ಅತ್ಯಾಚಾರ ಯತ್ನ : ಆರೋಪಿಗೆ ಗ್ರಾಮದ ಎಲ್ಲ ಮಹಿಳೆಯರ ಬಟ್ಟೆ ಒಗೆಯುವ ಷರತ್ತಿನಡಿ ಜಾಮೀನು..!
ಅತ್ಯಾಚಾರಕ್ಕೆ ಯತ್ನಿಸಿದ್ದ ಆರೋಪಿಯೊಬ್ಬನಿಗೆ ಮಹಿಳೆಯರ ಬಟ್ಟೆ ಒಗೆಯುವ ಷರತ್ತು ಹಾಕಿ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಬಿಹಾರದ ಮಜ್ಹೋರ್ ನಲ್ಲಿರುವ 20 ವರ್ಷದ ಲಾಲನ್ ಕುಮಾರ್ ಎಂಬಾತ ದೋಭಿಯಾಗಿದ್ದಾನೆ. ಈತ ಇದೀಗ ಷರತ್ತಿನ ಜಾಮೀನು ಪಡೆದು ಬಿಡುಗಡೆಯಾಗಿದ್ದಾನೆ. ಈ ಷರತ್ತಿನ ಅನ್ವಯ 6 ತಿಂಗಳುಗಳ ಕಾಲ ಗ್ರಾಮದಲ್ಲಿ ಇರುವ ಎಲ್ಲ ಮಹಿಳೆಯರ ಬಟ್ಟೆಗಳನ್ನು ತೊಳೆಯಬೇಕು ಮತ್ತು ಇಸ್ತ್ರಿ ಮಾಡಬೇಕು. ಇನ್ನೂ ಬಟ್ಟೆ ಒಗೆಯಲು ಬೇಕಾದ ಡಿಟರ್ಜಂಟ್ ಮತ್ತು ಇತರೆ ವಸ್ತುಗಳನ್ನು ಸ್ವಯಂ ಖರೀದಿಸಬೇಕು ಎಂದೂ ಕೂಡ ಷರತ್ತಿನಲ್ಲಿ ಹೇಳಲಾಗಿದೆ. ಈತ ಅತ್ಯಾಚಾರ ಯತ್ನ ಸೇರಿ ವಿವಿಧ ಆರೋಪಗಳಡಿ ಈ ವರ್ಷದ ಏಪ್ರಿಲ್ ತಿಂಗಳಲ್ಲಿ ಬಂಧನಗೊಂಡು ಜೈಲು ಸೇರಿದ್ದ.