ಕಂಗನಾ ಹಿಂದೆಯೂ ನನಗೆ ಮುಖ್ಯವಾಗಿರಲಿಲ್ಲ, ಈಗಲೂ ಇಲ್ಲ – ತಾಪ್ಸಿ..!
ಕಂಗನಾ ರಣೌತ್… ಈ ಹೆಸರು ಇದೀಗ ಕೇವಲ ಬಾಲಿವುಡ್ ಅಂಗಳದಲ್ಲಿ ಮಾತ್ರ ಫೇಮಸ್ ಆಗಿಲ್ಲ. ಬದಲಾಗಿ ದೇಶಾದ್ಯಂತ ರಾಜಕೀಯ ವಲಯದಲ್ಲಿ ಇರಬಹುದು ಮತ್ತೊಂದು ವಿಚಾರದಲ್ಲಿ ಕಂಗನಾ ಹೆಸರು ಕೇಳಿಬರುತ್ತೆ.. ಕಾರಣ ಕಂಗನಾ ಅವರು ಎಲ್ಲಾ ವಿಚಾರದಲ್ಲೂ ಮೂಗುತೂರಿಸುತ್ತಾ, ರಾಜಕಾರಣಿಗಳು , ಸಿನಿಮಾ ತಾರೆಯರು , ಪ್ರತಿಭಟನೆಗಳ ವಿಚಾರದಲ್ಲೂ ಸುದ್ದಿಯಾಗ್ತಾರೆ.. ವಿವಾದಾತ್ಮಕ ಹೇಳಿಕೆಗಳನ್ನ ನೀಡೋದೆ ಕಂಗನಾ ಅವರಿಗೆ ರೂಡಿಯಾಗಿಬಿಟ್ಟಿದೆ.. ಯಾರೋ ಒಬ್ಬ ನಟರು ತಮ್ಮ ಬಗ್ಗೆ ಏನೇ ಬರೆದುಕೊಂಡಿದ್ರೂ ಅಲ್ಲೂ ಮೂಗು ತೂರಿಸಿ ಅವರ ಬಗ್ಗೆ ಮಾತನಾಡೋದು ಕಂಗನಾ ಅವರ ಹಳೇ ಚಾಳಿಯಾಗಿಬಿಟ್ಟಿದೆ..
ಅದ್ರಲ್ಲೂ ಕಂಗನಾ ಹೇಳಿಕೆಗಳನ್ನ ನೋಡಿದ್ರೆ ಅವರ ಪಕ್ಕಾ ಬಿಜೆಪಿ ಸರ್ಕಾರದ ಬೆಂಬಲಿಗರು ಅನ್ನುವ ರೀತಿಯಲ್ಲೇ ಪೋಸ್ಟ್ ಗಳನ್ನ ಮಾಡುತ್ತಾರೆ.. ಹೀಗೆಯೇ ಮಾಡಿ ಮಾಡಿ ಟ್ವಿಟ್ಟರ್ ನಿಂದ ಶಾಶ್ವತವಾಗಿ ಬ್ಯಾನ್ ಆಗಿದ್ದಾರೆ.. ಆದ್ರೆ ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಚಾಳಿ ಮುಂಚುವರೆಸಿದ್ದಾರೆ.. ಈ ರೀತಿ ಅವರು ಹರಿಯಾಯುವ , ಹೀಯಾಳಿಸುವ ನಟಿಯರಲ್ಲಿ ತಾಪ್ಸಿ ಕೂಡ ಒಬ್ರು.. ಈ ಇಬ್ಬರೂ ಹಾವು-ಮುಂಗುಸಿಯಂತೆ ಆಗಾಗ ಕಿತ್ತಾಡಿಕೊಳ್ಳುತ್ತಲೇ ಇರುತ್ತಾರೆ.
ತಾಪ್ಸಿ ಪನ್ನು ಕೇಂದ್ರ ಸರ್ಕಾರದ ಕೆಲವು ನೀತಿಗಳ ವಿರುದ್ಧ ಟ್ವಿಟ್ಟರ್‌ನಲ್ಲಿ ಅಭಿಪ್ರಾಯ ಹಂಚಿಕೊಳ್ಳಲು ಆರಂಭಿಸುತ್ತಿದ್ದಂತೆ, ಬಿಜೆಪಿಯ ಪರಮ ಭಕ್ತೆಯಾದ ಕಂಗನಾ ರಣೌತ್ ತಾಪ್ಸಿ ವಿರುದ್ಧ ಮೂದಲಿಕೆ ಶುರು ಮಾಡಿದರು. ಆರಂಭದಲ್ಲಿ ಸುಮ್ಮನಿದ್ದ ತಾಪ್ಸಿ ಆ ನಂತರ ತಾವೂ ಅಖಾಡಕ್ಕೆ ಇಳಿದು ಕಂಗನಾ ವಿರುದ್ಧ ಟ್ವೀಟ್ ಮಾಡಿದರು.
ಆ ನಂತರ ಇಬ್ಬರ ಟ್ವೀಟ್ ವಾರ್ ತುಸು ಕಡಿಮೆ ಆಗಿತ್ತು. ಇದೀಗ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿದ ತಾಪ್ಸಿ ಪನ್ನುಗೆ ಕಂಗನಾ ಕುರಿತು ಪ್ರಶ್ನೆ ಎದುರಾಗಿದೆ. ಇದಕ್ಕೆ ಉತ್ತರಿಸಿರುವ ತಾಪ್ಸಿ, ‘ಕಂಗನಾ ನನ್ನ ಜೀವನದಲ್ಲಿ ಅಪ್ರಸ್ತುತ. ಸಿನಿಮಾ ರಂಗದಲ್ಲಿ ಆಕೆಯೂ ಒಬ್ಬ ನಟಿ. ವೃತ್ತಿ ವಿಷಯದಲ್ಲಿ ಆಕೆ ನನ್ನ ಸಹೋದ್ಯೋಗಿ. ಆದರೆ ನನ್ನ ವೈಯಕ್ತಿಕ ಜೀವನದಲ್ಲಿ ಆಕೆ ಸಂಪೂರ್ಣ ಅಪ್ರಸ್ತುತ. ಈ ಹಿಂದೆಯೂ ಆಕೆ ನನಗೆ ಮುಖ್ಯವಾಗಿರಲಿಲ್ಲ. ಈಗಲೂ ಆಕೆ ನನಗೆ ಮುಖ್ಯವಲ್ಲ’ ಎಂದಿದ್ದಾರೆ.
ಅಲ್ಲದೇ ‘ಪ್ರೀತಿ ಹಾಗೂ ದ್ವೇಷ ಎರಡೂ ಹೃದಯದಿಂದಲೇ ಹುಟ್ಟುತ್ತವೆ. ದ್ವೇಷಿಸಲು ಬಯಸುವ ವ್ಯಕ್ತಿಯ ಬಗ್ಗೆ ನೀವು ಚಿಂತೆಯೇ ಮಾಡದೇ ಇರುವುದು ಅತ್ಯಂತ ಸೂಕ್ತ. ಅದು ಆ ವ್ಯಕ್ತಿಗೆ ನೀವು ನೀಡಬಹುದಾದ ಬಹುದೊಡ್ಡ ಶಿಕ್ಷೆ ಮತ್ತು ಅದರಿಂದ ನೀವು ನಿರಾಳತೆಯನ್ನು ಸಹ ಅನುಭವಿಸುತ್ತೀರಿ’ ಎಂದಿದ್ದಾರೆ.