಗಿ ಸುದ್ದಿ ಮಾಧ್ಯಮಕ್ಕೆ ರಕ್ಷಿತ್ ಶೆಟ್ಟಿ a sweet warning

ನಿಮ್ಮ ಬಳಿ ಇರುವ ಅಸ್ತ್ರ ಟಿಆರ್ ಪಿಗೋಸ್ಕರ ನಡೆಸುತ್ತಿರುವ ಒಂದು ನ್ಯೂಸ್ ಚಾನಲ್. ನನ್ನ ಬಳಿ ಇರುವ ಅಸ್ತ್ರ ಕೆಲಸದ ಮೇಲಿರೋ ನನ್ನ ಶ್ರದ್ಧೆ, ಜೀವನದಲ್ಲಿ ಅಳವಡಿಸಿಕೊಂಡಿರುವ ನೀತಿ, ನನ್ನ ಸಿನಿಮಾ ಹಾಗು ಜನಬೆಂಬಲ. ಇವೆರಡರಲ್ಲಿ ಜಯ ಯಾರಿಗೆ ಎಂದು ನೋಡಿ ಬಿಡೋಣ ಎಂದು ಕನ್ನಡದ ಸುದ್ದಿ ಮಾಧ್ಯಮದ ವಿರುದ್ಧ ನಟ, ನಿರ್ದೇಶಕ ಸ್ಯಾಂಡಲ್ ವುಡ್ ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸಮರ ಸಾರಿದ್ದಾರೆ.

Related posts

ಎಸ್‌ಸಿ ಕೋಟಾದಡಿ ಸುಳ್ಳು ಮಾಹಿತಿ ನೀಡಿ ಸೈಟ್ ಪಡೆದರಾ ಖರ್ಗೆ ಕುಟುಂಬ!:ಸಿದ್ಧಾರ್ಥ ವಿಹಾರ ಟ್ರಸ್ಟ್ ಭೂ ಹಗರಣದ ಬಗ್ಗೆ ವಿಶೇಷ ಕೋರ್ಟ್‌ನಿಂದ ಲೋಕಾಯುಕ್ತ ಎಸ್ಪಿಗೆ ಸಮನ್ಸ್

ಎಸ್‌ಸಿ ಕೋಟಾದಡಿ ಸುಳ್ಳು ಮಾಹಿತಿ ನೀಡಿ ಸೈಟ್ ಪಡೆದರಾ ಖರ್ಗೆ ಕುಟುಂಬ!:ಸಿದ್ಧಾರ್ಥ ವಿಹಾರ ಟ್ರಸ್ಟ್ ಭೂ ಹಗರಣದ ಬಗ್ಗೆ ವಿಶೇಷ ಕೋರ್ಟ್‌ನಿಂದ ಲೋಕಾಯುಕ್ತ ಎಸ್ಪಿಗೆ ಸಮನ್ಸ್

September 20, 2026
ರಾಜಣ್ಣ ನಿವಾಸದಲ್ಲಿ ಸಿದ್ದರಾಮಯ್ಯ ಔತಣಕೂಟ: ಸಚಿವ ಸ್ಥಾನ ಸೇರಿ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚೆ?

ರಾಜಣ್ಣ ನಿವಾಸದಲ್ಲಿ ಸಿದ್ದರಾಮಯ್ಯ ಔತಣಕೂಟ: ಸಚಿವ ಸ್ಥಾನ ಸೇರಿ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚೆ?

September 20, 2026

ಹೌದು..! ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸದ್ಯ ಸ್ಯಾಂಡಲ್ ವುಡ್ ಮಾತ್ರವಲ್ಲದೇ ಪ್ಯಾನ್ ಇಂಡಿಯಾ ಸಿನಿಮಾಗಳ ಮೂಲಕ ಸಿನಿ ಪ್ರೇಕ್ಷಕರ ದಿಲ್ ಕದಿಯುತ್ತಿದ್ದಾರೆ. ವಿಭಿನ್ನ ಚಿತ್ರಗಳ ಮೂಲಕ ಚಿತ್ರ ರಸಿಕರನ್ನು ರಂಜಿಸುವ ರಕ್ಷಿತ್ ಶೆಟ್ಟಿ ನಟನೆಯ ಕಿರಿಕ್ ಪಾರ್ಟಿ ಕನ್ನಡಚಿತ್ರರಂಗದ ಮಟ್ಟಿಗೆ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಇದೀಗ ಈ ಸಿನಿಮಾ ವಿಚಾರವಾಗಿ ಈಗ ರಕ್ಷಿತ್ ಶೆಟ್ಟಿ ವಿರುದ್ಧ ಖಾಸಗಿ ಸುದ್ದಿಮಾಧ್ಯಮವೊಂದು ಇಲ್ಲ ಸಲ್ಲದ ಆರೋಪ ಮಾಡಿ ಸುದ್ದಿ ಪ್ರಸಾರ ಮಾಡಿದೆ. ಇದಕ್ಕೆ ರಕ್ಷಿತ್ ಶೆಟ್ಟಿ ಬೇಸರ ಹೊರ ಹಾಕಿದ್ದಲ್ಲದೇ ಒಂದು ಸ್ವೀಟ್ ವಾರ್ನಿಂಗ್ ಕೂಡ ಕೊಟ್ಟಿದ್ದಾರೆ.

