Ramesh Jarakiholi : ರಮೇಶ್ ಜಾರಕಿಹೊಳಿ ಆಸ್ಪತ್ರೆಯಲ್ಲೇ ಇರೋದಕ್ಕೆ ಸಾಕ್ಷಿ – ವಿಡಿಯೋ ರಿಲೀಸ್ ಮಾಡಿದ ಆಸ್ಪತ್ರೆ ವೈದ್ಯರು..!
ಬೆಳಗಾವಿ : ರಮೇಶ್ ಜಾರಕಿಹೋಳಿ ಐ.ಸಿ.ಯು ನಲ್ಲಿ ಇಲ್ಲಾ ಎಂದು ವಕೀಲರಾದ ಜಗದೀಶ್ ಆರೋಪ ಬೆನ್ನಲ್ಲೇ, ಸಾಕ್ಷಿಯ ರೂಪದಲ್ಲಿ ವೈದ್ಯರು ವಿಡಿಯೋ ಬಿಡುಗಡೆ ಮಾಡಿದ್ದಾರೆ.
ಗೋಕಾಕ್ ಆಸ್ಪತ್ರೆಯ ಐಸಿಯು ನಲ್ಲಿ ರಮೇಶ್ ಜಾರಕಿಹೊಳಿ ಅವರು ಚಿಕಿತ್ಸೆ ಪಡೆಯುತ್ತಿರುವ ವಿಡಿಯೋ ಬಿಡುಗಡೆ ಮಾಡಿದ್ದಾರೆ.
ಮುಖ್ಯ ವೈದ್ಯಾಧಿಕಾರಿ ರವೀಂದ್ರ ರಿಂದ ವಿಡಿಯೋ ಬಿಡುಗಡೆ ಮಾಡಿದ್ದಾರೆ.
ವಕೀಲರಾದ ಜಗದೀಶ್ ರಮೇಶ್ ಜಾರಕಿಹೋಳಿ ಆಸ್ಪತ್ರೆಯಲ್ಲಿ ಇಲ್ಲ ಎಂಬ ಅನುಮಾನವನ್ನ ವ್ಯಕ್ತಪಡಿಸಿದ್ದಾರೆ.
ಅಲ್ಲಿದ್ದ ವೈದ್ಯಾಧಿಕಾರಿ ಹಾರೈಕೆಯ ಉತ್ತರ ಕೊಡ್ತಿದ್ದಾರೆ. ಬೆಳಗಾವಿಯ ನನ್ನ ಸ್ನೇಹಿತರ ಮುಖಾಂತರ ಮಾಹಿತಿ ಕಲೆಹಾಕಿದ್ದೇನೆ.
ಗೋಕಾಕ್ ಸರ್ಕಾರಿ ಆಸ್ಪತ್ರೆಯ ಐಸಿಯುನಲ್ಲಿ ರಮೇಶ್ ಜಾರಕಿಹೊಳಿ ಅಡ್ಮಿಟ್ ಆಗಿಲ್ಲ. ಸರ್ಕಾರ ನೀಡಿರುವ ಸವಲತ್ತುಗಳನ್ನ ಆರೋಪಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದರು.
ಅಲ್ಲದೇ ಚಿಕಿತ್ಸೆ ಪಡೆಯುತ್ತಿರುವ ಫೋಟೋ ರಿಲೀಸ್ ಮಾಡುವಂತೆ ಆಗ್ರಹಿಸಿದ್ದರು. ಇದರ ಬೆನ್ನಲ್ಲೇ ವಿಡಿಯೋ ರಿಲೀಸ್ ಮಾಡಲಾಗಿದೆ.
