ದರ್ಶನ್ ಜೊತೆಗೆ ಪ್ರೇಮ್ ಮುಂದಿನ ಸಿನಿಮಾ – ಸುಳ್ಳು ಸುದ್ದಿಗೆ ಸ್ಪಷ್ಟನೆ ನೀಡಿದ ರಕ್ಷಿತಾ

1 min read

ದರ್ಶನ್ ಜೊತೆಗೆ ಪ್ರೇಮ್ ಮುಂದಿನ ಸಿನಿಮಾ – ಸುಳ್ಳು ಸುದ್ದಿಗೆ ಸ್ಪಷ್ಟನೆ ನೀಡಿದ ರಕ್ಷಿತಾ

ಬೆಂಗಳೂರು:  ಪ್ರಸ್ತುತ ‘ ಏಕ್ ಲವ್ ಯಾ’ ಸಿನಿಮಾದಲ್ಲಿ ನಿರ್ದೇಶಕ ಪ್ರೇಮ್ ಅವರು ಬ್ಯುಸಿಯಿದ್ದಾರೆ.. ಈ ನಡುವೆ ಪ್ರೇಮ್ ಅವರು ಮುಂದಿನ ಸಿನಿಮಾವನ್ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ ಮಾಡಲಿದ್ದಾರೆ ಎನ್ನೋ ಸುದ್ದಿ ಸದ್ಯ  ಸಾಮಾಜಿಕ ಜಾಲತಾಣಗದಲ್ಲಿ ವ್ಯಾಪಕವಾಗಿ ಚರ್ಚೆಯಾಗ್ತಿದೆ.. ಆದ್ರೆ ಇದೀಗ ಈ ಸುಳ್ಳು ಸುದ್ದಿಗೆ ಖುದ್ದು ಪ್ರೇಮ್ ಪತ್ನಿ ನಟಿ ರಕ್ಷಿತಾ ಅವರು ಬ್ರೇಕ್ ಹಾಕಿದ್ದಾರೆ.

ನಿರ್ದೇಶಕ ಪ್ರೇಮ್ ಹೆಸರಿನಲ್ಲಿ ನಕಲಿ ಟ್ವಿಟ್ಟರ್ ಖಾತೆ ತೆರೆಯಲಾಗಿದ್ದು, ಅದರ ಮುಖಾಂತರ ಪ್ರೇಮ್ ನಿರ್ದೇಶನದ ಮುಂದಿನ ಚಿತ್ರವನ್ನು ಘೋಷಿಸಲಾಗಿದೆ. ದರ್ಶನ್ ಅವರ ಜೊತೆಗೆ ಮುಂದಿನ ಸಿನಿಮಾ ಮಾಡಲಿದ್ದಾರೆ ಎನ್ನುವ ಕುರಿತಾಗಿ ಸುಳ್ಳು ಸುದ್ದಿ ನಿರ್ದೇಶಕ ಪ್ರೇಮ್ ಹೆಸರಿನಲ್ಲಿರು ನಕಲಿ ಟ್ವಿಟ್ಟರ್ ಖಾತೆ ಮುಖಾಂತರ ಪ್ರೇಮ್ ನಿರ್ದೇಶನದ ಮುಂದಿನ ಚಿತ್ರವನ್ನು ಘೋಷಿಸಲಾಗಿತ್ತು.darshan

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 55ನೇ ಚಿತ್ರಕ್ಕೆ ನಾನು ಆಕ್ಷನ್ ಕಟ್ ಹೇಳಲಿದ್ದೇನೆ. ಶೀರ್ಷಿಕೆ ಮತ್ತು ಫಸ್ಟ್ ಲುಕ್ ಬಗ್ಗೆ ಸದ್ಯದಲ್ಲೇ ಅನೌನ್ಸ್ ಮಾಡುವೆ ಎಂದು ಪ್ರೇಮ್ ಹೆಸರಿನಲ್ಲಿ ಸೃಷ್ಟಿಯಾಗಿರುವ ನಕಲಿ ಖಾತೆ ಮೂಲಕ ಟ್ವೀಟ್ ಮಾಡಲಾಗಿತ್ತು. ಇದಕ್ಕೆ ರಕ್ಷಿತಾ ಸ್ಪಷ್ಟನೆ ನೀಡಿದ್ದಾರೆ.  ಟ್ವಿಟ್ ಮಾಡಿ , ಇದು ಪ್ರೇಮ್ ಅವರ ಅಕೌಂಟ್ ಅಲ್ಲ. ಇದನ್ನ ಯಾರೇ ಹೇಳಿದ್ದರೂ ಅವರಿಗೆ ದೇವರು ಒಳ್ಳೆಯದು ಮಾಡಲಿ. ಪ್ರೇಮ್ ಮತ್ತು ದರ್ಶನ್ ಆದಷ್ಟು ಬೇಗ ಒಟ್ಟಿಗೆ ಕೆಲಸ ಮಾಡಲಿ ಎಂಬುದು ನನ್ನ ನಿರೀಕ್ಷೆಯೂ ಹೌದು ಎಂದು ರಕ್ಷಿತಾ ಪ್ರೇಮ್ ಟ್ವೀಟ್ ಮಾಡಿ ಗೊಂದಲಕ್ಕೆ ತೆರೆ ಎಳೆದು ಸ್ಪಷ್ಟ ಪಡಿಸಿದ್ದಾರೆ.

ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd