Ramanagar | ರಸ್ತೆ ಅಪಘಾತ ತಂದೆ – ಮಗ ಸಾವು
ರಾಮನಗರ : ಟಾಟಾ ಸಫಾರಿ ಹಾಗೂ ಟಿವಿಎಸ್ ಎಕ್ಸೆಲ್ ನಡುವೆ ಅಪಘಾತ ಸಂಭವಿಸಿ ತಂದೆ ಮಗ ಸ್ಥಳದಲ್ಲಯೇ ಮೃತಪಟ್ಟಿರುವ ಘಟನೆ ಕನಕಪುರ ತಾಲೂಕಿನ ತೋಟಹಳ್ಳಿ ಗ್ರಾಮದಲ್ಲಿ ನಡೆದಿದೆ.
60 ವರ್ಷದ ಚಿಕ್ಕಪುಟ್ಟಯ್ಯ ಮತ್ತು ಅವರ ಮಗ 30 ವರ್ಷದ ಮಹೇಶ್ ಮೃತ ದುರ್ದೈವಿಗಳಾಗಿದ್ದಾರೆ.
ತೋಟಹಳ್ಳಿ ಗ್ರಾಮದಿಂದ ಒಂಟಿ ಮನೆಯ ಹತ್ತಿರ ದ್ವಿಚಕ್ರ ವಾಹನದಲ್ಲಿ ಬರುವಾಗ ಸಾತನೂರು ಕಡೆಯಿಂದ ಬಂದ ಟಾಟಾ ಸಫಾರಿ ವಾಹನ ಎಕ್ಸೆಲ್ ಗೆ ಡಿಕ್ಕಿ ಹೊಡೆದಿದೆ.
ಪರಿಣಾಮ ಸ್ಥಳದಲ್ಲಿಯೇ ಇಬ್ಬರು ಮೃತಪಟ್ಟಿದ್ದಾರೆ.
ಇನ್ನು ಘಟನೆ ಸಂಬಂಧ ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕನಕಪುರ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಗಿದೆ.