ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಬಿಟ್ಟಿದ್ದು ಅಧಿಕಾರ, ಹಣಕ್ಕಾಗಿ ಅಷ್ಟೆ : ಹಿರೇಮಠ್
1 min read
ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಬಿಟ್ಟಿದ್ದು ಅಧಿಕಾರ, ಹಣಕ್ಕಾಗಿ ಅಷ್ಟೆ : ಹಿರೇಮಠ್
ಶಿವಮೊಗ್ಗ : ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರ., ಹಣಕ್ಕಾಗಿ ಬಿಟ್ಟು ಬಂದರೆ ಹೊರತು ಬೇರೆ ಯಾವುದಕ್ಕೂ ಅಲ್ಲ ಎಂದು ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ್ ಹೇಳಿದ್ದಾರೆ.
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಬಗ್ಗೆ ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಡಿ ಪ್ರಕರಣದಲ್ಲಿ ರಮೇಶ್ ಜಾರಕಿಹೊಳಿ ಬಚಾವ್ ಆಗುವ ಕೆಲಸ ಮಾಡುತ್ತಿದ್ದಾರೆ.
ಸತ್ಯವನ್ನ ಅಥವಾ ನ್ಯಾಯವನ್ನು ಎತ್ತಿ ಹಿಡಿಯುವ, ಇಲ್ಲಾ ತಪ್ಪಿತಸ್ಥರಿಗೆ ಶಿಕ್ಷೆ ಕೋಡಿಸುವ ಉದ್ದೇಶ ಅವರಲ್ಲಿಲ್ಲ. ಸಚಿವ ಸ್ಥಾನದಿಂದ ಕೆಳಗಿಳಿದರೂ ಹುನ್ನಾರದಲ್ಲಿದ್ದಾರೆ.
ಅವರು ಅಧಿಕಾರ, ಹಣಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಬಂದರೆ ಹೊರತು ಬೇರೆ ಯಾವುದಕ್ಕೂ ಅಲ್ಲ.
ಈ ಪ್ರಕರಣ ಪ್ರಜಾಪ್ರಭುತ್ವದ ಮೇಲೆ, ಸಂವಿಧಾನದ ಮೇಲೆ, ನಮ್ಮ ಸಂಸ್ಕøತಿಯ ಮೇಲೆ, ಮಾನವೀಯ ಮೌಲ್ಯಗಳ ಮೇಲೆ ದೊಡ್ಡ ಪ್ರಹಾರವಾಗಿದೆ ಎಂದರು.
ಅಲ್ಲದೆ ಸ್ಪಷ್ಟವಾಗಿ ಮೇಲ್ನೋಟಕ್ಕೆ ಯಾವುದೇ ಸಂದೇಹವಿಲ್ಲದೆ ಮಾಡಬಾರದ ಕೆಲಸ ಮಾಡಿರುವುದು ಕಾಣುತ್ತಿದೆ.
ಹಾಗಾಗಿ ಇಂಥವರು ಸಾರ್ವಜನಿಕ ಜೀವನದಲ್ಲಿ ಇರಬಾರದು ಎಂದು ರಮೇಶ್ ಜಾರಕಿಹೊಳಿ ವಿರುದ್ಧ ಕಿಡಿಕಾರಿದರು.