ಈ ಕುರಿತು ಸವಿಸ್ತಾರವಾದ ಪತ್ರದ ಬರೆದು ಟ್ವೀಟ್ ಮಾಡಿರುವ ಸಿಂಪಲ್ ಸ್ಟಾರ್, ನನ್ನ ವೃತ್ತಿ ಜೀವನದಲ್ಲಿ ಯಾರೆಲ್ಲಾ ನನ್ನ ಜೊತೆ ಕೆಲಸ ಮಾಡಿದ್ದಾರೋ, ಅವರಲ್ಲಿ ಶೇಕಡ 90ರಷ್ಟು ಜನ ಇಂದಿಗೂ ನನ್ನ ಜೊತೆಯಲ್ಲೇ ಇದ್ದಾರೆ. ಬಿಟ್ಟು ಹೋದವರು ನನ್ನಿಂದ, ನನ್ನ ಕೆಲಸದಿಂದ ಏನಾದರೂ ಪಡೆದುಕೊಂಡು ಹೋಗಿದ್ದಾರೆಯೇ ಹೊರತು, ಯಾರೂ ಕಳೆದುಕೊಂಡು ಹೋಗಿಲ್ಲ. ಕಳೆದುಕೊಂಡವರಿಗೆ ಮುಂದೆ ಹೋಗಿ ಸಹಾಯ ಮಾಡಿದ್ದೀನಿ, ಅಥವಾ ಅವರಿಗೆ ಭುಜ ಕೊಟ್ಟು ನಿಂತಿದ್ದೀನಿ. ಇದಕ್ಕೆ ನನ್ನ ಜೊತೆ ಕೆಲಸ ಮಾಡಿದ ಪ್ರತಿಯೊಬ್ಬ ಲೈಟ್ ಆಫೀಸರ್ ಇಂದ ಹಿಡಿದು, ತಾಂತ್ರಿಕ ವರ್ಗ, ನಿರ್ದೇಶಕರು ಹಾಗೂ ಪ್ರತಿಯೊಬ್ಬ ನಿರ್ಮಾಪಕರು ಸಾಕ್ಷಿ. ನಾನು ಇದೆಲ್ಲದರ ಬಗ್ಗೆ ಎಲ್ಲೂ ಮಾತನಾಡಲು ಬಯಸುವುದಿಲ್ಲ. ನನಗೆ ಅದರ ಅಗತ್ಯವೂ ಇಲ್ಲ. ಹಾಗಂತ ನಿಜ ಸುಳ್ಳಾಗುವುದಿಲ್ಲ.

rakshit-shetty

ಕನ್ನಡದ ಒಂದು ನ್ಯೂಸ್ ಚಾನೆಲ್ ಕಳೆದ ಎರಡು ವರ್ಷಗಳಲ್ಲಿ ನನ್ನ ಬಗ್ಗೆ ಈ ರೀತಿಯ ಹಲವಾರು ಕಾರ್ಯಕ್ರಮಗಳನ್ನು ಮಾಡಿದ್ದಾರೆ. ನಾನು ಈ ಎಲ್ಲಾ ತೇಜೋವಧೆಯ ಪ್ರಯತ್ನಗಳನ್ನು ನಿರ್ಲಕ್ಷಿಸುತ್ತಾ ಬಂದಿದ್ದೆ. ಕಾರಣ ಇದಕ್ಕೆಲ್ಲ ನನ್ನ ಕೆಲಸ ಉತ್ತರ ಕೊಡುತ್ತದೆ ಎಂಬ ನಂಬಿಕೆ ಇತ್ತು. ಈಗ ಮತ್ತೊಮ್ಮೆ ಈ ಸುದ್ದಿ ವಾಹಿನಿಯು, ಮಾಧ್ಯಮದ ನೈತಿಕ ಜವಾಬ್ದಾರಿಗಳನ್ನು ಮರೆತು, ವೈಯುಕ್ತಿಕ ದಾಳಿ ನಡೆಸಿ, ನನ್ನ ವ್ಯಕ್ತಿತ್ವಕ್ಕೆ ಮತ್ತೆ ಮಸಿ ಬಳಿಯುವ ಕೀಳು ಮಟ್ಟದ ಕೆಲಸಕ್ಕೆ ಇಳಿದಿದ್ದಾರೆ.

