ಅಯೋಧ್ಯೆ – ಜೂನ್ 10ರಂದು ರಾಮಮಂದಿರಕ್ಕೆ ಅಡಿಪಾಯ
ಅಯೋಧ್ಯೆ, ಜೂನ್ 9: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಜೂನ್ 10ರಂದು ಅಡಿಪಾಯ ಹಾಕಲು ಸಿದ್ಥತೆ ನಡೆದಿದೆ. ರಾಮ ಮಂದಿರ ಕಮಿಟಿಯ ಪ್ರಧಾನ ಅಧ್ಯಕ್ಷ ಮಹಂತ್ ನೃತ್ಯ ಗೋಪಾಲ್ ದಾಸ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ರಾಮಮಂದಿರ ನಿರ್ಮಾಣ ಕೆಲಸವನ್ನು ಜೂನ್ 10 ರಿಂದ ಆರಂಭಿಸುವುದಾಗಿ ತಿಳಿಸಿದ್ದಾರೆ.
ಜೂನ್ 10ರಂದು ಬೆಳಿಗ್ಗೆ 8 ಗಂಟೆಗೆ ರಾಮ ಜನ್ಮಭೂಮಿ ಪ್ರದೇಶದಲ್ಲಿರುವ ಕುಬೇರ್ ತಿಲ ಮಂದಿರದಲ್ಲಿರುವ ಭಗವಾನ್ ಶಿವನಿಗೆ ರುದ್ರಾಭಿಷೇಕ ಮಾಡುವ ಮೂಲಕ ರಾಮ ಮಂದಿರ ಕಟ್ಟುವ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ ಎಂದು ಅವರು ತಿಳಿಸಿದರು. ಪುರಾಣದಲ್ಲಿ
ಭಗವಾನ್ ಶ್ರೀರಾಮನೂ ಕೂಡ ಲಂಕೆಯ ಒಡೆಯ ರಾವಣನ ಮೇಲೆ ಯುದ್ಧಕ್ಕೆ ಹೋಗುವ ಮೊದಲು ಶಿವಲಿಂಗಕ್ಕೆ ಪೂಜೆ ಸಲ್ಲಿಸುತ್ತಿದ್ದ ಎಂದಿರುವ ಮಂದಿರ ಟ್ರಸ್ಟ್ ನ ಮುಖ್ಯಸ್ಥರ ವಕ್ತಾರರು ಪುರಾತನ ಇತಿಹಾಸ ಹೊಂದಿರುವ ಈ ಶಿವನ ದೇವಾಲಯಲ್ಲಿ ಮೊದಲು ಪ್ರಾರ್ಥನೆ ಸಲ್ಲಿಸಿ, ರುದ್ರಾಭಿಷೇಕ ಮಾಡಿ ನಂತರ ನಾವು ಮಂದಿರ ಕಟ್ಟುವ ಕೆಲಸಕ್ಕೆ ಚಾಲನೆ ನೀಡಲಿದ್ದೇವೆ ಎಂದರು.
ಕಟ್ಟಡ ಕಾಮಗಾರಿಗೆ ಚಾಲನೆ ನೀಡುವ ಮೊದಲು ಧಾರ್ಮಿಕ ಸಮಾರಂಭಗಳು ನಡೆಯಲಿದ್ದು, ಕಮಲನಯನ ದಾಸ್ ಮತ್ತು ಇತರ ಸಂತರು ಪ್ರಾರ್ಥನೆ ನಡೆಸಲಿದ್ದಾರೆ ಎಂದು ಟ್ರಸ್ಟ್ ನ ವಕ್ತಾರರು ತಿಳಿಸಿದ್ದಾರೆ








