Ranji Trophy 2022 – 2023 : ಇಂದಿನಿಂದ ಸೆಮೀಸ್ ಕದನ
ಪ್ರಸಕ್ತ ಋತುವಿನ ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಗೆಲುವಿನ ಅಲೆಯಲ್ಲಿ ತೇಲುತ್ತಿರುವ ಕರ್ನಾಟಕ ಇಂದಿನಿಂದ ಆರಂಭಗೊಳ್ಳಲಿರುವ ಸೆಮಿಫೈನಲ್ ಪಂದ್ಯದಲ್ಲಿ ಸೌರಾಷ್ಟ್ರ ತಂಡವನ್ನ ಎದುರಿಸಲಿದೆ.
ಈ ಬಾರಿಯ ಪಂದ್ಯಾವಳಿಯಲ್ಲಿ ಕರ್ನಾಟಕ ಸೋಲನ್ನೇ ಅರಿಯದೆ ಅಜೇಯ ತಂಡವಾಗಿ ಮುನ್ನಡೆದಿದೆ.
ಲೀಗ್ ಹಂತದಲ್ಲಿ ಆಡಿದ 7 ಪಂದ್ಯದಲ್ಲಿ 4ರಲ್ಲಿ ಗೆಲುವು ಸಾಧಿಸಿದ್ದು, 3 ಪಂದ್ಯದಲ್ಲಿ ಡ್ರಾ ಸಾಧಿಸಿತು.
ಹೀಗಾಗಿ ಎಲೈಟ್ ಸಿ ಗುಂಪಿನಲ್ಲಿ 35 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದು ಕ್ವಾಟರ್ ಫೈನಲ್ಸ್ ಪ್ರವೇಶಿಸಿತ್ತು.
ಬಳಿಕ ಕ್ವಾರ್ಟರ್ ಫೈನಲ್ನಲ್ಲಿ ಉತ್ತರಕಾಂಡ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿದ ಕರ್ನಾಟಕ, ಇನ್ನಿಂಗ್ಸ್ ಹಾಗೂ 281 ರನ್ಗಳ ಭರ್ಜರಿ ಗೆಲುವು ಸಾಧಿಸಿ ಸೆಮಿಫೈನಲ್ಸ್ ಪ್ರವೇಶಿಸಿತು.
ಇದೀಗ ಮತ್ತೊಂದು ಮಹತ್ವದ ಪಂದ್ಯಕ್ಕೆ ಸಜ್ಜಾಗಿರುವ ಕರ್ನಾಟಕ, ಸೆಮೀಸ್ ಹಣಾಹಣಿಯಲ್ಲಿ ಸೌರಾಷ್ಟ್ರ ವಿರುದ್ಧ ಗೆದ್ದು ಫೈನಲ್ ಪ್ರವೇಶಿಸುವ ಲೆಕ್ಕಾಚಾರದಲ್ಲಿದೆ.
ಮಹತ್ವದ ಪಂದ್ಯಕ್ಕಾಗಿ ಎರಡು ತಂಡಗಳು ತಯಾರಿ ಮಾಡಿಕೊಂಡಿವೆ. ಉಭಯ ತಂಡಗಳ ನಡುವಿನ ಸೆಮೀಸ್ ಕದನಕ್ಕೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣ ವೇದಿಕೆ ಆಗಿವೆ.
ಪ್ರಸಕ್ತ ಸೀಸನ್ನಲ್ಲಿ ಕರ್ನಾಟಕ ತಂಡ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡು ವಿಭಾಗದಲ್ಲೂ ಉತ್ತಮ ಪ್ರದರ್ಶನ ನೀಡಿದೆ.
ನಾಯಕ ಮಯಂಕ್ ಅಗರ್ವಾಲ್, ಆರಂಭಿಕ ಬ್ಯಾಟ್ಸ್ಮನ್ ಆರ್. ಸಮರ್ಥ್, ದೇವದತ್ತ ಪಡಿಕ್ಕಲ್, ಮನೀಷ್ ಪಾಂಡೆ, ನಿಕಿನ್ ಜೋಸ್ ಅವರುಗಳು ರಾಜ್ಯ ತಂಡದ ಬ್ಯಾಟಿಂಗ್ ಶಕ್ತಿಯಾಗಿದ್ದರೆ.
ಶ್ರೇಯಸ್ ಗೋಪಾಲ್, ಕೆ. ಗೌತಮ್ ಅವರುಗಳು ಆಲ್ರೌಂಡರ್ ಪ್ರದರ್ಶನದ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ.
ಉಳಿದಂತೆ ವಿಜಯ್ ಕುಮಾರ್ ವೈಶಾಕ್, ವಿದ್ವತ್ ಕಾವೇರಪ್ಪ, ಎಂ. ವೆಂಕಟೇಶ್ ಅವರುಗಳು ಬೌಲಿಂಗ್ನಲ್ಲಿ ತಂಡಕ್ಕೆ ಆಸರೆಯಾಗಿದ್ದಾರೆ.
ಮತ್ತೊಂದೆಡೆ ಸೌರಾಷ್ಟ್ರ ತಂಡ ಕೂಡ ಬಲಿಷ್ಠವಾಗಿದೆ. ಲೀಗ್ ಹಂತದಲ್ಲಿ ಲೀಗ್ ಹಂತದಲ್ಲಿ ತೋರಿದ ಉತ್ತಮ ಪ್ರದರ್ಶನದ ಮೂಲಕ ಎಲೈಟ್ ಬಿ ಗುಂಪಿನಿಂದ ಕ್ವಾರ್ಟರ್ ಫೈನಲ್ ಪ್ರವೇಶಿಸಿತ್ತು.
ಬಳಿಕ ಕ್ವಾರ್ಟರ್ ಫೈನಲ್ನಲ್ಲಿ ಪಂಜಾಬ್ ವಿರುದ್ಧ 71 ರನ್ಗಳಿಂದ ಗೆದ್ದು ಸೆಮೀಸ್ ಪ್ರವೇಶಿಸಿತು.
ರಣಜಿ ಟ್ರೋಫಿಯಲ್ಲಿ ಕರ್ನಾಟಕ ಮತ್ತು ಸೌರಾಷ್ಟ್ರ ಈವರೆಗೂ 11 ಬಾರಿ ಮುಖಾಮುಖಿ ಆಗಿದ್ದು, ಇದರಲ್ಲಿ ಸೌರಾಷ್ಟ್ರ 5 ಬಾರಿ ಗೆದ್ದು ಮೇಲುಗೈ ಸಾಧಿಸಿದ್ದರೆ.
ಕರ್ನಾಟಕ ಕೇವಲ 2 ಬಾರಿ ಮಾತ್ರ ಜಯದ ನಗೆಬೀರಿದ್ದು, 4 ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ.
ಈ ಸೀಸನ್ನ ಮತ್ತೊಂದು ಸೆಮಿಫೈನಲ್ನಲ್ಲಿ ಮಧ್ಯಪ್ರದೇಶ ಹಾಗೂ ಬೆಂಬಾಲ್ ತಂಡಗಳು ಮುಖಾಮುಖಿ ಆಗಲಿದ್ದು, ಉಭಯ ತಂಡಗಳ ಈ ಹಣಾಹಣಿ ಇಂಧೋರ್ನಲ್ಲಿ ನಡೆಯಲಿದೆ.
Ranji Trophy 2022 – 2023 , semi final fight