ಈ ಬಾರಿ ಇದನ್ನು ನಿರ್ಲಕ್ಷಿಸಲು ನನ್ನ ಮನಸ್ಸು ಒಪ್ಪುತ್ತಿಲ್ಲ. ಇದಕ್ಕೆ ಉತ್ತರ ಕೊಡುತ್ತೇನೆ, ಆದರೆ ಹತ್ತು ದಿನಗಳ ಬಳಿಕ. ಅಲ್ಲಿಯವರೆಗೆ ನಾನು ಕೆಲಸ ಮಾಡಿದ ಪ್ರತಿಯೊಂದು ಸಿನಿಮಾದ ಕುರಿತು, ಯಾವ ಯಾವ ಸತ್ಯ ಹೊರಗೆ ಬರುತ್ತದೋ, ಅವರವರ ಬಾಯಿಯಿಂದಲೇ ಹೊರಬರಲಿ. ನಾನು ಕಾದು ನೋಡುತ್ತೇನೆ. ನನ್ನ ಉತ್ತರ ಜುಲೈ 11ರಂದು ಕಾದು ನೋಡಿ. Truth is mighty and must prevail. ನನ್ನ ಎಲ್ಲಾ ಏಳು ಬೀಳುಗಳಲ್ಲಿ ನನ್ನ ಜೊತೆಗಿದ್ದ ನನ್ನ ಆತ್ಮೀಯರಿಗೂ, ಹಿತೈಷಿಗಳಿಗೂ, ಅಭಿಮಾನಿ ಬಳಗಕ್ಕೂ ಚಿರಋಣಿ ಎಂದು ಪತ್ರ ಅಂತ್ಯಗೊಳಿಸಿದ್ದಾರೆ.

ಸದ್ಯ ರಕ್ಷಿತ್ ಶೆಟ್ಟಿಯ ಪತ್ರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅವರ ಅಭಿಮಾನಿಗಳು ಯುದ್ಧ ಮಾಡಮಾಡಬೇಕು, ಓದಬಾರದು ಕಟುಕರ ಮುಂದೆ ಭಗವತ್ ಗೀತೆ ಎಂದು ರಿಪೋಸ್ಟ್ ಮಾಡುತ್ತಿದ್ದಾರೆ.

Tags: kirik partyPublic TVRakshith ShettySandalwood
ShareTweetSendShare
Join us on:

Related Posts

ಎಸ್‌ಸಿ ಕೋಟಾದಡಿ ಸುಳ್ಳು ಮಾಹಿತಿ ನೀಡಿ ಸೈಟ್ ಪಡೆದರಾ ಖರ್ಗೆ ಕುಟುಂಬ!:ಸಿದ್ಧಾರ್ಥ ವಿಹಾರ ಟ್ರಸ್ಟ್ ಭೂ ಹಗರಣದ ಬಗ್ಗೆ ವಿಶೇಷ ಕೋರ್ಟ್‌ನಿಂದ ಲೋಕಾಯುಕ್ತ ಎಸ್ಪಿಗೆ ಸಮನ್ಸ್

ಎಸ್‌ಸಿ ಕೋಟಾದಡಿ ಸುಳ್ಳು ಮಾಹಿತಿ ನೀಡಿ ಸೈಟ್ ಪಡೆದರಾ ಖರ್ಗೆ ಕುಟುಂಬ!:ಸಿದ್ಧಾರ್ಥ ವಿಹಾರ ಟ್ರಸ್ಟ್ ಭೂ ಹಗರಣದ ಬಗ್ಗೆ ವಿಶೇಷ ಕೋರ್ಟ್‌ನಿಂದ ಲೋಕಾಯುಕ್ತ ಎಸ್ಪಿಗೆ ಸಮನ್ಸ್

by Shwetha
September 20, 2026
0

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಕುಟುಂಬದ ಮಾಲೀಕತ್ವದ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಬಿಡಿಎ ವತಿಯಿಂದ ಅಕ್ರಮವಾಗಿ ನಿವೇಶನ ಮಂಜೂರು...

ರಾಜಣ್ಣ ನಿವಾಸದಲ್ಲಿ ಸಿದ್ದರಾಮಯ್ಯ ಔತಣಕೂಟ: ಸಚಿವ ಸ್ಥಾನ ಸೇರಿ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚೆ?

