Ranaji Final ಆತಿಥೇಯರ ಮೇಲೆ ಸಂಪುರ್ಣ ಹಿಡಿತ ಸಾಧಿಸಿದ ಸೌರಾಷ್ಟ್ರ
ಆತಿಥೇಯ ಬಂಗಾಳ ವಿರುದ್ಧ ಸಂಪುರ್ಣ ಹಿಡಿತ ಸಾಧಿಸಿರುವ ಸೌರಾಷ್ಟ್ರ ಕ್ರಿಕೆಟ್ ತಂಡ ಗೆಲುವಿನತ್ತ ಹೆಜ್ಜೆ ಹಾಕಿದೆ.
ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಮೂರನೆ ದಿನದಾಟದ ಪಂದ್ಯದಲ್ಲಿ ಸೌರಾಷ್ಟ್ರ ಮೊದಲ ಇನ್ನಿಂಗ್ಸ್ನಲ್ಲಿ 404 ರನ್ಗಳಿಗೆ ಆಲೌಟ್ ಆಯಿತು. ಎರಡನೆ ಇನ್ನಿಂಗ್ಸ್ ಆರಂಭಿಸಿದ ಬಂಗಾಳ 169 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಷಕ್ಟದಲ್ಲಿ ಸಿಲುಕಿದೆ.
ದಿನದಾಟ ಆರಂಭಿಸಿದ ಸೌರಾಷ್ಟ್ರ ತಂಡಕ್ಕೆ ವೇಗಿ ಮುಕೇಶ್ ಕುಮಾರ್ ಆಘಾತ ನೀಡಿದರು. ಅರ್ಪಿತ್ ವಾಸವದ (81 ರನ್), ಚಿರಾಗ್ ಜಾನಿ (60 ರನ್) ಅವರುಗಳನ್ನು ಪೆವಿಲಿಯನ್ಗೆ ಅಟ್ಟಿದರು.
ನಂತರ ದಾಳಿಗಿಳಿದ ವೇಗಿ ಆಕಾಶ್ದೀಪ್, ಪ್ರೇರಕ್ ಮಂಕಡ್ (33 ರನ್) ಹಾಗೂ ನಾಯಕ ಜಯದೇವ್ ಉನದ್ಕತ್ (4ರನ್) ಬಲಿತೆಗೆದುಕೊಂಡರು. ಕೊನೆಯಲ್ಲಿ ಧರ್ಮೇಂದ್ರ ಸಿನ್ಹ್ ಜಡೇಜಾ 29 ರನ್ ಹಾಗು ಪಾರ್ಥ್ ಅಜೇಯ 14 ರನ್ ಗಳಿಸಿದರು. ಸೌರಾಷ್ಟ್ರ 230 ರನ್ ಮುನ್ನಡೆ ಪಡೆಯಿತು.
ಬಂಗಾಳ ಪರ ಮುಕೇಶ್ ಕುಮಾರ್ 4, ಆಕಾಶ್ದೀಪ್ ಹಾಗು ಇಶಾನ್ ಪೊರೆಲ್ ತಲಾ 3 ವಿಕೆಟ್ ಪಡೆದರು.
ಎರಡನೆ ಇನ್ನಿಂಗ್ಸ್ ಆರಂಭಿಸಿ ಬಂಗಾಳ ತಂಡ ನಾಯಕ ಜಯದೇವ್ ಉನದ್ಕತ್ ಹಾಗೂ ಚೇತನ್ ಸಾಕಾರಿಯಾ ದಾಳಿಗೆ ತತ್ತರಿಸಿತು. ಬಂಗಾಳ ಪರ ಸುಮಂತಾ ಗುಪ್ತ 1, ಅಭಿಮನ್ಯು ಈಶ್ವರನ್ 16, ಸುದೀಪ್ ಕುಮಾರ್14 ರನ್ ಗಳಿಸಿದರು.
ಮಧ್ಯಮ ಕ್ರಮಾಂಕದಲ್ಲಿ ಅನುಸ್ತುಪ್ ಮಜುಂಧಾರ್ 61 ರನ್ ಗಳಿಸಿ ಉನದ್ಕತ್ಗೆ ವಿಕೆಟ್ ಒ್ಪಪಿಸಿದರು. ನಾಯಕ ಮನೋಜ್ ತಿವಾರಿ ಅಜೇಯ 57, ಶಹಬಾಜ್ ಅಹ್ಮದ್ ಅಜೇಯ 13 ರನ್ ಗಳಿಸಿ ನಾಲ್ಕನೆ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಬಂಗಾಳ ತಂಡ ಇನ್ನು 61 ರನ್ಗಳ ಹಿನ್ನಡೆ ಅನುಭವಿಸಿದೆ. ಸೌರಾಷ್ಟ್ರ ಪರ ಜಯದೇವ್ ಮತ್ತು ಚೇತನ್ ತಲಾ 2 ವಿಕೆಟ್ ಪಡೆದಿದ್ದಾರೆ.