ನಾಟು ನಾಟುಗೆ ಗೆ ಹೆಜ್ಜೆ ಹಾಕಿದ ಕೀರ್ತಿ, ರಾಮ್ ಚರಣ್
ನಟಿ ಕೀರ್ತಿ ಸುರೇಶ್ ಅಭಿನಯದ ಗುಡ್ ಲಕ್ ಸಖಿ ಚಿತ್ರ ಇದೇ ಜನವರಿ 28 ರಂದು ಥಿಯೇಟರ್‌ಗಳಿಗೆ ಬರಲು ಸಿದ್ಧವಾಗಿದೆ. ಚಿತ್ರದ ನಿರ್ಮಾಪಕರು ಜನವರಿ 26 ರಂದು ಹೈದರಾಬಾದ್‌ನಲ್ಲಿ ಪ್ರಿ-ರಿಲೀಸ್ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ನಟ ರಾಮ್ ಚರಣ್ ಆಗಮಿಸಿ ಸಖಿ ತಂಡಕ್ಕೆ ಶುಭ ಹಾರೈಸಿದರು. ಈ ಸಮಯದಲ್ಲಿ RRR ನ ಹಿಟ್ ಸಾಂಗ್ ನಾಟು ನಾಟುಗೆ ಸ್ಟೇಜ್ ಮೇಲೆ ಹೆಜ್ಜೆ ಹಾಕಿದರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ನಿರ್ದೇಶಕ ನಾಗೇಶ್ ಕುಕುನೂರ್ ಅವರ ಗುಡ್ ಲಕ್ ಸಖಿ ಚಿತ್ರದಲ್ಲಿ ಕೀರ್ತಿ ಸುರೇಶ್ ಶಾರ್ಪ್ ಶೂಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೊರೊನಾ ವೈರಸ್ ಕಾರಣದಿಂದಾಗಿ ಚಿತ್ರದ ಬಿಡುಗಡೆಯನ್ನು ಹಲವು ಬಾರಿ ಮುಂದೂಡಲಾಗಿತ್ತು. ಇದೀಗ, ಗುಡ್ ಲಕ್ ಸಖಿ ಜನವರಿ 28 ರಂದು ಗ್ರ್ಯಾಂಡ್ ರಿಲೀಸ್‌ಗೆ ಸಜ್ಜಾಗುತ್ತಿದೆ.
Ram Charan & Keerthy Suresh Dance for ‘Naatu’… during #GoodLuckSakhi Pre Release Event.
— Christopher Kanagaraj (@Chrissuccess) January 26, 2022
ಗುಡ್ ಲಕ್ ಸಖಿಯ ಪ್ರೀ-ರಿಲೀಸ್ ಈವೆಂಟ್‌ನಲ್ಲಿ, ರಾಮ್ ಚರಣ್ ತಂಡವನ್ನು ಹೊಗಳಿ ತಮ್ಮ ಶುಭಾಶಯಗಳನ್ನು ತಿಳಿಸಿದರು. ಗುಡ್ ಲಕಿ ಸಖಿ ಚಿತ್ರಕ್ಕ ಮೆಗಾ ಸ್ಟಾರ್ ಚಿರಂಜೀವಿ ಮುಖ್ಯ ಅತಿಥಿಯಾಗಿ ಆಗಮಿಸಬೇಕಿತ್ತು. ಆದರೆ ನಿನ್ನೆ ಅವರಿಗೆ ಕರೋನಾ ದೃಢ ಪಟ್ಟಿದ್ದರಿಂದ ಅವರ ಬದಲಾಗಿ ಪುತ್ರ ರಾಮ್ ಚರಣ್ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.
ಗುಡ್ ಲಕ್ ಸಖಿ ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್ ಸಂಗೀತ ಸಂಯೋಜಿಸಿದ್ದಾರೆ. ಸುಧೀರ್ ಚಂದ್ರ ನಿರ್ಮಾಣಕ್ಕೆ ಬಂಡಾವಾಳ ಹೂಡಿದ್ದಾರೆ. ಹೈದರಾಬಾದ್ ಮತ್ತು ಪುಣೆಯಲ್ಲಿ ಪ್ರಧಾನವಾಗಿ ಚಿತ್ರೀಕರಿಸಲಾಗಿದೆ. ಆದಿ ಪಿನಿಸೆಟ್ಟಿ ಮತ್ತು ಜಗಪತಿ ಬಾಬು ಕೂಡ ಚಿತ್ರದಲ್ಲಿ ನಟಿಸಿದ್ದಾರೆ.






