Ramesh jarakiholi | ರಮೇಶ್ ಜಾರಕಿಹೊಳಿ ಬೆಂಬಲಿಗರು ವಕೀಲ ಚಂದನ ಗಿಡ್ನವರ ಬೆಂಗಲಿಗರ ನಡುವೆ ಆಸ್ಪತ್ರೆ ಆವರಣದಲ್ಲಿಯೇ ಗಲಾಟೆ..!
ಬೆಳಗಾವಿ : ರಮೇಶ್ ಜಾರಕಿಹೊಳಿ ( Ramesh jarakiholi ) ಐಸಿಯೂ ನಲ್ಲಿ ಇಲ್ಲ ಅಂತ ಆರೋಪ ಮಾಡ್ತಿರೋ ವಕೀಲರಾದ ಚಂದನ ಗಿಡ್ನವರ ಹಾಗೂ ರಮೇಶ ಬೆಂಬಲಿಗರ ಮಧ್ಯೆ ಆಸ್ಪತ್ರೆಯ ಆವರಣದಲ್ಲಿಯೇ ದೊಡ್ಡ ಗಲಾಟೆ ನಡೆದಿದೆ.
ಮಾಧ್ಯಮಗಳ ಮುಂದೆಯೇ ಪರಸ್ಪರ ಗುದ್ದಾಡಿಕೊಂಡಿದ್ದಾರೆ.
ವಕೀಲ ಗಿಡ್ನವರ ಆರೋಪಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರಮೇಶ ಬೆಂಬಲಿಗರು ಗಲಾಟೆ ಮಾಡಿದ್ದಾರೆ. ಮಾಧ್ಯಮಗಳ ಮುಂದೆಯೇ ಏಕಾಏಕಿ ಫೈಟ್ ಗೆ ಮುಂದಾದ ಪ್ರಸಂಗ ನಡೆದಿದೆ.
ಗೋಕಾಕ್ ನ ತಾಲೂಕು ಆಸ್ಪತ್ರೆ ಆವರಣದಲ್ಲಿ ಈ ಘಟನೆ ನಡೆದಿದೆ. ಅಂದ್ಹಾಗೆ ಕೊರೊನಾ ಪಾಸಿಟಿವ್ ಎಂದು ರಮೇಶ್ ಜಾರಕಿಹೊಳಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.
ಆದ್ರೆ ರಮೇಶ್ ಜಾರಕಿಹೊಳಿ ಆಸ್ಪತ್ರೆಯಲ್ಲಿ ಇಲ್ಲ. ಇದ್ದರೆ ಸಾಕ್ಷಿ ತೋರಿಸಿ ಎಂದು ವಕೀಲರು ಆರೋಪ ಮಾಡಿದ್ದಾರೆ. ಈ ಹಿನ್ನೆಲೆ ಗಲಾಟೆ ನಡೆದಿದೆ.
