ರ್ಯಾಪಿಡ್ ರಶ್ಮಿ ಮನೆಗೆ ಬಂದ ಮುದ್ದಾದ ಅತಿಥಿ..!
ಬೆಂಗಳೂರು: ತಮ್ಮ ರೇಡಿಯೋ ಶೋಗಳ ಮೂಲಕ ಶ್ರೋತೃಗಳ ಮನದಲ್ಲಿ ರ್ಯಾಪಿಡ್ ರಶ್ಮಿ ಎಂತಲೇ ಖ್ಯಾತರಾದ ರೇಡಿಯೋ ಜಾಕಿ ರಶ್ಮಿ ಅವರ ಮನೆಗೆ ಮುದ್ದಾದ ಅತಿಥಿಯ ಆಗಮನವಾಗಿದೆ. ರಶ್ಮಿ ಅವರ ಮನೆಗೆ ಗೋಲ್ಡನ್ ರಿಟ್ರೈವರ್ ತಳಿಯ ಪುಟ್ಟ ಶ್ವಾನ ಆಗಮಿಸಿದೆ.
ಹೌದು, ರಶ್ಮಿ ಮತ್ತವರ ಪತಿ ಡೇವಿಸ್ ಶ್ವಾನಪ್ರೇಮಿಗಳು. ಈ ಮೊದಲು ಅವರ ಮನೆಯಲ್ಲಿ ಗೂನರ್ ಮತ್ತು ರಾಕೆಟ್ ಹೆಸರಿನ ಮುದ್ದಾದ ಶ್ವಾನಗಳಿವೆ. ಇವುಗಳ ತುಂಟಾಟದ ವಿಡಿಯೋಗಳನ್ನು ರಶ್ಮಿ ತಮ್ಮ ಇನ್ ಸ್ಟಾಗ್ರಾಂ ಅಕೌಂಟ್ ನಲ್ಲಿ ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಈಗ ಈ ಸಾಲಿಗೆ ಮಾಯಾ(ಗೋಲ್ಡನ್ ರಿಟ್ರೈವರ್) ಸೇರಿದ್ದಾಳೆ.
ಮಾಯಾಳ ಆಗಮನವನ್ನು ಖುದ್ದು ರ್ಯಾಪಿಡ್ ರಶ್ಮಿ ತಮ್ಮ ಅಭಿಮಾನಿಗಳಿಗೆ ಫೋಟೋ ಮತ್ತು ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ. ಸದ್ಯ ಮಾಯಾಳ ತುಂಟಾಟದ ವಿಡಿಯೋಗಳು ಅವರ ಅಭಿಮಾನಿಗಳ ಮನ ಕದ್ದಿವೆ. ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಮಾಯಾ ಮತ್ತು ರಾಕೆಟ್ ಆಟ ಆಡುತ್ತಿರುವ ಸುಂದರ ಕ್ಷಣಗಳನ್ನು ರಶ್ಮಿ ಹಂಚಿಕೊಂಡಿದ್ದಾರೆ.
ಇನ್ನು, ರ್ಯಾಪಿಡ್ ರಶ್ಮಿ ದಂಪತಿ ಕೊರೋನಾದಿಂದ ಸಂಕಷ್ಟದಲ್ಲಿರುವವರಿಗಾಗಿ ಹಣ ಸಂಗ್ರಹಿಸಿ, ಅವರ ಮನೆ ಮನೆಗೆ ತೆರಳಿ ಊಟ ಮತ್ತು ಮಾಸ್ಕ್ ಗಳನ್ನು ವಿತರಣೆ ಮಾಡುತ್ತಿದ್ದಾರೆ. ಇದು ಸಾಕಷ್ಟು ಮೆಚ್ಚುಗೆಗೆ ಕಾರಣವಾಗಿದೆ. ರಶ್ಮಿ ಅವರ ಈ ಅಭಿಯಾನಕ್ಕೆ ಸಾಕಷ್ಟು ಮಂದಿ ಕೈ ಜೋಡಿಸಿದ್ದಾರೆ.
ವಾಣಿ ಸೊನ್ನ
ಲಸಿಕೆ ಹಾಕಿಸಿಕೊಳ್ಳುವ ಮುನ್ನ ರಕ್ತ ದಾನ ಮಾಡಿದ ವಸಿಷ್ಠ ಸಿಂಹ