50 ವರ್ಷದ ವಿಧವೆಯ ಮೇಲೆ ಅತ್ಯಾಚಾರ : ಗರ್ಭವತಿಯಾದ ಸಂತ್ರಸ್ತೆ
ಉತ್ತರಪ್ರದೇಶ: 50 ವರ್ಷದ ವಿಧವೆಯ ಮೇಲೆ ವ್ಯಕ್ತಿಯೋರ್ವ ಅತ್ಯಾಚಾರವೆಸಗಿ ಆಕೆಯನ್ನು ಗರ್ಭವತಿಯನ್ನಾಗಿಸಿರುವ ಘಟನೆ ಉತ್ತರಪ್ರದೇಶದ ಕೊತ್ವಾಲಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಕಳೆದ ಡಿ.7 ರಂದು ಮಹಿಳೆಯ ಮನೆಗೆ ನುಗ್ಗಿದ್ದ ಆರೋಪಿ ಅಖಿಲೇಶ್ ಅಹಿರ್ವಾರ್ ಎಂಬಾತ ಮಹಿಳೆಯನ್ನ ಬೆದರಿಸಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಇದೀಗ ಮಹಿಳೆ ಗರ್ಭವತಿಯಾಗಿದ್ದಾಳೆ ಎಂದು ಆಕೆ ಕೋತ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಲೆ.
ಶ್ರೀಕೃಷ್ಣ ಪರಮಾತ್ಮನನ್ನ ಕಾಣಬೇಕೆಂಬ ಹಂಬಲದಲ್ಲಿ 6ನೇ ಮಹಡಿಯಿಂದ ಜಿಗಿದ ರಷ್ಯನ್ ಮಹಿಳೆ!
ಅಲ್ದೇ ಅತ್ಯಾಚಾರದ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಅಳಿಲೇಶ್ ಜೀವ ಬೆದರಿಕೆ ಹಾಕಿದ್ದ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದು, ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಿಡಿಸಿದ್ದಾರೆ. ಇತ್ತ ತಲೆಮರೆಸಿಕೊಂಡಿರುವ ಆರೋಪಿಯ ಬಂಧನಕ್ಕೂ ಪೊಲೀಸರು ಬಲೆ ಬೀಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








