10 ದಿನಗಳಲ್ಲಿ ನನ್ನ ಮುಂದಿನ ರಾಜಕೀಯ ನಿರ್ಣಯ ಪ್ರಕಟಿಸುತ್ತೇನೆ : ರಮೇಶ್ ಜಾರಕಿಹೊಳಿ Ramesh jarakiholi
ಚಿಕ್ಕೋಡಿ : ಮುಂದಿನ ಎಂಟರಿಂದ ಹತ್ತು ದಿನಗಳಲ್ಲಿ ನನ್ನ ಮುಂದಿನ ರಾಜಕೀಯ ನಿರ್ಣಯ ಪ್ರಕಟಿಸುತ್ತೇನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.
ಅಥಣಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಎಂಟು-ಹತ್ತು ದಿನಗಳಲ್ಲಿ ನನ್ನ ರಾಜಕೀಯ ನಿರ್ಣಯ ತೆಗೆದುಕೊಳ್ಳುತ್ತೇನೆ.
ಅಲ್ಲಿಯ ವರೆಗೆ ಯಾವುದೇ ರೀತಿ ಹೇಳಿಕೆಗಳನ್ನು ಮಾಧ್ಯಮಗಳಿಗೆ ನೀಡುವುದಿಲ್ಲ. ಈ ಕುರಿತು ಹಿರಿಯರು ಖಾರವಾಗಿ ಹೇಳಿದ್ದಾರೆ. ಹೀಗಾಗಿ ನಾನು ಸದ್ಯ ಯಾವುದೇ ಹೇಳಿಕೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಸುತ್ತೂರು ಶ್ರೀಗಳ ಭೇಟಿ ಬಗ್ಗೆ ಮಾತನಾಡಿ, ಸುತ್ತೂರು ಶ್ರೀಗಳ ತಾಯಿ ಸಾವನ್ನಪ್ಪಿದ ಕಾರಣ ಸಾಂತ್ವನ ಹೇಳಲು ಸುತ್ತೂರು ಮಠಕ್ಕೆ ಹೋಗಿದ್ದೆ ಅದರಲ್ಲಿ ಏನೂ ರಾಜಕೀಯವಿಲ್ಲ.
ಅಥಣಿ ಭೇಟಿಯಲ್ಲಿ ಯಾವುದೇ ವಿಶೇಷವಿಲ್ಲ, ಇಂದೂ ಕೂಡ ಕೋವಿಡ್ ನಿಂದ ಮೃತಪಟ್ಟ ಆಪ್ತರ ಮನೆಗೆ ಭೇಟಿ ನೀಡಿದ್ದೇನೆ ಎಂದರು.