Vikrant Rona | ಇಂಡಿಯನ್ ಸಿನಿಮಾಗೆ ಸ್ಯಾಂಡಲ್ ವುಡ್ ಬೆಂಚ್ ಮಾರ್ಕ್…
ಸುದೀಪ್ ನಾಯಕನಾಗಿ ಜಾಕ್ವೆಲಿನ್ ಫರ್ನಾಂಡೀಸ್, ನಿರೂಪ್ ಭಂಡಾರಿ ಮತ್ತು ನೀತಾ ಅಶೋಕ್ ಇತರ ಪಾತ್ರಗಳಲ್ಲಿ ನಟಿಸಿರುವ ಚಿತ್ರ ‘ವಿಕ್ರಾಂತ್ ರೋಣ’.
ಸಲ್ಮಾನ್ ಖಾನ್ ಫಿಲ್ಮ್ಸ್ ಸಮರ್ಪಣೆಯಲ್ಲಿ, ಜೀ ಸ್ಟುಡಿಯೋಸ್, ಕಿಚ್ಚ ಕ್ರಿಯೇಷನ್ಸ್ ಮತ್ತು ಶಾಲಿನಿ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಜಾಕ್ ಮಂಜುನಾಥ್ ನಿರ್ಮಾಣದ ಈ ಚಿತ್ರ ಜುಲೈ 28 ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ.
ಇತ್ತೀಚೆಗೆ ಚಿತ್ರದ ತೆಲುಗು ಟ್ರೇಲರ್ ಅನ್ನು ಹೈದರಾಬಾದ್‌ನಲ್ಲಿ ಬಿಡುಗಡೆ ಮಾಡಲಾಗಿದೆ.
ಈ ಕಾರ್ಯಕ್ರಮದಲ್ಲಿ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಭಾಗವಹಿಸಿ, ಚಿತ್ರತಂಡಕ್ಕೆ ಶುಭಕೋರಿದ್ರು.

ಸುದೀಪ್ ಅವರನ್ನು ಉದ್ದೇಶಿಸಿ ಮಾತನಾಡಿದ ಆರ್ ಜಿವಿ, ಕನ್ನಡ ಇಂಡಸ್ಟ್ರಿ ಅಂದ್ರೆ ಎಲ್ಲೋ ಒಂದು ಸಣ್ಣ ಹಳ್ಳಿಯಲ್ಲಿ ಸಿನಿಮಾಗಳು ಮಾಡುತ್ತಿದ್ದಾರೆ ಅನ್ನೋ ಫೀಲಿಂಗ್ ಈ ಹಿಂದೆ ಇತ್ತು.
ಆದ್ರೆ ಪ್ರಸ್ತುತ ತೆಲುಗು ಸಿನಿಮಾ ಇಂಡಸ್ಟ್ರಿಗೆ ಮಾತ್ರವಲ್ಲದೇ ಇಂಡಿಯನ್ ಸಿನಿಮಾಗೆ ಒಂದು ಬೆಂಚ್ ಮಾರ್ಕ್ ಕ್ರಿಯೆಟ್ ಮಾಡುತ್ತಿದೆ.
ಈ ನಡುವೆ ಕೆಜಿಎಫ್ 2 ಸಿನಿಮಾ ಬಂತು, ಈಗ ವಿಕ್ರಾಂತ್ ರೋಣ ಬರುತ್ತಿದೆ. ಸುದೀಪ್ ಕೆರಿಯರ್ ನಲ್ಲಿ ಇದು ಬೆಸ್ಟ್ ಪರ್ಫಾಮೆನ್ಸ್ ಅಂದುಕೊಳ್ಳುತ್ತಿದ್ದೇನೆ ಎಂದು ಹೇಳಿದರು.
ಇನ್ನು ನಟ ಅಕ್ಕಿನೇನಿ ಅಖಿಲ್ ಮಾತನಾಡಿ, “ವಿಕ್ರಾಂತ್ ರೋಣ” ಕನ್ನಡ ಚಿತ್ರರಂಗದ ಮತ್ತೊಂದು ಬ್ರೇಕಿಂಗ್ ಚಿತ್ರವಾಗಲಿದೆ. ನಾನು ದಕ್ಷಿಣ ಭಾರತೀಯನಾಗಿರುವುದಕ್ಕೆ ತುಂಬಾ ಹೆಮ್ಮೆಯಾಗುತ್ತಿದೆ ಎಂದರು.








