ನಾನು ಅಪರಾಧಿಯಲ್ಲ : ಮಾಧ್ಯಮಗಳ ಮುಂದೆ ರಮೇಶ್ ಜಾರಕಿಹೊಳಿ ಕಣ್ಣೀರು
ಬೆಂಗಳೂರು : ಸಿಡಿ ವಿಚಾರವಾಗಿ ನನಗೇನು ಗೊತ್ತಿಲ್ಲ. ನನ್ನ ವಿರುದ್ಧ ವ್ಯವಸ್ಥಿತ ಪಿತೂರಿ ಮಾಡಲಾಗಿದೆ. ಈ ಎಲ್ಲ ಬೆಳವಣಿಗೆಗಳಿಂದ ನಾನು ತುಂಬಾ ದುಃಖದಲ್ಲಿದ್ದೇನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದ್ದಾರೆ.
ಸಿಡಿ ಪ್ರಕರಣದಲ್ಲಿ ದಿನೇಶ್ ಕಲ್ಲಹಳ್ಳಿ ಟ್ವಿಸ್ಟ್ ನೀಡಿ ದೂರು ವಾಪಸ್ ಪಡೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ದಿಢೀರ್ ಸುದ್ದಿಗೋಷ್ಠಿ ನಡೆಸಿದ ರಮೇಶ್ ಜಾರಕಿಹೊಳಿ, ಮಾಧ್ಯಮಗಳನ್ನ ಮುಂದೆ ಭಾವುಕರಾದ್ರು.
ಸಿಡಿ ವಿಚಾರವಾಗಿ ನನಗೇನು ಗೊತ್ತಿಲ್ಲ. ಈ ಎಲ್ಲ ಬೆಳವಣಿಗೆಗಳಿಂದ ನಾನು ನೊಂದಿದ್ದೇನೆ. ಘಟನೆ ಬಗ್ಗೆ ಕಾನೂನು ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದೇವೆ. ಯಶವಂತಪುರ ಮತ್ತು ಹುಳಿಮಾವಿನಲ್ಲಿ ಸಿಡಿ ಬಗ್ಗೆ ಪ್ಲಾನ್ ಮಾಡಲಾಗಿದೆ.
ನಾಲ್ಕು ಮತ್ತು ಐದನೇ ಫ್ಲೋರ್ ನಲ್ಲಿ ಮೀಟಿಂಗ್ ನಡೆದಿದೆ ಎಂದು ಮಾತ್ರ ಹೇಳಬಲ್ಲೆ. ಓರ್ವ ಮಹಾನಾಯಕ ಈ ಷಡ್ಯಂತ್ರ ಹಿಂದಿದ್ದಾನೆ ಎಂದು ರಮೇಶ್ ಜಾರಕಿಹೊಳಿ ಆರೋಪಿಸಿದ್ದಾರೆ.
ಇದೇ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ರಮೇಶ್ ಜಾರಕಿಹೊಳಿ, ನನಗೆ ಕಾಂಗ್ರೆಸ್ ಮತ್ತು ಜೆಡಿಎಸ್ ನಲ್ಲಿ ಯಾವ ಶತ್ರುಗಳಿಲ್ಲ. ಸಿಡಿ ಹಿಂದೆ ಇರುವ ಇಬ್ಬರ ನಾಯಕರಿದ್ದಾರೆ. ಸಮಯ ಬಂದಾಗ ಅವರಿಬ್ಬರ ಹೆಸರನ್ನ ಬಹಿರಂಗಗೊಳಿಸುತ್ತದೆ ಎಂದು ತಿಳಿಸಿದ್ರು.
ಇನ್ನ ನಾನು ಅಪರಾಧಿಯಲ್ಲ, ನಿರಪರಾದಿ. ಹೆಚ್.ಡಿ.ಕುಮಾರಸ್ವಾಮಿ, ರೇವಣ್ಣ ನನಗೆ ನೈತಿಕ ಬೆಂಬಲ ನೀಡಿದ್ದಾರೆ. ನನ್ನ ರಾಜಕೀಯ ಜೀವನ ಅಂತ್ಯಗೊಳಿಸಲು ಸಂಚು ರೂಪಿಸಲಾಗಿದೆ.
ಈ ವಿಷಯದಲ್ಲಿ ಸೋದರ ಬಾಲಚಂದ್ರ ಜಾರಕಿಹೊಳಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ ಎಂದು ಇದೇ ವೇಳೆ ರಮೇಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು.