ಬೆಳಗಾವಿ: ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಕಿಂಗ್ ಆಗುವ ಎಲ್ಲಾ ಅವಕಾಶ ಇತ್ತು. ಆದರೆ, ಕಿಂಗ್ ಮೇಕರ್ ಆದ್ರು ಎಂದು ಲಿಂಗಾಯತ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಹಾಡಿ ಹೊಗಳಿದ್ದಾರೆ.
ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಬೆಳಗಾವಿಯ ಸುವರ್ಣಸೌಧ ಎದುರು ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಜಯಮೃತ್ಯುಂಜಯ ಸ್ವಾಮೀಜಿ, ರಮೇಶ್ ಸಾಹುಕಾರ್ ಮುಂದೊಂದು ದಿನ ಕಿಂಗ್ ಆಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ರಮೇಶ್ ಜಾರಕಿಹೊಳಿ ದೊಡ್ಡ ಕೊಡುಗೆ ನೀಡಿದ್ದಾರೆ. ರಮೇಶ್ ಜಾರಕಿಹೊಳಿ ಕಿಂಗ್ ಆಗುವ ಆವಕಾಶ ಇತ್ತು. ಆದರೆ ಕಿಂಗ್ ಮೇಕರ್ ಆಗಿದ್ದಾರೆ. ಇದನ್ನು ಬಿಜೆಪಿ ಪಕ್ಷದವರೂ ಕೂಡ ಒಪ್ಪುತ್ತಾರೆ ಎಂದು ಸ್ವಾಮೀಜಿ ಹೇಳಿದ್ದಾರೆ.

ರಮೇಶ್ ಜಾರಕಿಹೊಳಿ ಸತತವಾಗಿ ಐದು ಬಾರಿ ಗೋಕಾಕ್ ಕ್ಷೇತ್ರದಿಂದ ಗೆಲ್ಲುತ್ತಾ ಬಂದಿರುವುದಕ್ಕೆ ಅತಿಹೆಚ್ಚಿನ ಸಂಖ್ಯೆಯಲ್ಲಿರುವ ಲಿಂಗಾಯತ ಪಂಚಮಸಾಲಿ ಸಮಾಜದ ಕೊಡುಗೆ ದೊಡ್ಡದಿದೆ. ಅದೇ ರೀತಿ, ರಮೇಶ್ ಜಾರಕಿಹೊಳಿ ಅವರಿಗೂ ಪಂಚಮಸಾಲಿ ಸಮುದಾಯದ ಮೇಲೂ ಪ್ರೀತಿ ಇದೆ. ಇಂದು ರಮೇಶ್ ಜಾರಕಿಹೊಳಿ ಬೆಂಗಳೂರಿಗೆ ಹೋಗಬೇಕಿತ್ತು. ಜಲಸಂಪನ್ಮೂಲ ಇಲಾಖೆಯ ಮಹತ್ವದ ಸಭೆ ಇತ್ತು. ಆದರೆ, ಎಲ್ಲಾ ಕಾರ್ಯಕ್ರಮ ರದ್ದುಗೊಳಿಸಿ ನಾನು ಸತ್ಯಾಗ್ರಹ ನಡೆಸುತ್ತಿರುವ ಸ್ಥಳಕ್ಕೆ ಬಂದಿದ್ದಾರೆ ಎಂದು ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಲಿಂಗಾಯತ ಪಂಚಮಸಾಲಿ ಸಮಾಜದ ಬೇಡಿಕೆ ಸಿಎಂ ಗಮನಕ್ಕೆ
ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಬೆಳಗಾವಿಯ ಸುವರ್ಣಸೌಧ ಎದುರು ಜಯಮೃತ್ಯುಂಜಯ ಸ್ವಾಮೀಜಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸ್ಥಳಕ್ಕೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಭೇಟಿ ನೀಡಿ ಮನವಿ ಸ್ವೀಕರಿಸಿದರು.
