Shaktiman | ಶಕ್ತಿಮಾನ್ ಪಾತ್ರದಲ್ಲಿ ಸ್ಟಾರ್ ಹೀರೋ
ಶಕ್ತಿಮಾನ್… ಈ ಟಿವಿ ಶೋ ಅಂದ್ರೆ 1990 ಕಿಡ್ಸ್ ಗೆ ಸಾಕಷ್ಟು ಅಭಿಮಾನ.
ಈಗ ಮಾರ್ವೆಲ್, ಡಿಸ್ನಿ ರಂತಹ ಹಾಲಿವುಡ್ ಸೂಪರ್ ಹೀರೋಸ್ ಇದ್ದಾರೆ.
ಆದ್ರೆ ಆಗ ಇಂಡಿಯನ್ ಸೂಪರ್ ಹೋರೋ ಅಂದ್ರೆ ಅದು ಶಕ್ತಿಮಾನ್.
ಈ ಶಕ್ತಿಮಾನ್ ಪಾತ್ರದಲ್ಲಿ ಪ್ರಮುಖ ನಟ ಮುಖೇಶ್ ಖನ್ನಾ ಅದ್ಭುತವಾಗಿ ನಟಿಸಿದ್ದರು.
ಇದೀಗ ಸುಮಾರು 29 ವರ್ಷಗಳ ನಂತರ ಈ ಟಿವಿ ಶೋ ಸಿನಿಮಾ ರೂಪ ತಾಳಲಿದೆ.
ಇದಕ್ಕೆ ಸಂಬಂಧಿಸಿದ ಹಕ್ಕುಗಳನ್ನು ಸೋನಿ ಪಿಚ್ಚರ್ ಇಂಟರ್ ನ್ಯಾಷನಲ್ ಖರೀದಿಸಿದೆ.
ಭಾರಿ ಬಜೆಟ್ ಬಜೆಟ್ ಸಿನಿಮಾವಾಗಿ ಸೆಟ್ಟೇರಿಸಲು ಭೀಷ್ಮ ಇಂಟರ್ ನ್ಯಾಷನಲ್ ಜೊತೆ ಕೂಡಿ ಸೋನಿ ಪಿಚ್ಚರ್ ನಿರ್ಮಿಸಲಿದೆ.
ಪ್ರತಿಷ್ಟಾತ್ಮಕವಾಗಿ ರೂಪುಗೊಳ್ಳಲಿರುವ ಈ ಸಿನಿಮಾದಲ್ಲಿ ಸೂಪರ್ ಹೀರೋ ಪಾತ್ರದಲ್ಲಿ ಸ್ಟಾರ್ ಹೀರೋ ರಣವೀರ್ ಸಿಂಗ್ ಕಾರಣಿಸಿಕೊಳ್ಳಲಿದ್ದಾರೆ.
ಅಷ್ಟೆ ಅಲ್ಲದೇ ಈ ಪಾತ್ರದಲ್ಲಿ ಕಾಣಿಸಿಕೊಳ್ಳಲು ರಣ್ವೀರ್ ಉತ್ಸುಕರಾಗಿದ್ದಾರಂತೆ.
ಆದ್ರೆ ಶಕ್ತಿಮಾನ್ ಆಗಿ ರಣವೀರ್ ನಟಿಸಿದ್ರೆ ಈ ಪಾತ್ರಕ್ಕೆ ಪ್ರತ್ಯೇಕತೆ ಬರುತ್ತದೆ ಎಂದು ನಿರ್ಮಾಪಕರು ಭಾವಿಸುತ್ತಿದ್ದಾರೆ.