Ranaji 2023 : ಇಂದಿನಿಂದ ಕರ್ನಾಟಕ – ಕೇರಳ ರಣಜಿ ಕದನ…..
ಕರ್ನಾಟಕ ಕ್ರಿಕೆಟ್ ತಂಡ ರಣಜಿಯಲ್ಲಿ ಟೂರ್ನಿಯಲ್ಲಿ ಇಂದಿನಿಂದ ಆತಿಥೇಯ ಕೇರಳ ತಂಡವನ್ನು ಎದುರಿಸಲಿದೆ. ಕೇರಳದ ತುಂಬ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಕರ್ನಾಟಕ ಕ್ರಿಕೆಟ್ ತಂಡ ಕೇರಳ ತಂಡದಿಂದ ಕಠಿಣ ಸವಾಲು ಎದುರಿಸಲಿದೆ. ರಣಜಿ ಟೂರ್ನಿಯಲ್ಲಿ ಕೇರಳ ವಿರುದ್ಧ ರಾಜ್ಯ ತಂಡ ಇದುವರೆಗೂ ಸೋತಿಲ್ಲಘಿ. ಹೀಗಾಗಿ ಮಯಾಂಕ್ ಪಡೆ ಗೆಲ್ಲುವ ನೆಚ್ಚಿನ ತಂಡವೆನಿಸಿದೆ.
ನಾಯಕ ಮಯಾಂಕ್ ಅಗರ್ವಾಲ್, ದೇಚದತ್ ಪಡಿಕಲ್, ಆರ್.ಸಮರ್ಥ್ ಮತ್ತು ಮನೀಶ್ ಪಾಂಡೆಯಂತಹ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿದೆ. ಬೌಲಿಂಗ್ನಲ್ಲೂ ಕೆ.ಗೌತಮ್ ಮತ್ತು ಶ್ರೇಯಸ್ ಗೋಪಾಲ್ರಂತಹ ಗುಣಾತ್ಮಕ ಸ್ಪಿನ್ನರ್ಸ್ಗಳಿದ್ದಾರೆ.
ಕೇರಳ ತಂಡದಲ್ಲಿ ಆಫ್ ಸ್ಪಿನ್ನರ್ ಜಲಜ್ ಸಕ್ಸೆನಾ ತಂಡದ ಪ್ರಮುಖ ಸ್ಪಿನ್ನರ್ ಆಗಿದ್ದಾರೆ. ಬಸಿಲ್ ಥಂಪಿ ಫಾರ್ಮ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸಚಿನ್ ಬೇಬಿ ಮತ್ತು ರೋಹನ್ ಪ್ರೇಮ್ ಕೂಡ ಲಯದಲ್ಲಿಲ್ಲ. ಕೇರಳ ತಂಡ ಈ ಋತುವಿನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ.
ಕರ್ನಾಟಕ ಆಡಿದ 4 ಪಂದ್ಯಗಳಲ್ಲಿ 2ರಲ್ಲಿ ಗೆದ್ದು 2 ಪಂದ್ಯಗಳನ್ನು ಡ್ರಾ ಮಾಡಿಕೊಂಡು 19 ಅಂಕಗಳೊಂದಿಗೆ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಕೇರಳ ತಂಡ 5 ಪಂದ್ಯಗಳಿಂದ 3ಪಂದ್ಯಗಳನ್ನು ಗೆದ್ದು 1 ಪಂದ್ಯವನ್ನು ಸೋತು 19 ಅಂಕಗಳೊಂದಿಗೆ ಎರಡನೆ ಸ್ಥಾನದಲ್ಲಿದೆ.
ಮೊನ್ನೆ ಛತ್ತೀಸ್ಗಢ ವಿರುದ್ಧ 7 ವಿಕೆಟ್ಗಳಿಂದ ಗೆದ್ದಿತ್ತು. ಗೋವಾ ವಿರುದ್ಧ ಡ್ರಾಗೆ ತೃಪ್ತಿಪಟ್ಟುಕೊಂಡಿತು. ತವರಿನಲ್ಲಿ ಪುದುಚೇರಿ ವಿರುದ್ಧ ಇನ್ನಿಂಗ್ಸ್ ಮತ್ತು 7 ರನ್ಗಳಿಂದ ಗೆದ್ದುಕೊಂಡಿತ್ತು. ಸರ್ವಿಸ್ ವಿರುದ್ಧ ಡ್ರಾ ಮಾಡಿಕೊಂಡಿತ್ತುಘಿ. ರಾಜಸ್ತಾನ ವಿರುದ್ಧ ಗದ್ದಿತ್ತು.
ಕೇರಳ ತಂಡ ಜಾರ್ಖಂಡ್ ವಿರುದ್ಧ ಗೆದ್ದಿತ್ತು. ನಂತರ ರಾಜಸ್ತಾನ ವಿರುದ್ಧ ಡ್ರಾ ಮಾಡಿಕೊಂಡಿತ್ತು. ಛತ್ತೀಸ್ಗಢ ವಿರುದ್ಧ ಜಯ ಸಾಧಿಸಿತ್ತು. ಗೋವಾ ವಿರುದ್ಧ 7 ವಿಕೆಟ್ ಸೋಲು, ಸರ್ವಿಸ್ ವಿರುದ್ಧ 214 ರನ್ ಗಳಿಂದ ಗೆದ್ದಿತ್ತು.
Ranaji 2023 : Karnataka – Kerala Ranaji Battle From Today…..