ರಾಜ್ಯ ಸರ್ಕಾರ ಸದಾ ನಿಮ್ಮ ಮುದಾಯದ ಪರವಾಗಿ ಇರಲಿದೆ ಎಂದ ರಮೇಶ್ ಜಾರಕಿಹೊಳಿ, ಉಪಚುನಾವಣೆ ನೀತಿಸಂಹಿತೆ ಇರುವುದರಿಂದ ಯಾವುದೇ ಭರವಸೆ ನೀಡಲು ಆಗುತ್ತಿಲ್ಲ. ಲಿಂಗಾಯತ ಪಂಚಮಸಾಲಿ ಸಮುದಾಯದ ಬೇಡಿಕೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಗಮನಕ್ಕೆ ತರುತ್ತೇನೆ ಎಂದರು ತಿಳಿಸಿದರು.
ಕಳೆದ 10 ವರ್ಷಗಳಿಂದ ನಮ್ಮ ಮೇಲೆ ಸ್ವಾಮೀಜಿಗಳ ಆಶೀರ್ವಾದ ಇದೆ. ಈ ಹಿಂದೆ 2013-18ರಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಮಂತ್ರಿ ಸ್ಥಾನಕ್ಕೆ ಮನವಿ ಮಾಡಿದ್ದರು. ಆಗ ದೆಹಲಿಗೆ ತೆರಳಿ ದಿಗ್ವಿಜಯ್ ಸಿಂಗ್ ಭೇಟಿ ಮಾಡಿ ವಿನಯ್‍ಕುಲಕರ್ಣಿ ಅವರನ್ನು ಸಚಿವರನ್ನಾಗಿ ಮಾಡಬೇಕು ಎಂದು ಕೇಳಿರಲಿಲ್ಲ. ನಮ್ಮ ಸಮುದಾಯದ ಒಬ್ಬರನ್ನಾದರೂ ಮಂತ್ರಿ ಮಾಡುವಂತೆ ಮನವಿ ಮಾಡಿದ್ದರು. ಇದಾದ ಮೇಲೆ ವಿನಯ್ ಕುಲಕರ್ಣಿ ಮಂತ್ರಿಯಾದರು. ರಮೇಶ್ ಜಾರಕಿಹೊಳಿಗೂ ಸಹ ಅನ್ಯಾಯವಾಗಿದೆ, ಮಂತ್ರಿ ಮಾಡಬೇಕು ಎಂದು ಯಜಮೃತ್ಯಂಜಯ ಸ್ವಾಮೀಜಿ ಆಗ್ರಹಿಸಿದ್ದರು. ಕೇವಲ ಒಂದು ಸಮುದಆಯ ಅಲ್ಲ, ಎಲ್ಲಾ ಸಮುದಾಯದ ಮೇಲೆ ಶ್ರೀಗಳಿಗೆ ಪ್ರೀತಿ ಇದೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಕಾಂಗ್ರೆಸ್ ಮುಖಂಡ ವಿನಯ್ ಕುಲಕರ್ಣಿ ಮಾತನಾಡಿ, ಪಂಚಮಸಾಲಿ ಸಮಾಜದ ಜನಸಂಖ್ಯೆಗೆ ಅನುಗುಣವಾಗಿ ಪ್ರವರ್ಗ 2ಎನಲ್ಲಿ ಮೀಸಲಾತಿ ಹೆಚ್ಚಿಸಲು ಒತ್ತಾಯಿಸಬೇಕು. ಪ್ರಸಂಗ ಬಂದರೆ ಬೆಳಗಾವಿಯಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡುವುದಕ್ಕೆ ಸಿದ್ದವಾಗಬೇಕಿದೆ ಎಂದರು.
ನಾನು ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದರೂ ಷಡ್ಯಂತ್ರದಿಂದ ಸೋತೆ. ಹೋರಾಟ ಮಾಡಿ ಸಾಕಾಗಿದೆ. ಯುವಜನರು ಹೋರಾಟಕ್ಕೆ ಇಳಿದರೆ ನಿಮ್ಮೊಂದಿಗೆ ನಾನು ಬರುತ್ತೇನೆ ಎಂದು ವಿನಯ್ ಕುಲಕರ್ಣಿ ಭರವಸೆ ನೀಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








