Kantara | ಸಣ್ಣ ಸಿನಿಮಾ ಹೊಡೆದಕ್ಕೆ ದೊಡ್ಡ ದಾಖಲೆ ಬ್ರೇಕ್ : ಕಾಂತಾರ ಬಗ್ಗೆ ಆರ್ ಜಿವಿ ಟ್ವೀಟ್
ಸದ್ಯ ದೇಶದಲ್ಲಿ ಟಾಕ್ ಆಪ್ ದಿ ಟೌನ್ ಆಗಿರುವುದು ಒಂದೇ ಒಂದು ಅದುವೇ ಕಾಂತಾರ ಸಿನಿಮಾ.
ಸದ್ಯ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿರುವ ಈ ಸಿನಿಮಾ ಕಲೆಕ್ಷನ್ ಗಳ ಸುರಿಮಳೆಗೈಯುತ್ತಿದೆ.
ರಿಷಬ್ ಶೆಟ್ಟಿ ಹೀರೋಯಾಗಿ ಸ್ವತಃ ನಿರ್ದೇಶಿಸಿರುವ ಈ ಸಿನಿಮಾ ಕನ್ನಡದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದೆ.
ಇದಾದ ಬಳಿಕ ತೆಲುಗು, ಹಿಂದಿ, ತಮಿಳು ಭಾಷೆಯಲ್ಲೂ ಈ ಸಿನಿಮಾ ರಿಲೀಸ್ ಆಗಿದ್ದು ಭಾರಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ.

ಇದೀಗ ಈ ಸಿನಿಮಾ ಸಕ್ಸಸ್ ಬಗ್ಗೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸ್ಪಂದಿಸಿದ್ದಾರೆ.
ಕೇವಲ ಸೂಪರ್ ಸ್ಟಾರ್ಸ್, ಮ್ಯಾಸಿವ್ ಪ್ರೋಡಕ್ಷನ್ ವಾಲ್ಯೂಸ್, ಸ್ಪೆಕ್ಟಾಕ್ಯೂಲರ್ ವಿಎಫ್ ಎಕ್ಸ್ ಮಾತ್ರವೇ ಜನರನ್ನು ಥಿಯೇಟರ್ ಅಂಗಳಕ್ಕೆ ಕರೆತರುತ್ತಿದೆ ಎಂದು ಫಿಲ್ಮ್ ಮೇಕರ್ಸ್ ಭಾವಿಸುತ್ತಿದ್ದಾರೆ.
ಇಂತಹ ಸಂದರ್ಭದಲ್ಲಿ ದೊಡ್ಡ ಹೆಸರಿಲ್ಲದ ಸಣ್ಣ ಸಿನಿಮಾ ರಿಕಾರ್ಡ್ ಬ್ರೇಕ್ ಮಾಡಿದೆ ಎಂದು ಆರ್ ಜಿ ವಿ ಟ್ವೀಟ್ ಮಾಡಿದೆ.