ಟೈಪಿಸ್ಟ್ ಎಡವಟ್ಟಿನಿಂದ ಆರೋಪ ಮುಕ್ತವಾಗುತ್ತಿದ್ದ ಅಪರಾಧಿಗೆ , ಜೀವಾವಧಿ ಶಿಕ್ಷೆ ವಿಧಿಸಿದ ಮದ್ರಾಸ್ ಹೈಕೋರ್ಟ್
ತಮಿಳುನಾಡು : ಟೈಪಿಸ್ಟ್ ಒಬ್ಬ ಮಾಡಿದ್ದ ದೊಡ್ಡ ಎಡವಟ್ಟಿನಿಂದಾಗಿ ಅತ್ಯಾಚಾರ ಅಪರಾಧಿಗೆ ನಿರಪರಾಧಿ ಎಂದು ತೀರ್ಪು ನೀಡಿದ್ದ ನ್ಯಾಯಾಲಯವು, ಕೊನೆಗೆ ಮದ್ರಾಸ್ ಹೈಕೋರ್ಟ್ ಮಧ್ಯಪ್ರವೇಶಿಸಿ ತಪ್ಪು ಸರಿಪಡಿಸಿದ ನಂತರ ಅಪರಾಧಿಗೆ ಶಿಕ್ಷೆ ವಿಧಿಸಿದೆ. ಹೌದು.. ಅತ್ಯಾಚಾರ ಪ್ರಕರಣವೊಂದರ ವರದಿ ತಯಾರಿಸುವಾಗ ಟೈಪಿಸ್ಟ್ ಮಾಡಿರುವ ಎಡವಟ್ಟೊಂದು ಅಪರಾಧಿಯನ್ನು, ನಿರಪರಾಧಿಯಾಗಿ ಬಿಡುಗಡೆಯಾಗಿಸುವ ಸಂದರ್ಭ ಸೃಷ್ಟಿಸಿತ್ತು. ಕೊನೆಗೆ ಮದ್ರಾಸ್ ಹೈಕೋರ್ಟ್ ಈ ಪ್ರಕರಣದಲ್ಲಿ ಮಧ್ಯ ಪ್ರವೇಶಿಸಿ, ಕೆಳಹಂತದ ನ್ಯಾಯಾಲಯ ನೀಡಿದ್ದ ಬಿಡುಗಡೆ ತೀರ್ಪನ್ನು ಬದಲಿಸಿ ಅಪರಾಧಿಗೆ ಶಿಕ್ಷೆ ವಿಧಿಸಿದೆ.
2017ರಲ್ಲಿ 2 ವರೆ ವರ್ಷದ ಮಗುವಿನ ಮೇಲೆ ಅತ್ಯಾಚಾರ ನಡೆದ ಪ್ರಕರಣ ಸಂಬಂಧ ಮಗುವಿನ ತಾಯಿ ಪೊಲೀಸರಿಗೆ ಆರೋಪಿಯ ವಿರುದ್ಧ ದೂರು ಸಲ್ಲಿಸಿದ್ರು.. ಆರೋಪದ ಮೇರೆಗೆ ಪಕ್ಕದ ಮನೆಯವನ ವಿರುದ್ಧ ಪೊಲೀಸರು ದೂರು ದಾಖಲು ಮಾಡಿಕೊಂಡು ತನಿಖೆ ನಡೆಸಿದ್ದರು. ಆಗ ತಯಾರಾದ ವೈದ್ಯಕೀಯ ಚಿಕಿತ್ಸಾ ವರದಿಯಲ್ಲಿ ಮಗುವಿನಲ್ಲಿ ಕಂಡುಬಂದ ಆ ವ್ಯಕ್ತಿಯ ಸಿಮೆನ್ (ವೀರ್ಯ) ಅನ್ನು ಸೆಮ್ಮನ್ ಎಂದು ತಪ್ಪಾಗಿ ಮುದ್ರಿಸಲಾಗಿತ್ತು. ಅಂದ್ಹಾಗೆ ತಮಿಳಿನಲ್ಲಿ ಸೆಮ್ಮನ್ ಎಂದರೆ ಕೆಮ್ಮಣ್ಣು ಎಂದರ್ಥ. ಹಾಗಾಗಿ, ಪ್ರಕರಣದ ವಿಚಾರಣೆ ನಡೆಸಿದ್ದ ಪೋಕ್ಸೋ ನ್ಯಾಯಾಲಯ, ಆರೋಪಿಯ ಬಿಡುಗಡೆಗೆ ಆದೇಶಿಸಿತ್ತು. ಆದರೆ, ಮಗುವಿನ ತಾಯಿ ಮದ್ರಾಸ್ ಹೈಕೋರ್ಟ್ ಮೊರೆ ಹೋದರು. ವರದಿಯಲ್ಲಿ ಆಗಿರುವ ಮುದ್ರಣ ದೋಷವನ್ನು ಪತ್ತೆ ಹಚ್ಚಿದ ಕೋರ್ಟ್ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಜೋಕಾಲಿಯಿಂದ 6,300 ಅಡಿ ಕೆಳಗೆ ಬಿದ್ದ ಮಹಿಳೆಯರು – VIDEO VIRAL