ತಾಯಿಯಾದ ಬಳಿಕ ಅಪ್ರಾಪ್ತೆಯನ್ನ ಮದುವೆಯಾಗಲು ಒಪ್ಪಿದ ವಿವಾಹಿತ ಆರೋಪಿಗೆ ಜಾಮೀನು..!
25 ವರ್ಷದ ವಿವಾಹಿತನೋರ್ವ ಅಪ್ರಾಪ್ತೆ ಮೇಲೆ ನಿರಂತರ ಅತ್ಯಾಚಾರವೆಸಗಿದ್ದ. ಪರಿಣಾಮ ಆಕೆ ಇದೀಗ ಮಗುವಿಗೆ ಜನ್ಮ ನೀಡಿದ್ದಾಳೆ. ಈ ಸಂಬಂಧ ದೂರು ದಾಖಲಿಸಿಕೊಂಡು ಆರೋಪಿಯನ್ನ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ರು. ಈ ಪ್ರಕರಣದ ವಿಚಾರಣೆ ನಡೆಸಿದ ಮುಂಬೈ ಪೋಕ್ಸೊ ಕೋರ್ಟ್ ಇದೀಗ ಆರೋಪಿಗೆ ಜಾಮೀನು ನೀಡಿದೆ.
ಕಾಂಗ್ರೆಸ್ ಜಾರಿಗೊಳಿಸಿರುವ ಕಾಯ್ದೆಗಳನ್ನು ಕೊಲ್ಲುವುದೇ ನಮ್ಮ ಮೋದಿ ಜೀ ಉದ್ದೇಶ : ರಾಹುಲ್ ರಾಂಧಿ..!
ಈತ ಇದೀಗ ಅಪ್ರಾಪ್ತೆ (ಸಂತ್ರಸ್ತೆ)ಯನ್ನು ಮದುವೆಯಾಗುವ ಭರವಸೆ ನೀಡಿದ್ದಾನೆ. ಈ ಹಿನ್ನೆಲೆ ಕೋರ್ಟ್ ಈತನಿಗೆ ಜಾಮೀನು ನೀಡಿದೆ. ಈತ ವಿವಾಹಿತನಾಗಿದ್ದು, ಆತನ ವಿರುದ್ಧ ಪೀಡಿತೆ ತಾಯಿ ದೂರು ನೀಡಿದ್ದಳು. ಆದ್ರೆ ಈಗ ಆಕೆಯೇ ಕೋರ್ಟ್ ಗೆ ಮನವಿ ಸಲ್ಲಿಸಿದ್ದಳು. ಆರೋಪಿ, ಮಗಳನ್ನು ಮದುವೆಯಾಗಲು ಸಿದ್ಧನಾಗಿದ್ದು, ಆತನಿಗೆ ಜಾಮೀನು ನೀಡುವಂತೆ ಕೇಳಿದ್ದಳು. ಮಗಳಿಗೆ ಮಗು ಹುಟ್ಟಿದ್ದು, ಮಗಳ ಮದುವೆ ಮಾಡುವುದಾಗಿ ಹೇಳಿದ್ದಳು. ಸದ್ಯ ನ್ಯಾಯಾಲಯ ಆರೋಪಿಗೆ ಜಾಮೀನು ನೀಡಿದೆ. ಅಲ್ಲದೇ ಈ ಇಬ್ಬರು ಪರಸ್ಪರ ಒಪ್ಪಿಗೆ ಮೇರೆಗೆ ಸಂಬಂಧ ಬೆಳೆಸಿದ್ದಾರೆಂದು ಕೋರ್ಟ್ ಹೇಳಿದೆ.
ಡ್ರಗ್ಸ್ ಕೇಸ್ ನಲ್ಲಿ ಇಂದ್ರಜಿತ್ ಮತ್ತೆ ಸ್ಫೋಟಕ ಹೇಳಿಕೆ
16 ವರ್ಷದ ಬಾಲಕಿ ತಂದೆಗೆ ಆರೋಪಿ ಪರಿಚಿತನಾಗಿದ್ದ. ಆತನ ಮೊದಲ ಮದುವೆ ವಿಷಯ ಬಾಲಕಿಗೆ ತಿಳಿದಿರಲಿಲ್ಲ. ಈ ವೇಳೆ ಈಕೆ ಗರ್ಭಿಣಿಯಾಗಿದ್ದು, ಗರ್ಭ ಧರಿಸಿರುವ ವಿಚಾರವನ್ನ ಮನೆಯವರಿಗೆ ಹೇಳದಂತೆ ಬೆದರಿಸಿದ್ದ. ಇದೀಗ ಸಂತ್ರಸ್ತೆಯ ತಾಯಿಯ ಮನವಿ ಮೇರೆಗೆ ಕೋರ್ಟ್ ಆತನಿಗೆ ಜಾಮೀನು ಮಂಜೂರು ಮಾಡಿದ್ದು, ಬಾಲಕಿಗೆ 18 ವರ್ಷವಾಗ್ತಿದ್ದಂತೆ ಆಕೆಯನ್ನು ಆರೋಪಿ ಮದುವೆಯಾಗುವುದಾಗಿ ಹೇಳಿದ್ದಾನೆ. 2 ವರ್ಷಗಳ ನಂತರ ಇಬ್ಬರ ಮದುವೆ ನಡೆಯಲಿದೆ.
ಪ್ರೀತಿಗೆ ಒಪ್ಪದ ಯುವತಿಯನ್ನ ನಡುರಸ್ತೆಯಲ್ಲೇ ಕೊಚ್ಚಿ ಕೊಂದ ಪಾಗಲ್ ಪ್ರೇಮಿ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel