ಮಂಗಳೂರು, ಅಗಸ್ಟ್24: ಕರಾವಳಿ ಮತ್ತು ಕರುನಾಡಿಗೆ ಹೆಮ್ಮೆಯ ಪಡುವಂತ ವಿಚಾರವೆಂದರೆ ಪ್ರಯಾಣ ಮತ್ತು ಪ್ರವಾಸೋದ್ಯಮ ಮಾಹಿತಿಯ ಪ್ರಕಾಶಕರಾದ ಫೊಡೋರ್ಸ್ನ ಇತ್ತೀಚಿನ ಆವೃತ್ತಿಯಲ್ಲಿ ಬಿಡುಗಡೆ ಮಾಡಿದ ಅತ್ಯದ್ಭುತ ವಾಸ್ತುಶಿಲ್ಪ ಹೊಂದಿರುವ ಅಗ್ರ 13 ಜೈನ ದೇವಾಲಯಗಳಲ್ಲಿ ಜೈನ ಕಾಶಿ ಮೂಡಬಿದಿರೆಯ ಸಾವಿರ ಕಂಬದ ಬಸದಿ ಮತ್ತು ಕಾರ್ಕಳದ ಚತುರ್ಮಮುಖ ಬಸದಿ ಸ್ಥಾನ ಪಡೆದಿದೆ.

ಮೊದಲ ಎರಡು ವಾಸ್ತುಶಿಲ್ಪ ಸ್ಥಾನಗಳಾಗಿ ರಾಜಸ್ಥಾನದ ರಣಕ್ಪುರ್ ಜೈನ ದೇವಸ್ಥಾನ ಮತ್ತು ರಾಜಸ್ಥಾನದ ಮೌಂಟ್ ಅಬುವಿನ ದಿಲ್ವಾರಾ ದೇವಾಲಯಗಳನ್ನು ಆಯ್ಕೆ ಮಾಡಲಾಗಿದೆ. ಇನ್ನೂ ಒಂದು ದೇವಾಲಯ – ತುಮಕೂರಿನ ಮದಗಂಡನಹಳ್ಳಿಯ ಮಂದರಗಿರಿ ಬೆಟ್ಟದಲ್ಲಿರುವ ನವಿಲು ಜೈನ ದೇವಾಲಯ, ಪಟ್ಟಿಯಲ್ಲಿ 12 ನೇ ಸ್ಥಾನದಲ್ಲಿದೆ.

ಒಟ್ಟು 13 ಜೈನ ದೇವಾಲಯಗಳ ಪಟ್ಟಿಯಲ್ಲಿ ಕರ್ನಾಟಕದ ಮೂರು ಜೈನ ಬಸದಿಗಳು ಉತ್ತಮ ವಾಸ್ತುಶಿಲ್ಪವನ್ನು ಹೊಂದಿದೆ ಎಂದು ತಿಳಿದು ಬಂದಿದೆ.








