ಪ್ರಸಂಗ ಬಂದ್ರೆ ರಮೇಶ್ ಜಾರಕಿಹೊಳಿ ಮಂತ್ರಿ ಆಗ್ತಾರೆ : ಉಮೇಶ್ ಕತ್ತಿ
ಬಾಗಲಕೋಟೆ : ಪ್ರಸಂಗ ಬಂದ್ರೆ ರಮೇಶ್ ಜಾರಕಿಹೊಳಿ ಮಂತ್ರಿ ಆಗ್ತಾರೆ ಎಂದು ಸಚಿವ ಉಮೇಶ್ ಕತ್ತಿ ಭವಿಷ್ಯ ನುಡಿದಿದ್ದಾರೆ.
ರಮೇಶ್ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಉಮೇಶ್ ಕತ್ತಿ, ರಮೇಶ್ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಡುವ ಪ್ರಸಂಗವೇ ಬರಲ್ಲ.
ನನ್ನಷ್ಟೆ ವಯಸ್ಸಿನವರಿದ್ದಾರೆ. ನನ್ನ ಆತ್ಮೀಯ ಸ್ನೇಹಿತ, ಅವರೊಂದಿಗೆ ಮಾತನಾಡ್ತಿರುತ್ತೇನೆ.
ಮತ್ತೆ ರಮೇಶ್ ಜಾರಕಿಹೊಳಿಗೆ ಮಂತ್ರಿ ಸ್ಥಾನ ಕೊಡುವುದು ಸಿಎಂಗೆ ಬಿಟ್ಟಿದ್ದು. ನಾನು ರಮೇಶ್ ಒಂದೇ ಜಿಲ್ಲೆಯವರು, ಆತ್ಮೀಯರು.
ರಮೇಶ್ ಜಾರಕಿಹೊಳಿಗೆ ಆ ಕ್ರೀಯೇಟ್ ಕ್ಯಾಸೆಟ್ ನಿಂದ ನೋವಾಗಿದೆ ಎಂದು ಹೇಳಿದರು.
ಇದೇ ವೇಳೆ ರಮೇಶ್ ಜಾರಕಿಹೊಳಿ ಮತ್ತೆ ಮಂತ್ರಿ ಆಗುವ ವಿಚಾರಕ್ಕೆ ಮಾತನಾಡಿ, ನಮ್ಮೆಲ್ಲಾ ಮಂತ್ರಿ ಮಂಡಲದ ಪ್ರಯತ್ನ ಅದೇ ಆಗಿರುತ್ತೆ.
34 ಮಂತ್ರಿ ಬಿಟ್ಟು ಮಾಡೋಕೆ ಆಗೋಲ್ಲ.ಅದ್ರಲ್ಲಿ ಫಿಟ್ಟ್ ಮಾಡುವ ಪ್ರಯತ್ನ ಮಾಡುತ್ತೇವೆ. ಇನ್ನೂ ಎರಡು ವರ್ಷ ಶಾಸಕರಾಗಿರ್ತಾರೆ. ಪ್ರಸಂಗ ಬಂದ್ರೆ ಮಂತ್ರಿ ಆಗ್ತಾರೆ ಎಂದು ಭವಿಷ್ಯ ನುಡಿದರು.