ರಮೇಶ್ ಜಾರಕಿಹೊಳಿ ಮಂತ್ರಿ ಆಗಬೇಕು : ಬೈರತಿ ಬಸವರಾಜ್ Bairati Basavaraj
ಚಿತ್ರದುರ್ಗ : ಕಾಂಗ್ರೆಸ್ ನಲ್ಲಿ ಇಬ್ಬರೂ ಮಾತ್ರ ಸಿಎಂ ರೇಸ್ ನಲ್ಲಿ ಇಲ್ಲ. ಇನ್ನೂ ಮುಂದೆ ನೋಡ್ತಾ ಇರಿ ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಸೇರಿ ಹಲವರಿದ್ದಾರೆ. ಮುಂದೆ ಕಾಂಗ್ರೆಸ್ ನಲ್ಲಿ ಸ್ಫೋಟವಾಗುತ್ತದೆ ಎಂದು ಸಚಿವ ಬೈರತಿ ಬಸವರಾಜ್ ಹೇಳಿದ್ದಾರೆ.
ಕೈ ನಾಯಕರಲ್ಲಿ ಸಿಎಂ ಸ್ಥಾನದ ಕಚ್ಚಾಟ ವಿಚಾರವಾಗಿ ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬೈರತಿ ಬಸವರಾಜ್, ಕಾಂಗ್ರೆಸ್ ಪಕ್ಷದ ಕುರಿತು ನಾನು ಜಾಸ್ತಿ ಮಾತನಾಡಲ್ಲ. ನಮ್ಮ ಬಿಜೆಪಿಯಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದೇವೆ. ಮುಂದಿನ ಚುನಾವಣೆಯನ್ನೂ ನಾವೆಲ್ಲರೂ ಸೇರಿ ಒಗ್ಗಟ್ಟಿನಿಂದ ಮಾಡುತ್ತೇವೆ ಎಂದು ಹೇಳಿದರು.
ಅಲ್ಲದೆ ಕಾಂಗ್ರೆಸ್ ನಲ್ಲಿ ಇಬ್ಬರೂ ಮಾತ್ರ ಸಿಎಂ ರೇಸ್ ನಲ್ಲಿ ಇಲ್ಲ. ಇನ್ನೂ ಮುಂದೆ ನೋಡ್ತಾ ಇರಿ ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಸೇರಿ ಹಲವರಿದ್ದಾರೆ. ಮುಂದೆ ಕಾಂಗ್ರೆಸ್ ನಲ್ಲಿ ಸ್ಫೋಟವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಇದೇ ವೇಳೆ ಕೊಲೆಗಡುಕ ಸರ್ಕಾರ ಎಂಬ ಡಿಕೆಶಿ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿ, ಅದು ಸತ್ಯಕ್ಕೆ ದೂರವಾದ ಮಾತು. ವರದಿಯಲ್ಲಿ ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿದ್ದಾರೆಂದು ತಿಳಿದಿದೆ. ಸಾವಿಗೀಡಾದವರಿ ಸಿಎಂ ಪರಿಹಾರ ನೀಡುವ ಕೆಲಸ ಮಾಡಿದ್ದಾರೆ. ರಾಜ್ಯದಲ್ಲಿ ಕೊವೀಡ್ ಗೆ ಮೃತಪಟ್ಟವರಿಗೆ ಪರಿಹಾರ ನೀಡಲು ಸಿಎಂ ಘೋಷಣೆ ಮಾಡಿದ್ದಾರೆ. ಕೆಲವೇ ದಿನಗಳಲ್ಲಿ ಪರಿಹಾರವನ್ನ ನೀಡುವ ಕೆಲಸ ಮಾಡುತ್ತೇವೆ ಎಂದರು.
ಇನ್ನು ರಮೇಶ್ ಜಾರಕಿಹೊಳಿ ರಾಜೀನಾಮೆ ವಿಚಾರವಾಗಿ ಮಾತನಾಡಿ, ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಡುವುದಿಲ್ಲ. ಇದೆಲ್ಲಾವೂ ಕೇವಲ ಊಹಾಪೋಹ ಅಷ್ಟೇ. ಮತ್ತೆ ಪ್ರಕರಣ ಮುಗಿದ ಬಳಿಕ ಮಂತ್ರಿಗಳಾಗುತ್ತಾರೆ. ಕ್ಲೀನ್ ಚೀಟ್ ಸಿಕ್ಕ ಬಳಿಕ ರಮೇಶ್ ಜಾರಕಿಹೊಳಿ ಸಂಪುಟ ಸೇರಬೇಕು. ಹಲವರು ಕ್ಲೀನ್ ಚೀಟ್ ಸಿಕ್ಕ ಬಳಿಕ ಮಂತ್ರಿಗಳಾಗಿದ್ದಾರೆ. ಅದೇ ರೀತಿ ಜಾರಕಿಹೊಳಿ ಮಂತ್ರಿ ಆಗಬೇಕು ಎಂದರು.