ಬಾಲಕಿಯ ಮೇಲೆ ಅತ್ಯಾಚಾರ ಎಸಗಿ.. 5.ರೂ ಕೊಟ್ಟ ಕೀಚಕ

1 min read
Bhopal

ಬಾಲಕಿಯ ಮೇಲೆ ಅತ್ಯಾಚಾರ ಎಸಗಿ.. 5.ರೂ ಕೊಟ್ಟ ಕೀಚಕ

ಭೋಪಾಲ್ : ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಅತ್ಯಾಚಾರ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಶಿಕ್ಷೆಯಾದರೂ ಮತ್ತೆ ಮತ್ತೆ ಇಂತಹ ನೀಚ ಪ್ರಕರಣಗಳು ವರದಿ ಆಗುತ್ತಲೇ ಇದ್ದು, ಸಮಾಜ ತಲೆತಗ್ಗಿಸುವಂತಾಗಿದೆ.

ಮಧ್ಯಪ್ರದೇಶದಲ್ಲಿ ಕಾಮುಕನೋರ್ವ ಆಟವಾಡುತ್ತಿದ್ದ ಬಾಲಕಿಯನ್ನ ಕಸದ ತೊಟ್ಟಿಯೊಳಗೆ ಹೊತ್ತೊಯ್ದು ಅತ್ಯಾವಾರ ಎಸಗಿದ್ದಾನೆ. ಅಲ್ಲದೆ ಈ ವಿಚಾರವನ್ನ ಯಾರಿಗೂ ಹೇಳದಂತೆ ಬಾಲಕಿಗೆ ಐದು ರೂಪಾಪಿಕೊಟ್ಟಿದ್ದಾನೆಂದು ವರದಿಯಾಗಿದೆ.

Bhopal

ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಬಾಲಕಿಗೆ ಓರ್ವ ವ್ಯಕ್ತಿ 100 ರೂಪಾಯಿ ಇಟ್ಟು ಅಂಗಡಿಗೆ ಹೋಗಿ ತಂಬಾಕು ತೆಗೆದುಕೊಂಡು ಬಂದು ಕಸದ ತೊಟ್ಟಿಯಲ್ಲಿರುವ ಅಂಕಲ್ ಗೆ ಕೊಡು ಎಂದು ಹೇಳಿದ್ದಾನೆ. ಏನು ಅರಿಯದ ಬಾಲಕಿ ವ್ಯಕ್ತಿ ಹೇಳಿದಂತೆ ತಂಬಾಕು ತಂದು ಕೊಟ್ಟಿದ್ದು, ಆಗ ಕಸದ ತೊಟ್ಟಿ ಬಳಿ ಇರುವ ವ್ಯಕ್ತಿ ಬಾಲಕಿಯನ್ನು ಎಳೆದುಕೊಂಡು ಅತ್ಯಾಚಾರ ಮಾಡಿದ್ದಾನೆ. ನಂತರ ಮನೆಗೆ ಬಂದ ಬಾಲಕಿ ಈ ವಿಚಾರವನ್ನ ತನ್ನ ಪೋಷಕರ ಬಳಿ ಹೇಳಿಕೊಂಡಿದ್ದು, ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಸಂಬಂಧ
ರವಿ ಎಂಬ ವ್ಯಕ್ತಿಯನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

chinthamani
ಜಾಹೀರಾತು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd