‘ಯಶ್… ನಿಮಗೆ ಆಟಿಟ್ಯೂಡ್ ಪ್ರಾಬ್ಲಮ್ ಇದೆ… ನಿಮಗೆ ಯಾವತ್ತೂ ಯಶಸ್ಸು ಸಿಗಲ್ಲ’ ಎಂದಿದ್ದ ರಮ್ಯಾ…!
KGF ನ ನಂತರ ನ್ಯಾಷನಲ್ ಸ್ಟಾರ್ ಆಗಿರುವ ಯಶ್ ಕ್ರೇಜ್ ವಿದೇಶದಲ್ಲಿಯೂ ಇದೆ… ಯಶ್ ಅವರ ಫ್ಯಾನ್ಸ್ ಸಾಗರದಾಚೆಗೂ ಇದ್ದು, ಅವರ ಅಭಿನಯದ KGF 2 ಸಿನಿಮಾ ಯಾವಾಗ ತೆರೆಮೇಲೆ ಬರುತ್ತೆ ಅಂತ ಕಾಯುತ್ತಿದೆ ಇಡೀ ಭಾರತೀಯ ಸಿನಿಮಾರಂಗ.. ಕೇವಲ ಟೀಸರ್ ನಿಂದಲೇ ಹಿಂದಿನ ಎಲ್ಲಾ ರೆಕಾರ್ಡ್ ಗಳನ್ನ ಬ್ರೇಕ್ ಮಾಡಿರುವ ರಾಖಿ ಭಾಯ್ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್..
ಕನ್ನಡ ಅಷ್ಟೇ ಪರಭಾಷೆಗಳಲ್ಲೂ ರಾಖಿ ಭಾಯ್ ಫ್ಯಾನ್ಸ್ ಇದ್ದಾರೆ. ರಾಖಿ ಭಾಯ್ ಖದರ್ ಬದಲಾಯಿಸಿದ್ದು ಕೆಜಿಎಫ್ ಸಿನಿಮಾ… ಈಗ ರಾಖಿ ಬಾಯ್ ಸೌತ್ ಸಿನಿಮಾ ಇಂಡಸ್ಟ್ರಿಯ ಸ್ಟಾರ್ ನಟ… ಆದ್ರೆ ಸಿನಿಮಾರಂಗದಲ್ಲಿ ಯಶ್ ಗೆ ಗೆಲುವು ಸಿಗುದಿಲ್ಲ ಎಂದು ಈ ಹಿಂದೆ ಸ್ಯಾಂಡಲ್ ವುಡ್ ನ ಮೋಹಕ ತಾರೆ ರಮ್ಯಾ ಭವಿಷ್ಯ ನುಡಿದಿದ್ದರು. ಆದ್ರೆ ಇದೀಗ ಅವರ ಭವಿಷ್ಯ ಸುಳ್ಳಾಗಿದೆ. 
ಹಿಂದೊಂದು ದಿನ ಯಶ್ ಗೆ ಬೈದಿದ್ದ ರಮ್ಯಾ ‘ ನಿಮಗೆ ತುಂಬಾನೆ ಆಟಿಟ್ಯೂಡ್ ಪ್ರಾಬ್ಲಮ್ ಇದ್ದು, ನಿಮಗೆ ಯಾವತ್ತು ಯಶಸ್ಸು ಸಿಗುವುದಿಲ್ಲ ಎಂದಿದ್ರಂತೆ. ಆಗಿನ ದಿನಗಳು ಅಂದ್ರೆ ಲಕ್ಕಿ ಸಿನಿಮಾದ ಶೂಟಿಂಗ್ ವೇಳೆ ರಮ್ಯಾ ಹಾಗೂ ಯಶ್ ನಡುವೆ ಹೊಂದಾಣಿಕೆ ಇರುತ್ತಿರಲಿಲ್ಲ ಎಂಬ ಮಾತುಗಳು ಕೇಳಿಬಂದಿದ್ದವು.. ಸಾಲದಕ್ಕೆ ಇವರಿಬ್ಬರು ವೈರಿಗಳು ಅನ್ನೋದನ್ನು ಸಾರ್ವನಿಕವಾಗಿ ಒಪ್ಪಿಕೊಂಡಿದ್ದರು. ಅದ್ರಲ್ಲೂ ಯಶ್ ಪ್ರತಿ ವಿಚಾರಕ್ಕೆ ಮೂಗು ತೂರಿಸುತ್ತಾರೆ ಎಂದಿದ್ರು ರಮ್ಯಾ.. ಅಷ್ಕ್ಕೂ ಮೀರಿ ಸುದೀಪ್ ರನ್ನೂ ಎಳೆತಂದು ಇವರಿಬ್ಬರ ಆಟಿಟ್ಯೂಡ್ ಒಂದೇ ರೀತಿ ಎಂದಿದ್ದರು. ಇದಕ್ಕೆ ಯಶ್ ಕೂಡ ರಮ್ಯಾ ಅವರ ವಿರುದ್ಧ ಕಿಡಿಕಾರಿದ್ದರು.. ರಿಹರ್ಸಲ್ ಇಲ್ಲದೇ ಅವರ ಟೇಕ್ OK ಆದ ದಾಖಲೆಯೇ ಇಲ್ಲ ಎಂದು ವ್ಯಂಗ್ಯವಾಡಿದ್ದರು.
ಲಕ್ಕಿ ಸಿನಿಮಾ ನಿರೀಕ್ಷೆ ಮಟ್ಟದ ಯಶಸ್ಸು ಕಾಣಲಿಲ್ಲ. ಹೀಗಾಗಿ ಈ ವಿಚಾರವಾಗಿ ಟ್ವೀಟ್ ಮಾಡಿದ್ದ ರಮ್ಯಾ ಯಶ್ ನನ್ನ ಕರೆಯರ್ ನಾಶ ಮಾಡಿಬಿಟ್ಟರು ಎಂದು ಆರೋಪಿದ್ದರು ಬಳಿಕ ಆ ಟ್ವೀಟ್ ಡಿಲೀಟ್ ಮಾಡಿದ್ದರು.. ಅಲ್ಲದೇ ಈ ರೀತಿ ಆಟಿಟ್ಯೂಟ್ ಇದ್ದರೆ ಯಾವತ್ತೂ ನೀವು ಯಶಸ್ಸು ಕಾಣುವುದಿಲ್ಲ ಎಂದೂ ಕೂಡ ಭವಿಷ್ಯ ನುಡಿದಿದ್ದರು.. ಆದ್ರೆ ಮೋಹಕ ತಾರೆ ರಮ್ಯಾ ಹೇಳಿದ್ದ ಮಾತು ಈಗ ಸುಳ್ಲಾಗಿದ್ದು ಯಶ್ ನ್ಯಾಷನಲ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.








