ರಾಹುಲ್ ಗಾಂಧಿ ವಿಚಾರದಲ್ಲಿ ಮಾಡಿದ ಆ ಒಂದು ತಪ್ಪಿನಿಂದ ರಾಜೀನಾಮೆ ಕೊಟ್ಟಿದ್ದ ರಮ್ಯಾ…!
ಸ್ಯಾಂಡಲ್ ವುಡ್ ನಲ್ಲಿ ಮಿಂಚಿ ಈಗ ಬಣ್ಣದ ಜಗತ್ತಿನಿಂದ ಮಾಯವಾಗಿರುವ ಮೋಹಕ ತಾರೆ ರಮ್ಯಾ ಬಗ್ಗೆ ಕೆಲ ವರ್ಷಗಳು ಯಾವ ಒಂದೂ ವಿಚಾರವೂ ಗೊತ್ತಾಗಿರಲಿಲ್ಲ.. ರಾಜಕೀಯದಿಮದಲೂ ದೂರ ನಡೆದಿದ್ದ ರಮ್ಯಾ ಇತ್ತೀಚೆಗೆ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ.. ಆದ್ರೆ ಅವರ ಜೀವನದಲ್ಲಿ ಅನೇಕ ರಹಸ್ಯಗಳಿದ್ದು, ಕೆಲವೊಂದನ್ನ ಆಗಾಗ ಶೇರ್ ಮಾಡಿಕೊಳ್ತಿರುತ್ತಾರೆ..
ಇನ್ನೂ ಮದುವೆ ವಿಚಾರದಲ್ಲೂ ರಮ್ಯಾ ಬಗ್ಗೆ ಸಾಕಷ್ಟ ವದಂತಿಗಳು ಹರಿದಾಡಿದ್ದವು.. ಜೊತೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೊಂದಿಗೂ ಕೂಡ ರಮ್ಯಾ ಹೆಸರುಗಳು ಆಗೊಂದು ಟೈಮ್ ನಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದವು.. ಇದೀಗ ರಾಹುಲ್ ಗಾಂಧಿ ವಿಚಾರದಲ್ಲಿ ಮಾಡಿದ ಒಂದು ತಪ್ಪಿನಿಂದ ಏನೆಲ್ಲಾ ಎಡವಟ್ಟಾಗಿತ್ತು ಅನ್ನೋ ವಿಚಾರವವನ್ನ ಹಂಚಿಕೊಂಡಿದ್ದಾರೆ ರಮ್ಯಾ.. ರಾಹುಲ್ ಗಾಂಧಿ ವಿಚಾರವಾಗಿ ಮಾಡಿದ್ದ ದೊಡ್ಡ ತೊಪ್ಪೊಂದನ್ನು ಬಹಿರಂಗ ಪಡಿಸಿದ್ದಾರೆ. ಅದೇ ತಪ್ಪಿನಿಂದ ರಾಜಿನಾಮೆ ಕೂಡ ನೀಡಿರುವುದಾಗಿ ರಮ್ಯಾ ಹೇಳಿದ್ದಾರೆ.
‘ಕೆಲವು ವರ್ಷಗಳ ಹಿಂದೆ ಅಂದಿನ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ನ ಕೆಲವು ಮಾಜಿ ಸಂಸದರು ಜರ್ಮನಿ ಪ್ರವಾಸಕ್ಕೆ ತೆರಳಿದ್ದರು. ಪ್ಲಾನ್ ಪ್ರಕಾರ ಮೊದಲು ಬರ್ಲಿನ್ ನ ಮ್ಯೂಸಿಯಂಗೆ ತೆರಳಿದೆವು. ಅಲ್ಲಿ ಜರ್ಮನ್ ರಾಜಕಾರಣಿಗಳು ನಮಗೆ ಅವರ ಇತಿಹಾಸ ಮತ್ತು ಸಂಸ್ಕೃತಿ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಮಾಹಿತಿ ಹಂಚಿಕೊಂಡರು. ಆಗ ನಾನು ರಾಹುಲ್ ಗಾಂಧಿ ಅವರ ಕೆಲವು ಫೋಟೋಗಳನ್ನು ಕ್ಲಿಕ್ ಮಾಡಿ, ಅವುಗಳನ್ನು ನಮ್ಮ ಭಾರದಲ್ಲಿರುವ ನಮ್ಮ ಟೀಂಗೆ ಕಳುಹಿಸಿದೆ’
‘ಆದರೆ ಆ ಫೋಟೋಗಳು ಬೇಡದ ಕಾರಣಕ್ಕೆ ವೈರಲ್ ಆಗಿಬಿಟ್ಟವು. ಆ ಫೋಟೋಗಳನ್ನು ಇಟ್ಟುಕೊಂಡು ರಾಹುಲ್ ಗಾಂಧಿ ಅವರನ್ನು ಟೀಕಿಸಲಾಯಿತು. ಆ ತಪ್ಪಿಗೆ ಕ್ಷಮೆ ಇಲ್ಲ. ನಂತರ ನಾನು ಅವರ ಬಳಿ ಹೋಗಿ ಕ್ಷಮೆ ಕೇಳಿದೆ. ರಾಜಿನಾಮೆ ನೀಡಿದೆ. ಆದರೆ ನನ್ನ ರಾಜಿನಾಮೆಯನ್ನು ಸ್ವೀಕರಿಸಲಿಲ್ಲ. ಆದರೆ ಅವರು ನಗುತ್ತ ಪರವಾಗಿಲ್ಲ, ಮುಂದಿನ ಬಾರಿ ಪೋಸ್ಟ್ ಮಾಡುವಾಗ ಹುಷಾರಾಗಿರಿ ಎಂದರು. ನನ್ನ ಕಣ್ಣಲ್ಲಿ ನೀರು ಬಂತು’ ಎಂದು ಆಗ ಅಸಲಿಗೆ ನಡೆದಿದ್ದ ವಿಚಾರವನ್ನ ಬಹಿರಂಗಪಡಿಸಿದ್ದಾರೆ.
ಬಾಲಿವುಡ್ ಹಿರಿಯ ನಟ ನಾಸೀರುದ್ದೀನ್ ಶಾ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲು
ಕಂಗನಾ ಹಿಂದೆಯೂ ನನಗೆ ಮುಖ್ಯವಾಗಿರಲಿಲ್ಲ, ಈಗಲೂ ಇಲ್ಲ – ತಾಪ್ಸಿ..!
ವಿಜಯ್ ದೇವರಕೊಂಡ ಜೊತೆಗಿರುವ ಫೇವರೇಟ್ ಫೋಟೋ ಶೇರ್ ಮಾಡಿದ ರಶ್ಮಿಕಾ
ಸೋಷಿಯಲ್ ಮೀಡಿಯಾದಲ್ಲಿ ‘RRR’ ಪೋಸ್ಟರ್ ಸಂಚಲನ : ಸಸುದೀಪ್ , ವಿರಾಟ್ , ಪವನ್ ಕಲ್ಯಾಣ್ ರೋಹಿತ್ ಒಟ್ಟಾಗಿ ದರ್ಶನ…!