ರಾತ್ರೋ ರಾತ್ರಿ ತನ್ನ ಫೇಮಸ್ ಆದ ರಾನು ಮಂಡಲ್ ಜೀವನಾಧಾರಿತ ಸಿನಿಮಾ..!
ಮುಂಬೈ: ರೈಲು ನಿಲ್ದಾಣದಲ್ಲಿ ಹಾಡುಗಳನ್ನ ಹಾಡುತ್ತಾ ಭಿಕ್ಷೆ ಬೇಡುತ್ತಾ ಹೊಟ್ಟೆ ಪಾಡು ನೋಡಿಕೊಳ್ತಿದ್ದ ರಾನು ಮಂಡಲ್ ತಮ್ಮ ಕೋಗಿಲೆ ಕಂಠದಿಂದಲೇ ರಾತ್ರೋ ರಾತ್ರಿ ಫೇಮಸ್ ಆಗಿ ದೇಶಾದ್ಯಂತ ಸಂಚಲನ ಸೃಷ್ಟಿ ಮಾಡಿದವರು.. ಇದೀಗ ಬಾಲಿವುಡ್ ನಲ್ಲಿ ರಾನು ಮಂಡಲ್ ಅವರ ಜೀವನಾಧರಿತ ( ಬಯೋಪಿಕ್) ಸಿನಿಮಾ ರೆಡಿಯಾಗ್ತಿದೆ ಎಂಬ ಸುದ್ದಿ ಭಾರೀ ಸದ್ದು ಮಾಡ್ತಿದೆ. ರಾನು ಮಂಡಲ್ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ ಏಕ್ ಪ್ಯಾರ್ ಕಾ ನಗ್ಮಾ ಹೈ ಹಾಡನ್ನು ರೈಲು ನಿಲ್ದಾಣದಲ್ಲಿ ಹಾಡಿದ್ದರು. ಇದನ್ನು ಕೆಲವರು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದರು. ಇದು ಕೆಲವೇ ದಿನಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ಅನೇಕರು ರಾನು ಗಾಯನವನ್ನು ಕೊಂಡಾಡಿದ್ದರು. ಅಷ್ಟೇ ಅಲ್ಲ ಅವರನ್ನ ಸ್ಟಾರ್ ಮಾಡುವುದರ ಹಿಂದೆ ಫೇಮಸ್ ಮ್ಯೂಸಿಕ್ ಕಂಪೋಸರ್ ಹಿಮೇಶ್ ಅವರ ಪಾತ್ರವೂ ಇದೆ.
ಕಾಶ್ಮೀರ ಪ್ರತ್ಯೇಕತಾವಾದಿ ಸೈಯದ್ ಮೃತದೇಹಕ್ಕೆ ಪಾಕ್ ಧ್ವಜ ಹೊದಿಕೆ – ಕುಟುಂಬದ ವಿರುದ್ಧ FIR
ಹಿಮೇಶ್ ತೇರಿ ಮೇರಿ ಕಹಾನಿ ಹಾಡಿಗೆ ಹಿನ್ನೆಲೆ ಗಾಯಕಿಯಾಗಿ ರಾನುಗೆ ಅವಕಾಶ ನೀಡಿದ್ದರು. ಇದಾದ ನಂತರದಲ್ಲಿ ಸಾಕಷ್ಟು ಶೋಗಳಿಗೆ ರಾನು ಅತಿಥಿ ಆಗಿ ಕಾಣಿಸಿಕೊಂಡಿದ್ದರು. ಈಗ ರಾನು ಜೀವನದ ಕಥೆ ಬಯೋಪಿಕ್ ಆಗುತ್ತಿದೆ. ರಿಶಿಕೇಶ್ ಮಂಡಲ್ ಅವರು ಈ ಬಯೋಪಿಕ್ ನಿರ್ದೇಶನ ಮಾಡುತ್ತಿದ್ದಾರೆ. ಇಶಿಕಾ ಡೇ ಅವರು ರಾನು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಇನ್ನೂ ಸಿನಿಮಾಗೆ ಮಿಸ್ ರಾನು ಮರಿಯಾ ಎಂದು ಟೈಟಲ್ ಫಿಕ್ಸ್ ಮಾಡಲಾಗಿದೆ. ಅಷ್ಟೇ ಅಲ್ಲ ಈ ಸಿನಿಮಾದಲ್ಲಿ ಹಿಮೇಶ್ ಕೂಡ ಕೆಲಸ ಮಾಡಲಿದ್ದಾರೆ ಎನ್ನಲಾಗುತ್ತಿದೆ.