ರಾಜಣ್ಣ ನಿವಾಸದಲ್ಲಿ ಸಿದ್ದರಾಮಯ್ಯ ಔತಣಕೂಟ: ಸಚಿವ ಸ್ಥಾನ ಸೇರಿ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚೆ?

by Shwetha
September 20, 2026
0

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ವಿವಿಧ ಕಾರ್ಯಕ್ರಮಗಳ ನಿಮಿತ್ತ ತುಮಕೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರ ಕ್ಯಾತಸಂದ್ರ ನಿವಾಸಕ್ಕೆ ತೆರಳಿ...

ಕರಾವಳಿಯನ್ನು ಅಭಿವೃದ್ಧಿಯ ಪ್ರಯೋಗಶಾಲೆಯಾಗಿ ಪರಿವರ್ತಿಸುತ್ತಿದ್ದೇವೆ :ತುಳು ಭಾಷೆಗೆ ಗೌರವ ನೀಡಿದ್ದು ಕಾಂಗ್ರೆಸ್ ಬಿಜೆಪಿಯ ಟೀಕೆ ಹತಾಶೆಯ ಪ್ರತೀಕ ಎಂದ  ಪ್ರಿಯಾಂಕ್ ಖರ್ಗೆ

ಕರಾವಳಿಯನ್ನು ಅಭಿವೃದ್ಧಿಯ ಪ್ರಯೋಗಶಾಲೆಯಾಗಿ ಪರಿವರ್ತಿಸುತ್ತಿದ್ದೇವೆ :ತುಳು ಭಾಷೆಗೆ ಗೌರವ ನೀಡಿದ್ದು ಕಾಂಗ್ರೆಸ್ ಬಿಜೆಪಿಯ ಟೀಕೆ ಹತಾಶೆಯ ಪ್ರತೀಕ ಎಂದ ಪ್ರಿಯಾಂಕ್ ಖರ್ಗೆ

by Shwetha
September 20, 2026
0

ಕರಾವಳಿ ಕರ್ನಾಟಕವನ್ನು ಬಿಜೆಪಿ ಕೇವಲ ಕೋಮುವಾದದ ಪ್ರಯೋಗಶಾಲೆಯನ್ನಾಗಿ ಬಳಸಿಕೊಂಡಿತ್ತು ಆದರೆ ನಾವು ಅದನ್ನು ಅಭಿವೃದ್ಧಿಯ ಪ್ರಯೋಗಶಾಲೆಯನ್ನಾಗಿ ಪರಿವರ್ತಿಸುತ್ತಿದ್ದೇವೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರತಿಪಕ್ಷ...

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಸಾಧ್ಯತೆ: ರಾಜ್ಯದಲ್ಲಿ ವಾರವಿಡೀ ಭಾರೀ ಮಳೆ, ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಸಾಧ್ಯತೆ: ರಾಜ್ಯದಲ್ಲಿ ವಾರವಿಡೀ ಭಾರೀ ಮಳೆ, ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

by Shwetha
September 20, 2026
0

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಮುಂದಿನ ಒಂದು ವಾರ ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD)...

ಮದುವೆಯಾಗದ ಮೋದಿಗೆ ತ್ರಿಪಲ್ ತಲಾಕ್ ಯಾಕೆ ಬೇಕು:ಮಹಾ ಮಾನವನ ಹನ್ನೆರಡು ವರ್ಷದ ಆಡಳಿತ ಶೂನ್ಯ-ಮಸೀದಿ ಮುಂದೆ ಡಿಜೆ ಹಾಕೋದು ಭಕ್ತಿಯಲ್ಲ ಪ್ರಧಾನಿ ಮೋದಿ ವಿರುದ್ಧ ಹರಿಪ್ರಸಾದ್ ಕಿಡಿ

ಮದುವೆಯಾಗದ ಮೋದಿಗೆ ತ್ರಿಪಲ್ ತಲಾಕ್ ಯಾಕೆ ಬೇಕು:ಮಹಾ ಮಾನವನ ಹನ್ನೆರಡು ವರ್ಷದ ಆಡಳಿತ ಶೂನ್ಯ-ಮಸೀದಿ ಮುಂದೆ ಡಿಜೆ ಹಾಕೋದು ಭಕ್ತಿಯಲ್ಲ ಪ್ರಧಾನಿ ಮೋದಿ ವಿರುದ್ಧ ಹರಿಪ್ರಸಾದ್ ಕಿಡಿ

by Shwetha
September 20, 2026
0

ಕೇಂದ್ರ ಸರ್ಕಾರದ ಆಡಳಿತ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ವೈಯಕ್ತಿಕ ಜೀವನದ ಕುರಿತು ಕೆಪಿಸಿಸಿ ನಾಯಕ ಬಿ ಕೆ ಹರಿಪ್ರಸಾದ್ ಅವರು ಅತ್ಯಂತ ಕಟು ಶಬ್ದಗಳಿಂದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram