Ram Mandir : ನೇಪಾಳದಿಂದ ಅಯೋಧ್ಯೆ ತಲುಪಿದ ಸಾಲಿಗ್ರಾಮ ಶಿಲೆಗಳು…
ಅಯೋಧ್ಯೆ ಮತ್ತು ರಾಮಮಂದಿರ ನಿರ್ಮಾಣ ಕಾರ್ಯ ಸುಸೂತ್ರವಾಗಿ ನಡೆಯುತ್ತಿದೆ. ಶ್ರೀರಾಮ ಮತ್ತು ಸೀತೆಯ ವಿಗ್ರಹಗಳನ್ನ ನಿರ್ಮಿಸಲು ಸಾಲಿಗ್ರಾಮ ಶಿಲೆಗಳು ಅಯೋಧ್ಯೆಗೆ ತಲುಪಿವೆ. ಶ್ರೀರಾಮ ಜನ್ಮಭೂಮಿ ಟ್ರಸ್ಟ್ ವತಿಯಿಂದ ಸಾಲಿಗ್ರಾಮ ಶಿಲೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.
ಈ ಸಾಲಿಗ್ರಾಮ ಶೀಲೆಗಳು ನೇಪಾಳದ ಗಂಡಕಿಯಿಂದ ಅಯೋಧ್ಯೆಗೆ ತಲುಪಿದವು. ನೇಪಾಳದಿಂದ ಎರಡು ಟ್ರಕ್‌ಗಳಲ್ಲಿ 30 ಟನ್ ತೂಕದ ಎರಡು ಸಾಲಿಗ್ರಾಮ ಶಿಲೆಗಳನ್ನ ಅಯೋಧ್ಯೆಗೆ ತರಲಾಯಿತು. ಸಾಲಿಗ್ರಾಮದ ಬಂಡೆಗಳು 6 ಸಾವಿರ ವರ್ಷಗಳಷ್ಟು ಹಳೆಯವು ಎಂಬುದು ಭಕ್ತರ ಆಳವಾದ ನಂಬಿಕೆಯಾಗಿದೆ. ನೇಪಾಳದಿಂದ ಅಯೋಧ್ಯೆಗೆ ಹೋಗುವ ಮಾರ್ಗದಲ್ಲಿ ಭಕ್ತರು ಈ ಬಂಡೆಗಳಿಗೆ ಪೂಜೆ ಸಲ್ಲಿಸಿದರು.
ಹಿಂದೂಗಳು ಸಾಲಿಗ್ರಾಮವನ್ನು ವಿಷ್ಣುವಿನ ಅವತಾರವೆಂದು ಪರಿಗಣಿಸುತ್ತಾರೆ. ಸಾಲಿಗ್ರಾಮ ಶಿಲೆಗಳು ನೇಪಾಳದ ಕಾಳಿ ಗಂಡಕಿ ನದಿಯ ಆಸುಪಾಸಿನಲ್ಲಿ ಮಾತ್ರ ಕಂಡುಬರುತ್ತವೆ. ಹಿಮಾಲಯದಿಂದ ಹರಿಯುವ ಈ ನದಿ ಬೃಹತ್ ಬಂಡೆಗಳ ಮೂಲಕ ಹರಿಯುತ್ತದೆ. ಈ ಸಾಲಿಗ್ರಾಮ ಶಿಲೆಗಳಲ್ಲಿ 33 ಬಗೆಯ ಪಳೆಯುಳಿಕೆಗಳಿವೆ ಎಂದೂ ತಜ್ಞರು ಹೇಳುತ್ತಾರೆ. ಈ ಬಂಡೆಗಳು 6 ಮಿಲಿಯನ್ ವರ್ಷಗಳಷ್ಟು ಹಳೆಯವು ಎಂದು ನಂಬಲಾಗಿದೆ.
Ram Mandir: Saligrama stones reached Ayodhya from Nepal…








