RAPE
ಛತ್ತೀಸ್ಗಢದ ಬೆಮೆತಾರಾ ಜಿಲ್ಲೆಯಲ್ಲಿ 17 ವರ್ಷದ ಬಾಲಕ 10 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ .
ಈ ಕೃತ್ಯವೆಸಗಿದ ಪೊಲೀಸರು ಆರೋಪಿಯನ್ನು ಬಂಧಿಸಿ ಪೋಕ್ಸೋ ಮತ್ತು ಐಪಿಸಿಯ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೋಲೀಸರ ಪ್ರಕಾರ, ಆರೋಪಿಯು ತಾನು ಅಶ್ಲೀಲ್ ವಿಡಿಯೋಗಳನ್ನು ನೋಡಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಆದರೆ ತನಿ ಮಾಡಿದ ಕೃತ್ಯದಿಂದ ಸಿಕ್ಕಿಬೀಳುವುದಾಗಿ ಭಯಗೊಂಡು ಅವಳನ್ನು ಕೊಂದು ಹಾಕಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿ ಭಾರದ್ವಾಜ್ ತಿಳಿಸಿದ್ದಾರೆ.
ವಾಸ್ತವವಾಗಿ, ಮೊಬೈಲ್ನಲ್ಲಿ ಅಶ್ಲೀಲ ವೀಡಿಯೊಗಳನ್ನು ವೀಕ್ಷಿಸಿದ ನಂತರ 10 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಂದ 17 ವರ್ಷದ ಬಾಲಕನನ್ನು ಛತ್ತೀಸ್ಗಢದ ಬೆಮೆತಾರಾ ಜಿಲ್ಲೆಯ ಕೊಟ್ವಾಲಿ ಪೊಲೀಸರು ಬಂಧಿಸಿದ್ದಾರೆ.
ನ.26ರಂದು ಬಾಲಕಿ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿತ್ತು , ಈ ಮಾಹಿತಿಯ ನಂತರ ಪೊಲೀಸ್ ತಂಡವನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಪೊಲೀಸ್ ತಂಡ ಬಾಲಕಿಯ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು.
ಅಪರಾಧವನ್ನು ಒಪ್ಪಿಕೊಂಡ ಹುಡುಗ
ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ನಡೆದಿರುವ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ತನಿಖೆಯ ಸಮಯದಲ್ಲಿ, ಪೊಲೀಸರು ನೆರೆಹೊರೆಯ ಹುಡುಗನನ್ನು ಅನುಮಾನಿಸಿ ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಹುಡುಗ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ .
ಮೊಬೈಲ್ ನಲ್ಲಿ ಅಶ್ಲೀಲ್ ವಿಡಿಯೋ ನೋಡುವ ಚಟ ಹೊಂದಿದ್ದ ಬಾಲಕ
ವಿಚಾರಣೆ ವೇಳೆ ಬಾಲಕ ತಾನು ಮೊಬೈಲ್ನಲ್ಲಿ ಅಶ್ಲೀಲ ವಿಡಿಯೋ ನೋಡುವ ಚಟ ಹೊಂದಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ . ಅಶ್ಲೀಲ್ ವಿಡಿಯೋ ನೋಡಿ ಅಲ್ಲೆ ಅಕ್ಕ ಪಕ್ಕ ದ ಮನೆಯಲ್ಲಿ ಯಾರಾದರು ಬಾಲಕಿ ಒಬ್ಬಂಟಿಯಾಗಿದ್ದಾಳೆಯೇ ಎಂದು ಗಮನಿಸಿತ್ತಿದ್ದ .
ಬಹಿರಂಗವಾಗಬಹುದೆಂಬ ಭಯದಿಂದ ಕೊಲೆ
ಈ ವೇಳೆ ಬಾಲಕಿ ಒಬ್ಬಳೇ ಇರುವುದನ್ನು ಕಂಡ ಆತ ಆಕೆಯ ಮೇಲೆ ಅತ್ಯಾಚಾರ ಎಸಗಿ, ಬಯಲಾಗಬಹುದೆಂಬ ಭಯದಿಂದ ಬಾಲಕಿಯನ್ನು ದುಪಟ್ಟಾದಿಂದ ನೇಣು ಹಾಕಿದ್ದಾನೆ. ನಂತರ ಅವನು ಏನು ಅರಿಯದಂತೆ ತನ್ನ ಮನೆಗೆ ತೆರಳಿದ್ದಾನೆ . ಸದ್ಯ ಆರೋಪಿ ಬಾಲಕನನ್ನು ಪೊಲೀಸರು ಪೋಕ್ಸೋ ಪ್ರಕರಣದಡಿ ಬಂದಿಸಿದ್ದಾರೆ.