ಭಾರತ ವಾಯುನೆಲೆಗೆ ಬಂದು ಲ್ಯಾಂಡ್ ಆದ 3 ರಫೇಲ್ ಯುದ್ಧ ವಿಮಾನಗಳು..!
ನವದೆಹಲಿ: ಭಾರತಕ್ಕೆ ಮತ್ತೆ 3 ರಫೇಲ್ ಯುದ್ಧವಿಮಾನಗಳು ಬಂದು ಲ್ಯಾಂಡ್ ಆಗಿವೆ. ಫ್ರಾನ್ಸ್ ನ ಡಾಸೊ ಏವಿಯೇಷನ್ ಕಂಪನಿ ನಿರ್ಮಿತ ಮೂರು ರಫೇಲ್ ಯುದ್ಧ ವಿಮಾನಗಳು ಬುಧವಾರ ಗುಜರಾತ್ ನ ಜಾಮ್ ನಗರ್ ವಾಯುನೆಲೆಗೆ ಬಂದಿಳಿದಿವೆ. ಫ್ರಾನ್ಸ್ನಿಂದ ಹೊರಟು ಸುಮಾರು ಏಳು ಸಾವಿರ ಕಿ.ಮೀ ಕ್ರಮಿಸಿ 3ನೇ ಹಂತದಲ್ಲಿ ಭಾರತಕ್ಕೆ ತಲುಪಿರುವ ಯುದ್ಧ ವಿಮಾನಗಳು ವಾಯುಪಡೆಗೆ ಆನೆಬಲ ತುಂಬಿವೆ.
ಈ ಸಂಬಂಧ ಅಧಿಕೃತವಾಗಿ ಟ್ವೀಟ್ ಮಾಡಿರುವ ಭಾರತೀಯ ವಾಯುಸೇನೆಯು, ‘3ನೇ ಹಂತದ 3 ರಫೇಲ್ ಯುದ್ಧವಿಮಾನಗಳು IAAF ವಾಯುನೆಲೆಗೆ ಬಂದಿಳಿದಿವೆ. ಅವುಗಳು ತಡೆರಹಿತವಾಗಿ ಏಳು ಸಾವಿರ ಕಿ.ಮೀ ದೂರ ಕ್ರಮಿಸಿ ಇಲ್ಲಿಗೆ ತಲುಪಿವೆ. ಯುಎಇಯಲ್ಲಿ ಇರುವ ಫ್ರಾನ್ಸ್ನ ವಾಯುನೆಲೆಯಲ್ಲಿ ಇಂಧನ ತುಂಬಿಸಿಕೊಳ್ಳುವುದಕ್ಕಾಗಿ ಒಂದು ಸಲ ನಿಲುಗಡೆ ಮಾಡಲಾಗಿದೆ. ಯುಎಇ ವಾಯುಪಡೆ ಒದಗಿಸಿದ ಇಂಧನ ಬೆಂಬಲವನ್ನು ಭಾರತೀಯ ವಾಯುಪಡೆ ಪ್ರಶಂಸಿಸುತ್ತದೆ’ ಎಂದು ತಿಳಿಸಿದೆ.
Video : ಎಲ್ಲಿ ನೋಡಿದ್ರೂ ಮೀನು… ಮೀನು… ಬಿಟ್ಟಿ ಮೀನುಗಳಿಗೆ ಮುಗಿದ್ದ ಜನರು..!
ಇನ್ನೂ ಕಳೆದ ವರ್ಷ ಸೆಪ್ಟೆಂಬರ್ 10ರಂದು ಭಾರತ ವಾಯುಪಡೆಗೆ ಮೊದಲನೇ ಹಂತದಲ್ಲಿ ರಫೇಲ್ ಯುದ್ಧ ವಿಮಾನಗಳು ಬಂದಿಳಿದಿದ್ದವು. ಬಳಿಕ 2ನೇ ಹಂತದ ರಫೇಲ್ ಯುದ್ಧ ವಿಮಾನಗಳು ಸಹ ಕಳೆದ ವರ್ಷ ನವೆಂಬರ್ ನಲ್ಲಿ ಬಂದು ವಾಯುನೆಲೆ ಸೇರಿದ್ದವು. ಇದೀಗ 3ನೇ ಹಂತದಲ್ಲಿ 3 ಫೈಟರ್ ಜೆಟ್ ಗಳು ಭಾರತಕ್ಕೆ ಬಂದಿಳಿದಿವೆ.
ಭಾರತವು ಫ್ರಾನ್ಸ್ನಿಂದ ಒಟ್ಟು 59 ಸಾವಿರ ಕೋಟಿ ರೂ. ವೆಚ್ಚದಲ್ಲಿ ಒಟ್ಟು 36 ರಫೇಲ್ ಯುದ್ಧ ವಿಮಾನಗಳನ್ನು ಖರೀದಿ ಮಾಡುವ ಒಪ್ಪಂದಕ್ಕೆ ಸಹಿ ಹಾಕಿದೆ. ಅದ್ರಂತೆ ಹಂತ ಹಂತವಾಗಿ ರಫೇಲ್ ಯುದ್ಧ ವಿಮಾನಗಳು ಭಾರತಕ್ಕೆ ಆಗಮಿಸುತ್ತಿದ್ದು, 2023ರ ವೇಳೆಗೆ ಎಲ್ಲಾ 36 ರಫೇಲ್ ಯುದ್ಧ ವಿಮಾನಗಳು ಭಾರತದಲ್ಲಿ ಲ್ಯಾಂಡ್ ಆಗಲಿವೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel