RGV : ದಿ ಕಾಶ್ಮೀರ ಫೈಲ್ಸ್ ಸಿನಿಮಾ ನಿಜವಾದ ಗೇಮ್ ಚೇಂಜರ್

1 min read
ram-gopal-varma-compares-rrr-and-kashmir-files saaksha tv

RGV : ದಿ ಕಾಶ್ಮೀರ ಫೈಲ್ಸ್ ಸಿನಿಮಾ ನಿಜವಾದ ಗೇಮ್ ಚೇಂಜರ್

ದಿ ಕಾಶ್ಮೀರ ಫೈಲ್ಸ್ ಸಿನಿಮಾ ನಿಜವಾದ ಗೇಮ್ ಚೇಂಜರ್ ಎಂದು ಸೆನ್ಸೇಷನಲ್ ಡೈರೆಕ್ಟರ್ ರಾಮ್ ಗೋಪಾಲ್ ವರ್ಮಾ  ಹೇಳಿದ್ದಾರೆ.

ಸುದ್ದಿವಾಹಿನಿಯೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ರಾಮ್ ಗೋಪಾಲ್ ವರ್ಮಾ,  ಮಾರ್ಚ್ 25 ರಂದು ವಿಶ್ವಾದ್ಯಂತ ಬಿಡುಗಡೆಯಾದ ಆರ್ ಆರ್ ಆರ್ ಸಿನಿಮಾ ಸಿನಿಮಾವನ್ನು ಆರಂಭದಲ್ಲಿ ಹೊಗಳಿದರು.

 ನನ್ನ ಪ್ರಕಾರ ಆರ್‌ಆರ್‌ಆರ್ ಸಿನಿಮಾ ದೊಡ್ಡ ಸಿನಿಮಾ. ಆದರೆ ಅದು ಗೇಮ್ ಚೇಂಜರ್ ಅಲ್ಲ. ಏಕೆಂದರೆ ರಾಜಮೌಳಿ ಸಿನಿಮಾ ಸಮಾಜದಲ್ಲಿ ಬದಲಾವಣೆ ತರುತ್ತದೆ ಎಂದು ನಾನು ಭಾವಿಸುವುದಿಲ್ಲ.

ram-gopal-varma-compares-rrr-and-kashmir-files saaksha tv

ಆರ್‌ಆರ್‌ಆರ್ ಒಂದು ರೀತಿಯ ಚಿತ್ರವಾಗಿದ್ದು, ಇದು ಭಾರಿ ಬಜೆಟ್‌ನಲ್ಲಿ ನಿರ್ಮಾಣವಾಗಿದೆ ಮತ್ತು ನಾಲ್ಕೂವರೆ ವರ್ಷಗಳಿಗೊಮ್ಮೆ ಹೊರಬರುತ್ತದೆ. ಈ ರೀತಿಯ ಸಿನಿಮಾ ಮಾಡಲು ರಾಜಮೌಳಿ ಅವರಂತಹ ದೊಡ್ಡ ದಾಖಲೆ ಇರುವ ನಿರ್ದೇಶಕರು ಬೇಕು ಎಂದರು.

ಆದ್ರೆ ದಿ ಕಾಶ್ಮೀರ ಫೈಲ್ಸ್ ಸಿನಿಮಾ ನೋಡಿ. ಇದು ನಿಜವಾದ ಗೇಮ್ ಚೇಂಜರ್ ಸಿನಿಮಾವಾಗಿದೆ. ಇಂತಹ ಚಿತ್ರಗಳು ನಿರ್ದೇಶಕ-ನಿರ್ಮಾಪಕರಿಗೆ ಬೇಕಾದ ಆತ್ಮವಿಶ್ವಾಸವನ್ನು ನೀಡುತ್ತವೆ. ಅಂದರೆ ರೂ. 10 ಕೋಟಿ ಬಜೆಟ್‌ನಲ್ಲಿ ಚಿತ್ರ ನಿರ್ಮಿಸಿದ್ರೆ 250 ಕೋಟಿ ಕಲೆಕ್ಷನ್ ಮಾಡಿದಾಗೆ ಎಂದಿದ್ದಾರೆ.

ram-gopal-varma-compares-rrr-and-kashmir-files

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd